ಬಿಗ್‌ಬಾಸ್ (Bigg Boss Kannada) ಮನೆ ದಿನದಿನಕ್ಕೆ, ಅಲ್ಲಲ್ಲ ಕ್ಷಣಕ್ಷಣಕ್ಕೂ ಕಾವೇರುತ್ತಿದೆ. ಸ್ಪರ್ಧಿಗಳ ಹನಿಮೂನ್ ಪೀರಿಯಡ್ ಮುಗಿದಂತಿದೆ. ಅಸಲಿ ಆಗ ಈಗ ಶುರುವಾಗಿದೆ. ಅದರ ನಿಚ್ಛಳ ಸುಳಿವು ಈಗಷ್ಟೇ ಬಿಡುಗಡೆಯಾಗಿರುವ ಪ್ರೊಮೊದಲ್ಲಿ ಹೆಚ್ಚಾಗಿಯೇ ಕಾಣಿಸುತ್ತಿದೆ.
ಮನೆಯೊಳಗೆ ಹೋದಾಗಿನಿಂದಲೂ ಸಂಗೀತಾ (Sangeetha Sringeri) ಮತ್ತು ಕಾರ್ತಿಕ್ (Karthik) ಚೆನ್ನಾಗಿದ್ದರು. ಪ್ರತಿಯೊಂದು ಸಂದರ್ಭದಲ್ಲಿಯೂ, ನಾಮಿನೇಷನ್ ಗಳಿಗೆಯಲ್ಲಿಯೂ ಅವರಿಬ್ಬರೂ ಪರಸ್ಪರ ಸಪೋರ್ಟೀವ್ ಆಗಿಯೇ ನಡೆದುಕೊಂಡಿದ್ದರು. ಅವರ ಆಪ್ತ ಸಂಬಂಧಕ್ಕೆ ಈಗ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.
‘ಎಲ್ಲರೂ ಒಂದ್ ಕಡೆ ಇದ್ರೆ ನೀನು ಮಾತ್ರ ಒಂದ್ ಕಡೆ ಇರ್ತೀಯಾ. ಹದಿನಾರು ಜನರಲ್ಲಿ ಬೇರೆ ಯಾರೂ ಕಾಣಿಸ್ಲಿಲ್ವಾ? ನಾನು ಏನ್ ಮಾಡಿದೀನಿ ನಿಂಗೆ?’ ಎಂದು ಒಂದು ಕಡೆ ವಿನಯ್ (Vinay)ಏರುದನಿಯಲ್ಲಿ ಕಾರ್ತಿಕ್ ಅವರನ್ನು ಪ್ರಶ್ನಿಸುತ್ತಿದ್ದಾರೆ.
ಇನ್ನೊಂದು ಕಡೆ ಸಂಗೀತಾ, ‘ಅವ್ರಿಗೆ ಯಾರೂ ಬೆರಳು ತೋರಿಸಬಾರದು. ತೋರಿಸಿದರೆ ಅವರು ಸಿಟ್ಟಿಗೇಳ್ತಾರೆ’ ಎಂದು ತಣ್ಣಗೇ ಕೇಳುತ್ತಿದ್ದಾರೆ. ‘ಸಗಣಿ ಮೇಲೆ ಕಾಲಿಟ್ರೆ ಏನು ಮಾಡ್ತೀಯಾ?’ ಇದು ವಿನಯ್ ಪ್ರಶ್ನೆ. ‘ಐ ನೋ… ಇಲ್ಲಿ ಯಾರೂ ನಮ್ಮೋರಲ್ಲ ಅಂತ’ ಇದು ಸಂಗೀತಾ ಕಾರ್ತಿಕ್‌ಗೆ ಹೇಳುತ್ತಿರುವ ಭಾವುಕ ನುಡಿ. ‘ಇಲ್ಲಾ ನಾನಾ.. ಇಲ್ಲಾ ಅವಳಾ?’ ಇದು ವಿನಯ್ ಖಡಕ್ ನುಡಿ.
‘ನೀವು ನನ್ ಜೊತೆ ಇರಿ, ಇಲ್ದೆ ಇರಿ… ಐ ಫೈಟ್ ಮೈ ಫೈಟ್’!’ ಎಂದು ಕೊನೆಯ ಮಾತು ಎಂಬಂತೆ ಹೇಳಿ ಸಂಗೀತಾ ಎದ್ದು ಹೋಗಿದ್ದಾರೆ. ‘ವಾರ್ ಡಿಕ್ಲೇರ್ ಮಾಡಿದ್ದಾರೆ. ವಾರ್ ಮಾಡೋಣ’ ಇದು ವಿನಯ್ ಕೊನೆಯ ಮಾತು.
ಇವರಿಬ್ಬರ ಮಾತುಗಳನ್ನೂ ಮೌನವಾಗಿ ಕೇಳಿಸಿಕೊಳ್ಳುತ್ತ ಕೂತ ಕಾರ್ತಿಕ್ ಮನಸ್ಸಿನೊಳಗಿನ ತೊಳಲಾಟ ಮುಖದಲ್ಲಿಯೂ ಎದ್ದು ಕಾಣಿಸುತ್ತಿದೆ. ಬೆಸ್ಟ್ ಫ್ರೆಂಡ್ ಸಂಗೀತಾ ಜೊತೆಗೆ ನಿಲ್ತಾರಾ? ಅಥವಾ ವಿನಯ್‌ಗೆ ಸಾಥ್ ಕೊಡ್ತಾರಾ? ಈ ಪ್ರಶ್ನೆಯಷ್ಟೇ ಈಗ ಉಳಿದಿದೆ. ಇಂತಹ ಸಾಕಷ್ಟು ರೋಚಕ ವಿಷಯಗಳನ್ನು JioCinemaದಲ್ಲಿ ಸೆರೆಹಿಡಿಯಲಾಗುತ್ತಿದೆ.
Web Stories