ಬೆಂಗಳೂರು: ಕುಡಿದು ಹಾಳಾಗಿ ಹೋಗಿ ಅನ್ನೋದು ಕಾಂಗ್ರೆಸ್‌ನ (Congress) 6ನೇ ಗ್ಯಾರಂಟಿ ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ಹರಿಹಾಯ್ದರು.
ಹಳ್ಳಿ ಹಳ್ಳಿಗೂ ಮದ್ಯದ ಲೈಸೆನ್ಸ್ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಂಡತಿಗೆ ಕೊಟ್ಟ ಎರಡು ಸಾವಿರ ವಾಪಸ್ ಪಡೆಯಲು ಊರೂರಿಗೆ ಮದ್ಯದಂಗಡಿ ಕೊಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ – ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ
ಮದ್ಯದ ವಿಚಾರದಲ್ಲಿ ನೀ ಅತ್ತಂಗೆ ಮಾಡು ನಾನು ಸತ್ತಂಗೆ ಮಾಡ್ತೀನಿ ಅನ್ನೋ ನಿಲುವು. ಹಳ್ಳಿಗಳಿಗೆ ಈಗಾಗಲೇ ಅನಧಿಕೃತವಾಗಿ ಮದ್ಯ ಪೂರೈಕೆ ಆಗ್ತಿದೆ. ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೂ ಇವರು ತಮ್ಮನ್ನು ಗಾಂಧಿವಾದಿಗಳು ಅಂತಾರೆ. ಈ ಗಾಂಧಿವಾದಿಗಳು ಊರೂರಿಗೆ ಮದ್ಯದಂಗಡಿ ಲೈಸೆನ್ಸ್ ಕೊಡ್ತಿದಾರೆ. ಇದು ಆರನೇ ಗ್ಯಾರಂಟಿ ಇರಬೇಕು ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಸರ್ಕಾರಕ್ಕೆ ಹೊರಗಿನ ಶಕ್ತಿಗಳಿಂದ ಪರಿಣಾಮ ಆಗಲ್ಲ. ಹೊರಗಿನ ಶಕ್ತಿಗಳಿಂದ ಅವರ ಸರ್ಕಾರ ಬೀಳಿಸುವುದು ಕಷ್ಟ. ಆದರೆ ಒಳಗಡೆ ಏನು ಬೇಕಾದರೂ ಆಗಬಹುದು. ಒಳಗಡೆ ಬಂಡಾಯ ಎದ್ದರೆ ಅದು ನಮ್ ಕೈಯಲ್ಲಿ ಇಲ್ಲ. ಕಾಂಗ್ರೆಸ್‌ಗೆ ಬಿಜೆಪಿ, ಜೆಡಿಎಸ್‌ನಿಂದ ಅಪಾಯ ಇಲ್ಲ. ಅಪಾಯ ಇದ್ದರೆ ಅದು ಒಳಗಡೆಯಿಂದ ಮಾತ್ರ. ಹೊರಗಡೆಯಿಂದ ಅಪಾಯ ಇಲ್ಲ. ಸರ್ಕಾರದ ಪತನ ಒಳಗಿಂದಲೇ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಮನ್‌ಮುಲ್ ಮೆಗಾ ಡೈರಿ ಘಟಕದಲ್ಲಿ ಅಗ್ನಿ ಅವಘಡ
ಇಸ್ರೇಲ್ ಮೇಲೆ ದಾಳಿ ಕುರಿತು ಮಾತನಾಡಿ, ಹಮಾಸ್ ಹೆಸರಿನ ಮುಸ್ಲಿಂ ಉಗ್ರಗಾಮಿಗಳು ಯೋಜನಾಬದ್ಧವಾಗಿ ಇಸ್ರೇಲ್ ಮೇಲೆ ದಾಳಿ ಮಾಡಿವೆ. ಇಷ್ಟಾದ ಮೇಲೂ ಶಾಂತಿಗಾಗಿ ಇಸ್ಲಾಂ ಅಂತಾರೆ. ಹೀಗಂತ ಅವರು ಹೇಳ್ತಾರೆ ನಾವು, ನೀವು ನಂಬಬೇಕು. ಜಗತ್ತಿನ 90% ಭಾಗ ಉಗ್ರವಾದಿ ಚಟುವಟಿಕೆಗಳು ಇಸ್ಲಾಂ ಹೆಸರಲ್ಲಿ ನಡೆದಿವೆ. 10% ಭಾಗ ಎಡಪಂಥ ಉಗ್ರ ಚಟುವಟಿಕೆಗಳು ನಡೆದಿವೆ. ಇವರಿಬ್ಬರದ್ದೇ ಅತೀ ದೊಡ್ಡ ಪಾಲು ಇರೋದು. ಯಾಕೆ ಹೀಗೆ ಅಂತ ಗಂಭೀರ ಆಲೋಚನೆ ಆಗಬೇಕಿದೆ. ಭಾರತ ಇವರ ಉಪಟಳಕ್ಕೆ ಬಹಳ ದೊಡ್ಡ ನಷ್ಟ ಅನುಭವಿಸಿದೆ. ಈಗ ಬಲಾಢ್ಯ ಸರ್ಕಾರ ಇದೆ ಅಂತ ದೇಶದಲ್ಲಿ ಉಗ್ರ ಚಟುವಟಿಕೆ ನಿಗ್ರಹವಾಗಿದೆ ಎಂದು ಸಮರ್ಥಿಸಿಕೊಂಡರು.
ಮುಂದೆ ಯಾವಾಗ ಬೇಕಾದರೂ ತಲೆಯೆತ್ತಬಹುದು. ಇದು ಒಂದು ರೀತಿ ರಕ್ತ ಬೀಜಾಸುರನ ಸಂತತಿ ಥರ. ಮೂಲ ಪ್ರಚೋದನೆ ಬಗ್ಗೆ ಆಲೋಚಿಸಬೇಕಿದೆ. ಭಾರತ ಸೇರಿ ಅನೇಕ ದೇಶಗಳು ಇಸ್ರೇಲ್ ದಾಳಿಯನ್ನು ಖಂಡಿಸಿವೆ. ನಮ್ಮ ಪ್ರಧಾನಿ ಇಸ್ರೇಲ್ ಜತೆ ನಿಲ್ಲೋದಾಗಿ ಹೇಳಿರೋದು ಸಕಾರಾತ್ಮಕ ಕ್ರಮ. ಇಂಥ ಭಯೋತ್ಪಾದನ ಚಟುವಟಿಕೆ ಖಂಡಿಸುವಲ್ಲೂ ಮೀನಮೇಷ ಎಣಿಸುವ ಕಾಲ ಇತ್ತು. ಅಲ್ಲೂ ಲಾಭ ನಷ್ಟ ಎಣಿಸುವ ಪರಿಸ್ಥಿತಿ ಇತ್ತು. ಈಗ ರಾಜಕೀಯ ಲಾಭ, ನಷ್ಟದ ಲೆಕ್ಕಾಚಾರ ಹಾಕುವ ಪರಿಸ್ಥಿತಿ ಇಲ್ಲ. ಇಂಥ ಭಯೋತ್ಪಾದಕ ಚಟುವಟಿಕೆಗಳ ಮೂಲ ಬೇರು ಕಿತ್ತು ಹಾಕುವ ಕೆಲಸ ಆಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ: ಬೊಮ್ಮಾಯಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]