ಡ್ಯಾನ್ಸ್ ವಿಚಾರಕ್ಕೆ ಗಲಾಟೆ- ಓರ್ವ ಸಾವು, ಮೃತನ ತಾಯಿಗೂ ಚಾಕು ಇರಿತ

Public TV
1 Min Read
MURDER

ಬೆಂಗಳೂರು: ಗಣಪತಿ ಬಿಡುವಾಗ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ ಓರ್ವನ ಕೊಲೆಯಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಶ್ರೀನಿವಾಸ್ ಕೊಲೆಯಾದ ಯುವಕ. ಈತನ ಕೊಲೆಯ ಮೂಲಕ ಎರಡು ಗುಂಪುಗಳ ಜಗಳ ಅಂತ್ಯವಾಗಿದೆ. ಗಣಪತಿ ಬಿಡುವಾಗ ಯಾಕ್ರೋ ಇಲ್ಲಿ ಡ್ಯಾನ್ಸ್ ಮಾಡ್ತೀರಾ ಅಂದಿದ್ದಕ್ಕೆ ಗಲಾಟೆ ನಡೆದಿದ್ದು, ಲಾಂಗ್ ಮಚ್ಚುಗಳಿಂದ ಹೊಡೆದಾಟ ಮಾಡಿಕೊಂಡಿವೆ.

ಗಲಾಟೆಯಲ್ಲಿ ರಂಜಿತ್ ಎಂಬವನಿಗೂ ಗಂಭೀರ ಗಾಯಗಳಾಗಿದ್ದು, ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಲಾಟೆ ಬಿಡಿಸಲು ಬಂದ ಮೃತ ಶ್ರೀನಿವಾಸ್ ತಾಯಿಗೂ ಗ್ಯಾಂಗ್ ಚಾಕುವಿನಿಂದ ಇರಿದಿದೆ. ಇವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಊಟಿಯಂತಾದ ಬೆಂಗಳೂರು- 4 ದಿನ ಮಳೆ ಸಾಧ್ಯತೆ

GANESHA

ಹಿಂದಿನ ತಿಂಗಳು ನಡೆದ ಗಣೇಶ ವಿಸರ್ಜನಾ (Ganesha Festival) ಸಮಯದಲ್ಲಿ ಡ್ರಾನ್ಸ್ ವಿಚಾರವಾಗಿ ಗಲಾಟೆಯಾಗಿತ್ತು. ಶ್ರೀನಿವಾಸ್ ಕಡೆಯವರಿಗೆ ಇಲ್ಲಿ ನೀವು ಡ್ಯಾನ್ಸ್ ಮಾಡಬೇಡಿ ಅಂತಾ ವಾರ್ನ್ ಮಾಡಿದ್ದರು. ಭಾನುವಾರ ಇವರು ಗಣಪತಿ ಬಿಡುವಾಗ ಶ್ರೀನಿವಾಸ್ ಏರಿಯಾದಲ್ಲಿ ಡ್ಯಾನ್ಸ್ ಮಾಡಿದ್ದರು. ಈ ಗಣೇಶ ಬಲಿ ಕೇಳುತ್ತೆ ಅಂತಾ ಕೂಗಿದ್ದಾರೆ. ಆಗ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.

ಗಲಾಟೆಯಲ್ಲಿ ಲಾಂಗು ಮಚ್ಚು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಗುಂಪು ಗಲಾಟೆ ಮಾಡಬೇಕು ಅಂತಾ ರೆಡಿಯಾಗಿಯೇ ಬಂದಿತ್ತು. ಗಲಾಟೆ ಸಂದರ್ಭದಲ್ಲಿ ಓರ್ವ ರೌಡಿಶೀಟರ್ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಘಟನೆ ಸಂಬಂಧ ಅಡುಗೋಡಿ ಪೊಲೀಸ್ ಠಾಣೆಯಲ್ಲಿ (Adugodi Police Station) ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆಬೀಸಿದ್ದಾರೆ.

Web Stories

Share This Article