ಹಮಾಸ್ ಉಗ್ರರಿಂದ ಮಗಳ ಬೆತ್ತಲೆ ಮೆರವಣಿಗೆ- ಸಾರ್ವಜನಿಕರಲ್ಲಿ ತಾಯಿ ಮನವಿ

Public TV
2 Min Read
Israel Woman mother

ಟೆಲ್ ಅವಿವ್: ಇಸ್ರೇಲ್‌ನ ಯುವತಿಯೊಬ್ಬಳ (Israel Woman) ಬೆತ್ತಲೆ ದೇಹವನ್ನು ಹಮಾಸ್ ಉಗ್ರರು (Hamas Militants) ತೆರೆದ ಟ್ರಕ್‌ನಲ್ಲಿ ಮೆರವಣಿಗೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಕುರಿತು ಆಕೆಯ ತಾಯಿ ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಇಸ್ರೇಲ್ (Israel) ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ದಾಳಿ ವೇಳೆ ಹಮಾಸ್ ಉಗ್ರರು ಇಸ್ರೇಲ್ ಯುವತಿಯ ಬೆತ್ತಲೆಯನ್ನಾಗಿ ಮಾಡಿ ತೆರೆದ ಟ್ರಕ್‌ನಲ್ಲಿ (Open Truck) ಮೆರವಣಿಗೆ ಮಾಡಿ ಕ್ರೌರ್ಯ ಮೆರೆದಿದ್ದಾರೆ. ದಾಳಿ ವೇಳೆ ಹುತಾತ್ಮರಾದ ಅಮಾಯಕ ನಾಗರಿಕರ ಮೃತದೇಹಗಳನ್ನು ತೆರೆದ ಟ್ರಕ್‌ನಲ್ಲಿ ಇರಿಸಿ ಮೆರವಣಿಗೆ ಮಾಡಿದ್ದು, ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ತೆರೆದ ಟ್ರಕ್‌ನಲ್ಲಿ ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿದ ಹಮಾಸ್ ಉಗ್ರರು

ಪ್ಯಾಲೇಸ್ಟಿನಿಯನ್ ಭಯೋತ್ಪಾದಕರು ಗಾಜಾಕ್ಕೆ ಓಡಿಸುತ್ತಿದ್ದ ಪಿಕ್-ಅಪ್ ಟ್ರಕ್‌ನ ಹಿಂಭಾಗದಲ್ಲಿ ಶನಿ ಲೌಕ್ ಅವರ ದೇಹವನ್ನು ಮೆರವಣಿಗೆ ಮಾಡುತ್ತಿದ್ದ ವೀಡಿಯೋವನ್ನು ನೋಡಿದ ಮಹಿಳೆಯ ತಾಯಿ ವೀಡಿಯೋದಲ್ಲಿ ಇರುವುದು ತಮ್ಮ ಮಗಳೆಂದು ದೃಢಪಡಿಸಿದ್ದಾರೆ. ಅಲ್ಲದೇ ಮಗಳ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಸಾರ್ವಜನಿಕರ ಬಳಿ ಅಂಗಲಾಚಿದರು. ಇದನ್ನೂ ಓದಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ – 300ಕ್ಕೂ ಹೆಚ್ಚು ಜನ ಸಾವು

ಪ್ಯಾಲೆಸ್ಟಿನಿಯನ್ ನಾಗರೀಕರು ಮಹಿಳೆಯ ಮೃತದೇಹವನ್ನು ನಿಂದಿಸಿ ಬಳಿಕ ಉಗುಳುವುದನ್ನು ಈ ವೀಡಿಯೋದಲ್ಲಿ ನೋಡಬಹುದು. ನಂತರ ಕಪಾಳಮೋಕ್ಷ ಮಾಡುವುದನ್ನು ಸಹಾ ವೀಡಿಯೋದಲ್ಲಿ ಕಾಣಬಹುದು. ಕ್ಷಿಪಣಿ ದಾಳಿಯ ಬಳಿಕ ಪ್ಯಾಲೆಸ್ಟಿನಿಯಾದವರು ದಕ್ಷಿಣ ಇಸ್ರೇಲ್‌ಗೆ ನುಸುಳಿದ್ದು, ತೆರೆದ ಟ್ರಕ್‌ಗಳಲ್ಲಿ ಬೀದಿ ಬೀದಿ ಸುತ್ತುತ್ತಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ನಾಗರಿಕರನ್ನು ಕೊಲ್ಲುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇಸ್ರೇಲ್, ಪ್ಯಾಲೆಸ್ಟೈನ್‌ ಮಧ್ಯೆ ಕಾದಾಟ ಯಾಕೆ? 6 ದಿನ ನಡೆದ ಯುದ್ಧದಲ್ಲಿ ಏನಾಯ್ತು? – ಇಲ್ಲಿದೆ ಪೂರ್ಣ ಮಾಹಿತಿ

Web Stories

Share This Article