ಸಿಕ್ಸ್‌ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ

Public TV
2 Min Read
rohit sharma 2

ಅಹಮದಾಬಾದ್‌: ನಾಯಕ ರೋಹಿತ್‌ ಶರ್ಮಾ (Rohit Sharma) ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ ಭಾರತ (Team India) ಪರ ದಾಖಲೆ (Record) ಬರೆದಿದ್ದಾರೆ.

ಭಾರತದ ಪರ ಏಕದಿನ ಪಂದ್ಯದಲ್ಲಿ 300ಕ್ಕೂ ಅಧಿಕ ಸಿಕ್ಸರ್‌ (Sixer) ಸಿಡಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ರೋಹಿತ್‌ ಶರ್ಮಾ ಪಾತ್ರರಾಗಿದ್ದಾರೆ.

ಪಾಕ್‌ ವಿರುದ್ಧದ ವಿಶ್ವಕಪ್‌ ಕ್ರಿಕೆಟ್‌ (World Cup Cricket) ಪಂದ್ಯದಲ್ಲಿ 3ನೇ ಸಿಕ್ಸರ್‌ ಸಿಡಿಸುವ ಮೂಲಕ ಈ ದಾಖಲೆಯನ್ನು ಬರೆದಿದ್ದಾರೆ. ಭಾರತದ ಪರ ಇಲ್ಲಿಯವರೆಗೆ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆ ಹೆಲಿಕಾಪ್ಟರ್‌ ಶಾಟ್‌ ಖ್ಯಾತಿಯ ಧೋನಿ (MS Dhoni) ಹೆಸರಿನಲ್ಲಿತ್ತು. ಧೋನಿ ಇಲ್ಲಿಯವರೆಗೆ 299 ಸಿಕ್ಸ್‌ ಹೊಡೆದಿದ್ದಾರೆ.   ಇದನ್ನೂ ಓದಿ: Record… Record… Record: ಇಂಡೋ-ಪಾಕ್‌ ಕದನದಲ್ಲಿ ಎಲ್ಲಾ ದಾಖಲೆ ಉಡೀಸ್‌!

Dhoni Yuvi

ವಿಶ್ವ ಕ್ರಿಕೆಟ್‌ನಲ್ಲಿ ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ದಾಖಲೆ ಪಾಕ್‌ ಆಟಗಾರ ಶಾಹೀದ್‌ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 351 ಸಿಕ್ಸ್‌ ಸಿಡಿಸಿದ್ದರೆ ವಿಂಡೀಸ್‌ ಆಟಗಾರ ಕ್ರಿಸ್‌ಗೇಲ್‌ 331 ಸಿಕ್ಸ್‌ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಅಫ್ಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಸಿಕ್ಸ್‌ ಸಿಡಿಸುವ ಮೂಲಕ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಬ್ಯಾಟರ್‌ ಎಂದು ವಿಶ್ವದಾಖಲೆ ಬರೆದಿದ್ದಾರೆ.

ಕ್ರಿಸ್‌ಗೇಲ್‌ 551 ಇನ್ನಿಂಗ್ಸ್‌ ಆಡಿ 553 ಸಿಕ್ಸ್‌ ಸಿಡಿಸಿದ್ದರೆ ರೋಹಿತ್‌ ಶರ್ಮಾ 473 ಇನ್ನಿಂಗ್ಸ್‌ ಆಡಿ ಈ ದಾಖಲೆ ಮುರಿದಿದ್ದರು. ಸದ್ಯ ರೋಹಿತ್‌ ಶರ್ಮಾ ಟೆಸ್ಟ್‌ನಲ್ಲಿ 77 ಸಿಕ್ಸ್‌, ಏಕದಿನದಲ್ಲಿ 303 ಸಿಕ್ಸ್‌, ಟಿ20 ಮಾದರಿಯಲ್ಲಿ 182 ಸಿಕ್ಸ್‌ ಸೇರಿ ಒಟ್ಟು 562 ಸಿಕ್ಸ್‌ ಹೊಡೆದ್ದಾರೆ. ಇದನ್ನೂ ಓದಿ: 1 ಲಕ್ಷ + ಅಭಿಮಾನಿಗಳ ಮುಂದೆ ಪಾಕ್‌ ಆಟಗಾರನನ್ನು ಟ್ರೋಲ್‌ಗೈದ ಕೊಹ್ಲಿ

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ 63 ಎಸೆತಗಳಲ್ಲಿ 86 ರನ್‌ ಚಚ್ಚಿದ್ದರು. ಈ ಸೊಗಸಾದ ಇನ್ನಿಂಗ್ಸ್‌ನಲ್ಲಿ 6 ಸಿಕ್ಸ್‌, 6 ಬೌಂಡರಿಯನ್ನು ಬ್ಯಾಟ್‌ನಿಂದ ಸಿಡಿಸಿದ್ದರು.

 
Web Stories

Share This Article