ಅತ್ತಿಬೆಲೆ ಪಟಾಕಿ ದುರಂತ – ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ

Public TV
1 Min Read
siddaramaiah dk shivakumar attibele 1

ಆನೇಕಲ್: ಅತ್ತಿಬೆಲೆಯಲ್ಲಿ (Attibele) ನಡೆದ ಭೀಕರ ಪಟಾಕಿ ದುರಂತದಲ್ಲಿ (Fireworks Tragedy) ಇಲ್ಲಿಯವರೆಗೆ 14 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ದುರ್ಘಟನೆ ನಡೆದ ಸ್ಥಳಕ್ಕೆ ಸಿಎಂ ಡಿಸಿಎಂ ಆಗಮಿಸಿ ಸ್ಥಳ ಪರಿಶೀಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬಳಸುವ ಶೂ ಧರಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಎಂ, ಡಿಸಿಎಂಗೆ ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಸಾಥ್ ನೀಡಿದ್ದಾರೆ.

siddaramaiah dk shivakumar attibele

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಪಟಾಕಿ ಸಂಗ್ರಹಕ್ಕೆ ಲೈಸೆನ್ಸ್ ಇರಲಿಲ್ಲ. ಕೇವಲ ಬೇರೆಡೆಗೆ ರವಾನಿಸುವ ಪ್ರೊಸೆಸಿಂಗ್ ಯೂನಿಟ್‌ಗೆ ಮಾತ್ರ ಪರವಾನಗಿ ನೀಡಲಾಗಿತ್ತು. ಆದರೆ ಮಾಲೀಕ ಭಾರೀ ಪ್ರಮಾಣದ ಪಟಾಕಿ ಸಂಗ್ರಹಿಸುವ ದಾಸ್ತಾನು ಮಳಿಗೆಯನ್ನಾಗಿ ಬಳಕೆ ಮಾಡುತ್ತಿದ್ದ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್

ಪಟಾಕಿ ದುರಂತದಲ್ಲಿ ತಮಿಳುನಡು ಮೂಲದ ಗಿರಿ ಬಿನ್ ವೇಡಿಯಪ್ಪನ್, ಸಚೀನ್ ಬಿನ್ ಲೇಟ್ ವೇಡಿಯಪ್ಪನ್, ವಿಜಯರಾಘವನ್, ವಿಳಂಬರತಿ ಬಿನ್ ಸೆಂದಿಲ್, ಆಕಾಶ ಬಿನ್ ರಾಜಾ, ವೆಡಿಯಪ್ಪನ್, ಆದಿಕೇಶವ ಬಿನ್ ಪೆರಿಯಾಸ್ವಾಮಿ, ಪ್ರಕಾಶ್ ಬಿನ್ ರಾಮು, ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್, ಪ್ರಭಾಕರನ್ ಬಿನ್ ಗೋಪಿನಾಥ್, ನಿತೀಶ್ ಬಿನ್ ಮೇಘನಾಥ್, ಸಂತೋಷ್ ಬಿನ್ ಕುಮಾರ್ ಮೃತಪಟ್ಟಿದ್ದು, ಇನ್ನೊಬ್ಬನ ಹೆಸರು ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: ಮನ್‌ಮುಲ್ ಮೆಗಾ ಡೈರಿ ಘಟಕದಲ್ಲಿ ಅಗ್ನಿ ಅವಘಡ

Web Stories

Share This Article