ಆಸೀಸ್‌ ವಿರುದ್ಧ 134 ರನ್‌ಗಳ ಭರ್ಜರಿ ಜಯ – ಮೊದಲ ಸ್ಥಾನಕ್ಕೆ ದ.ಆಫ್ರಿಕಾ ಜಿಗಿತ

Public TV
2 Min Read
SOUTH AFRICA 1

ಲಕ್ನೋ: ಐದು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಆಸ್ಟ್ರೇಲಿಯಾ (Australia) ವಿಶ್ವಕಪ್‌ ಕ್ರಿಕೆಟ್‌ನ (World Cup Cricket) ಎರಡನೇ ಪಂದ್ಯದಲ್ಲೂ ಹೀನಾಯವಾಗಿ ಸೋತಿದೆ. ಕ್ವಿಂಟಾನ್‌ ಡಿ ಕಾಕ್‌ ಅವರ ಶತಕ ಮತ್ತು ಬೌಲರ್‌ಗಳ ಮಾರಕ ಬೌಲಿಂಗ್‌ನಿಂದ ದಕ್ಷಿಣ ಆಫ್ರಿಕಾ (South Africa) 134 ರನ್‌ಗಳ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 7 ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 40.5 ಓವರ್‌ಗಳಲ್ಲಿ 177 ರನ್‌ಗಳಿಗೆ ಸರ್ವಪತನ ಕಂಡಿತು.

ಆಸ್ಟ್ರೇಲಿಯಾ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. 70 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್‌ ಕಳೆದುಕೊಂಡಿತ್ತು. ಇದನ್ನೂ ಓದಿ: World Cup 2023: ಗುಡ್‌ನ್ಯೂಸ್‌ – ಪಾಕ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಲಿದ್ದಾರೆ ಗಿಲ್‌

Quinton de Kock

ಕಠಿಣ ಪರಿಸ್ಥಿತಿಯಲ್ಲಿ ಮಾರ್ನಸ್‌ ಲಾಬುಶೇನ್ 46 ರನ್‌ (74 ಎಸೆತ, 3 ಬೌಂಡರಿ), ಮಿಷೆಲ್‌ ಸ್ಟಾರ್ಕ್‌ 27 ರನ್‌ (51 ಎಸೆತ, 3 ಬೌಂಡರಿ), ನಾಯಕ ಪ್ಯಾಟ್‌ ಕಮ್ಮಿನ್ಸ್‌ 22 ರನ್‌(21 ಎಸೆತ, 4 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಇದನ್ನೂ ಓದಿ: ದುಷ್ಮನ್‌ ಅಲ್ಲ ದೋಸ್ತಿ – ಕೊಹ್ಲಿಯನ್ನು ಹಾಡಿ ಹೊಗಳಿದ ಗಂಭೀರ್‌, ಫ್ಯಾನ್ಸ್‌ ವಿರುದ್ಧ ಮತ್ತೆ ಗರಂ

ವೇಗದ ಬೌಲರ್‌ ಕಗಿಸೋ ರಬಡಾ 3 ವಿಕೆಟ್‌ ಪಡೆದರೆ ಜನ್‌ಸೆನ್‌, ಕೇಶವ್‌ ಮಹರಾಜ್‌, ತಬ್ರೇಜ್‌ ಶಂಶಿ ತಲಾ 2 ವಿಕೆಟ್‌ ಪಡೆದರು. ಲುಂಗಿ ಎನ್‌ಗಿಡಿ 1 ವಿಕೆಟ್‌ ಕಿತ್ತರು.

 

ಬ್ಯಾಟಿಂಗ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಮೊದಲ ವಿಕೆಟಿಗೆ ಕೀಪರ್‌ ಕ್ವಿಂಟನ್‌ ಡಿ ಕಾಕ್‌ (Quinton de Kock ) ಮತ್ತು ತೆಂಬಾ ಬವುಮಾ 108 ರನ್‌ ಜೊತೆಯಾಟವಾಡುವ ಮೂಲಕ ಭದ್ರ ಇನ್ನಿಂಗ್ಸ್‌ ಕಟ್ಟಿದರು. ಆಡೆನ್‌ ಮ್ಯಾಕ್ರಮ್‌ 56 ರನ್‌ (44 ಎಸೆತ, 7 ಬೌಂಡರಿ, 1 ಸಿಕ್ಸರ್‌) ಹೊಡೆದರೆ ಹೊಡೆದರೆ ಕ್ವಿಂಟನ್‌ ಡಿ ಕಾಕ್‌ ಈ ವಿಶ್ವಕಪ್‌ನಲ್ಲಿ ಎರಡನೇ ಶತಕ ಸಿಡಿಸಿದರು. 109 ರನ್‌( 106 ಎಸೆತ, 8 ಬೌಂಡರಿ, 5 ಸಿಕ್ಸ್‌) ಹೊಡೆದು ತಂಡದ ಮೊತ್ತ 197  ಗಳಿಸಿದ್ದಾಗ ಮೂರನೇಯವರಾಗಿ ಔಟಾದರು.

ಮೊದಲ ಸ್ಥಾನ:
134 ರನ್‌ಗಳ ಭರ್ಜರಿ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ 2.360 ನೆಟ್‌ ರನ್‌ ರೇಟ್‌ನೊಂದಿಗೆ ಮೊದಲ ಸ್ಥಾನಕ್ಕೆ ಜಿಗಿದಿದೆ. ತಲಾ 4 ಅಂಕ ಪಡೆದಿದ್ದರೂ ನೆಟ್‌ ರನ್‌ರೇಟ್‌ ಉತ್ತಮವಾಗಿರುವ ಇರುವ ಕಾರಣ ನ್ಯೂಜಿಲೆಂಡ್‌ (1.958), ಭಾರತ (1.500), ಪಾಕಿಸ್ತಾನ(0.927) ಅನುಕ್ರಮವಾಗಿ ನಂತರದ ಸ್ಥಾನ ಪಡೆದಿದೆ. ಎರಡು ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ 9ನೇ ಸ್ಥಾನಕ್ಕೆ ಕುಸಿದಿದೆ.

 

Web Stories

Share This Article