ಯಶ್‌ಗೂ ಮುನ್ನ ಹೊಸ ಸಿನಿಮಾ ಅನೌನ್ಸ್ ಮಾಡಿದ ಶ್ರೀನಿಧಿ ಶೆಟ್ಟಿ

Public TV
1 Min Read
srinidhi shetty

ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಶ್‌ಗೂ (Yash)  ಮುನ್ನ ಹೊಸ ಚಿತ್ರದ ಬಗ್ಗೆ ಶ್ರೀನಿಧಿ ಶೆಟ್ಟಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಕೆಜಿಎಫ್ 2 ರಿಲೀಸ್ ಬಳಿಕ ಈಗ ಹೊಸ ಚಿತ್ರದ ಮೂಲಕ ಮೋಡಿ ಮಾಡಲು ನಟಿ ಸಜ್ಜಾಗಿದ್ದಾರೆ.

srinidhi shetty

ಕೆಜಿಎಫ್ 2 (KGF 2) ಸಿನಿಮಾ ಸೂಪರ್ ಸಕ್ಸಸ್ ಕಂಡ ಮೇಲೆ ಯಶ್ ಏನ್ಮಾಡ್ತಿದ್ದಾರೆ? ಯಾವಾಗ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡ್ತಾರೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಹೀಗಿರುವಾಗ ಯಶ್ ನಾಯಕಿ ಶ್ರೀನಿಧಿ, ಕನ್ನಡ ಬಿಟ್ಟು ತೆಲುಗು ಸಿನಿಮಾವೊಂದನ್ನ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ರಾಷ್ಟ್ರಪತಿ ಮುರ್ಮು ಅವರಿಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

‘ತೆಲುಸು ಕದಾ’ (Telusu Kada) ಎಂಬ ಚಿತ್ರಕ್ಕೆ ಶ್ರೀನಿಧಿ ಹೀರೋಯಿನ್ ಆಗಿದ್ದಾರೆ. ಸ್ಪೆಷಲ್ ಪ್ರೋಮೋ ಶೇರ್ ಮಾಡುವ ಮೂಲಕ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ನೀರಜ್ ಕೋನಾ ಈಗ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ‘ಡಿಜೆ ಟಿಲ್ಲು’ ಹೀರೋ ಸಿದ್ದುಗೆ ಶ್ರೀನಿಧಿ ನಾಯಕಿಯಾಗಿದ್ದಾರೆ.

ಶ್ರೀನಿಧಿ ಅವರ ‘ತೆಲುಸು ಕದಾ’ ಎಂಬುದು ಮೊದಲ ತೆಲುಗು ಚಿತ್ರವಾಗಿದ್ದು, ಮತ್ತೊಬ್ಬ ನಟಿ ಈಗ ಕನ್ನಡದಿಂದ ತೆಲುಗಿಗೆ ಎಂಟ್ರಿ ಕೊಡ್ತಿದ್ದಾರೆ. ಈ ಹಿಂದೆ ‘ಕೆಜಿಎಫ್’ (KGF) ಚಿತ್ರದ ನಂತರ ಚಿಯಾನ್ ವಿಕ್ರಮ್ ಜೊತೆ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದರು. ಇದೀಗ ಕೆಜಿಎಫ್ 2 ಬಳಿಕ ತೆಲುಗಿನತ್ತ ನಟಿ ಮುಖ ಮಾಡಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article