ಮೈಸೂರು: ವಿವಾದಕ್ಕೆ ಕಾರಣವಾಗಿರುವ ಮಹಿಷ ದಸರಾ (Mahisha Dasara) ವಿಚಾರ ಈಗ ಮತ್ತೆ ಸುದ್ದಿಯಾಗಿದೆ. ಮಹಿಷ ದಸರಾ ಆಚರಣೆಗೆ 50 ವರ್ಷ ಎಂದು ದಿಢೀರನೇ ಇತಿಹಾಸ ಸೃಷ್ಟಿಸಲಾಗಿದೆ.
ಹೌದು, ವಿಶ್ವವಿಖ್ಯಾತ ಮೈಸೂರು ದಸರಾಗೆ (Mysuru Dasara) ಪರ್ಯಾಯವೆಂಬಂತೆ ಇತ್ತೀಚಿನ ವರ್ಷಗಳಲ್ಲಿ ಪ್ರಗತಿಪರರ ನೇತೃತ್ವದಲ್ಲಿ ಮಹಿಷ ದಸರಾ ಆಚರಣೆ ನಡೆಸಲಾಗುತ್ತಿದೆ. ಕಳೆದ ವರ್ಷ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಿರಲಿಲ್ಲ. ಆದರೆ ಈ ವರ್ಷ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ವೇದಿಕೆ ಸಿದ್ಧವಾಗುತ್ತಿದೆ. 50ನೇ ವರ್ಷದ ಮಹಿಷ ದಸರಾ ಆಚರಣೆ ಎಂದು ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಜಂಬೂ ಸವಾರಿಗೆ ಬರಲಿದ ಗತವೈಭವ – ರಾಜ ಪೋಷಾಕಿನಲ್ಲಿ ಪೊಲೀಸರು
ಮಹಿಷ ದಸರಾ ಆಚರಣೆ ಸಮಿತಿಯಿಂದ ಈ ಪೋಸ್ಟರ್ ಬಿಡುಗಡೆ ಮಾಡಿದೆ. ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ಈ ಪೋಸ್ಟರ್ ಹರಿದಾಡುತ್ತಿದೆ. ಈ ಬಾರಿ ಚಾಮುಂಡಿ ಬೆಟ್ಟದಲ್ಲೇ ಮಹಿಷ ದಸರಾಗೆ ಚಾಲನೆ ನೀಡಲು ಮೈಸೂರು ದಸರಾ ಆಚರಣಾ ಸಮಿತಿ ಸಜ್ಜಾಗಿದೆ. ವಿರೋಧಗಳನ್ನು ಬದಿಗೊತ್ತಿ ನಿಗದಿತ ಸ್ಥಳದಲ್ಲೇ ಮಹಿಷ ದಸರಾ ಆಚರಿಸಲು ಸಿದ್ಧವಾಗಿದೆ.
ಆಹ್ವಾನ ಪತ್ರಿಕೆಯಲ್ಲಿ ಚಾಮುಂಡಿ ಬೆಟ್ಟದ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಬಗ್ಗೆ ಮಾಹಿತಿ ನೀಡಲಾಗಿದೆ. ಅಕ್ಟೋಬರ್ 13 ರಂದು ಮಹಿಷ ದಸರಾ ನಡೆಯಲಿದೆ. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: ಬಂದೇ ಬಿಡ್ತು ದಸರಾ – ಮೈಸೂರು ಅರಮನೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ?
ಅಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬೆಂಬಲಿಗರು ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಸಂಸದ ಪ್ರತಾಪ್ ಸಿಂಹ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಂದೇ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
2015 ರಲ್ಲಿ ಮಹಿಷ ದಸರಾ ವಿವಾದ ಪ್ರಾರಂಭವಾಯಿತು. ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯಾದ ಮೈಸೂರು ದಸರಾಗೆ ಕಪ್ಪುಚುಕ್ಕೆ ಎಂದು ಕೆಲವರು ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಹಿಷ ದಸರಾ ಪರವಾದಿಗಳು, ಮೈಸೂರು ಹಿಂದೆ ಮಹಿಷ ಮಂಡಲವಾಗಿತ್ತು. ಮೈಸೂರಿನ ಮೂಲಪುರುಷ ಮಹಿಷ. ಆತನನ್ನು ರಾಕ್ಷಸ ಎಂದು ಬಿಂಬಿಸಲಾಗುತ್ತಿದೆ. ಮಹಿಷನ ಮಹತ್ವವನ್ನು ಸಾರಲು ಹಾಗೂ ನಿಜವಾದ ಇತಿಹಾಸವನ್ನು ಹೇಳಲು ಮಹಿಷ ದಸರಾ ಆಚರಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]