ಮಳೆ ಕೊರತೆ – ಮೂರೇ ದಿನಕ್ಕೆ ಕೆಆರ್‌ಎಸ್ ಒಳಹರಿವಿನಲ್ಲಿ ತೀವ್ರ ಕುಸಿತ

Public TV
1 Min Read
KRS MANDYA 1

ಮಂಡ್ಯ: ಮಳೆಯ (Rain) ನಿರೀಕ್ಷೆಯಲ್ಲಿದ್ದ ಹಳೆ ಮೈಸೂರು ಭಾಗದ ಜನರಿಗೆ ಮತ್ತೆ ನಿರಾಸೆ ಉಂಟಾಗಿದೆ. ಕಾವೇರಿ ಜಲಾನಯನ (Cauvery River) ಪ್ರದೇಶದಲ್ಲಿ ಮಳೆ ನಿಂತ ಹಿನ್ನೆಲೆ ಮೂರೇ ದಿನಕ್ಕೆ ಕೆಆರ್‍ಎಸ್ (KRS) ಡ್ಯಾಂಗೆ ಒಳಹರಿವು ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಮೂಲಕ ಡ್ಯಾಂಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಗಣನೀಯ ಇಳಿಕೆ ಕಂಡಿದೆ.

11,800 ಕ್ಯೂಸೆಕ್‍ನಿಂದ 4,046 ಕ್ಯೂಸೆಕ್‍ಗೆ ಒಳಹರಿವು ಇಳಿಕೆಯಾಗಿದ್ದು, ಇದರಿಂದ ಮತ್ತೆ ಮಂಡ್ಯ ಜಿಲ್ಲೆಯ ಅನ್ನದಾತರು ಸೇರಿದಂತೆ ಕಾವೇರಿ ನೀರು ಆಶ್ರಯಿಸಿದ ಜನರಿಗೆ ತೀವ್ರ ಆಘಾತ ಉಂಟಾಗಿದೆ. ಒಳಹರಿವು ಹೆಚ್ಚಳದಿಂದ ಕೆಆರ್‌ಎಸ್‌ಗೆ 3 ಟಿಎಂಸಿ ನೀರು ಹರಿದು ಬಂದಿತ್ತು. ಸದ್ಯ ಡ್ಯಾಂ 101.80 ಅಡಿ ಭರ್ತಿಯಾಗಿದೆ. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ – ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಶಾಕ್‌

ಒಂದು ವೇಳೆ ಮಳೆ ಮುಂದುವರೆದರೆ ಬೆಳೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ದೂರಾಗುವ ನಿರೀಕ್ಷೆ ಜನರಲ್ಲಿತ್ತು. ಆದರೆ ಮೂರೇ ದಿನಕ್ಕೆ ಮಳೆರಾಯ ಕೈಕೊಟ್ಟಿದ್ದಾನೆ. ಇಂದರಿಂದ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ವಿವಾದ ಮುಂದುವರೆಯುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.

ಮತ್ತೊಂದೆಡೆ ರಾಜ್ಯ ಸರ್ಕಾರ ಹಾಗೂ ಕಾವೇರಿ ಪ್ರಾಧಿಕಾರದ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆಗಳು ಇಂದು ಸಹ ಮುಂದುವರಿದಿವೆ. 32ನೇ ದಿನಕ್ಕೆ ರೈತ ಹಿತರಕ್ಷಣಾ ಸಮಿತಿಯ ಸತ್ಯಾಗ್ರಹ ಕಾಲಿಟ್ಟಿದೆ. ಇಂದಿನ ಧರಣಿಯಲ್ಲಿ ಪತ್ರಕರ್ತರು ಭಾಗಿಯಾಗಿ ಸರ್ಕಾರದ ಮೇಲೆ ಒತ್ತಡ ಹಾಕಲಿದ್ದಾರೆ. ಕನ್ನಡ ಸೇನೆಯಿಂದಲೂ ಸಂಜಯ ಸರ್ಕಲ್‍ನಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅತ್ತ ಶ್ರೀರಂಗಪಟ್ಟಣದಲ್ಲೂ ಸಹ ಭೂಮಿ ತಾಯಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಇದನ್ನೂ ಓದಿ: ಜಂಬೂ ಸವಾರಿಗೆ ಬರಲಿದ ಗತವೈಭವ – ರಾಜ ಪೋಷಾಕಿನಲ್ಲಿ ಪೊಲೀಸರು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article