ಹಿಂದೂ ಹುಡುಗನ ಜೊತೆ ಎಂಗೇಜ್ ಆದ ಉರ್ಫಿ ಜಾವೇದ್?: ಫೋಟೋ ವೈರಲ್

Public TV
2 Min Read
Urfi Javed 2

ರೆಬರೆ ಬಟ್ಟೆಗಳ ಮೂಲಕವೇ ಸಾಕಷ್ಟು ಸದ್ದು ಮಾಡುವ ಉರ್ಫಿ ಜಾವೇದ್, ತಮ್ಮನ್ನು ಯಾರೂ ಮದುವೆ ಆಗಲು ಮುಂದೆ ಬರುತ್ತಿಲ್ಲ ಎಂದು ಪದೇ ಪದೇ ನೋವು ಹೇಳಿಕೊಳ್ಳುತ್ತಿದ್ದರು. ಈ ವಿಷಯದಲ್ಲಿ ತಮ್ಮ ಕುಟುಂಬ ಸಮೇತ ತನ್ನ ಅಳಲನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅವರದೊಂದು ಫೋಟೋ ವೈರಲ್ ಆಗಿದೆ.

Urfi Javed 1

ಹೌದು, ಹಿಂದೂ ಹುಡುಗನ ಜೊತೆ ಎಂಗೇಜ್ (Engagement) ಆಗಿರುವಂತೆ ಕಾಣುವ ಫೋಟೋವೊಂದು ವೈರಲ್ ಆಗಿದ್ದು, ಈ ಫೋಟೋ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಉರ್ಫಿ ಮೈತುಂಬಾ ಬಟ್ಟೆ ಹಾಕಿಕೊಂಡು ಹೋಮ ಕುಂಡದ ಮುಂದೆ ಕೂತಿದ್ದಾರೆ. ಹುಡುಗನ ಕೈಗೆ ಉಂಗುರ ತೊಡಿಸುವಂತೆ ಪೋಸ್ ನೀಡಿದ್ದಾರೆ. ಆದರೆ, ಆ ಹುಡುಗನ ಮುಖವನ್ನು ಮುಚ್ಚಲಾಗಿದೆ. ಹಾಗಾಗಿ ಅದು ಯಾವ ಫೋಟೋ ಎಂದು ನಿಖರವಾಗಿ ತಿಳಿಯುತ್ತಿಲ್ಲ. ಆದರೂ, ಅನೇಕರು ಉರ್ಫಿಗೆ ಅಭಿನಂದನೆ ಸಲ್ಲಿಸಿದ್ದಾರೆ.

urfi javed 2

ಇದೊಂದು ಅಂತರ್ಧಮಿಯ ವಿವಾಹವಾ? ಅಥವಾ ಹೋಮ ಕುಂಡದ ಮುಂದೆ ಉರ್ಫಿ ಕೂತು ಏನು ಮಾಡುತ್ತಿದ್ದಾರೆ? ಆ ಹುಡುಗನ ಕೈಗೆ ಕೊಡುತ್ತಿರುವ ವಸ್ತು ಯಾವುದು? ಸದ್ದಿಲ್ಲದೇ ಎಂಗೇಜ್ ಆಗಿದ್ದಾರಾ? ಅಥವಾ ಯಾವುದಾದರೂ ಜಾಹೀರಾತಿನ ಫೋಟೋ ಅದು ಇರಬಹುದಾ? ಹೀಗೆ ಹತ್ತಾರು ಪ್ರಶ್ನೆಗಳನ್ನು ಜನರು ಕೇಳಿದ್ದಾರೆ. ಈ ಯಾವ ಪ್ರಶ್ನೆಗೂ ಉರ್ಫಿ ಉತ್ತರ ಕೊಟ್ಟಿಲ್ಲ.

Urfi Javed 1

ಕೆಲಸಕ್ಕಾಗಿ ಅಲೆಯುತ್ತಿದ್ದ ಉರ್ಫಿ

ವಿಚಿತ್ರ ವಿನ್ಯಾಸದ ಬಟ್ಟೆಗಳ ಮೂಲಕ ಫೇಮಸ್ ಆಗಿರುವ ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಉರ್ಫಿ ಜಾವೇದ್ (Urfi Javed) ಇದೀಗ ಕೆಲಸ ಹುಡುಕುತ್ತಿದ್ದಾರಂತೆ. ಈ ಮಾಹಿತಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ನಾನು ಫೇಮಸ್ ಆಗಿದ್ದೇನೆ, ಜನರು ನನ್ನನ್ನು ಗುರುತಿಸುತ್ತಾರೆ ಎಲ್ಲವೂ ನಿಜ. ಆದರೆ, ನನಗೆ ಕೆಲಸವಿಲ್ಲ (Work). ನನ್ನೊಂದಿಗೆ ಕೆಲಸ ಮಾಡಲು ಯಾರೂ ಒಪ್ಪುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

Urfi Javed 1 1

ತಾವು ಕೆಲಸ ಮಾಡಲು ರೆಡಿಯಾಗಿದ್ದು, ತಮಗೆ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಉರ್ಫಿ ಹೇಳಿಕೊಂಡಿದ್ದಾರೆ. ನಾನು ಕೆಲಸ ಮಾಡಲು ತಯಾರಿದ್ದರೂ, ನನ್ನೊಂದಿಗೆ ಕೆಲಸ ಮಾಡಲು ಯಾರೂ ಸಿದ್ದರಿಲ್ಲ. ಹಾಗಾಗಿ ನನಗೆ ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ತಮಗಾಗಿ ಯಾರಾದರೂ ಕೆಲಸ ಸೃಷ್ಟಿ ಮಾಡಿದರೆ ಹೋಗುವುದಾಗಿಯೂ ತಿಳಿಸಿದ್ದಾರೆ.

 

ಈ ಹಿಂದೆ ಉರ್ಫಿಗಾಗಿ ಕಾಸ್ಟ್ಯೂಮ್ (Costume) ಡಿಸೈನ್ ಮಾಡುವವರು ಯಾರೂ ಇರಲಿಲ್ಲವಂತೆ. ಹಾಗಾಗಿಯೇ ತಮ್ಮ ಕಾಸ್ಟ್ಯೂಮ್ ಅನ್ನು ತಾವೇ ಡಿಸೈನ್ ಮಾಡಲು ಕಲಿತಿದ್ದಾರಂತೆ. ಇತ್ತ ಮನೆಯಲ್ಲೂ ಗೌರವವಿಲ್ಲ, ಬೀದಿಯಲ್ಲೂ ಇಲ್ಲ. ಈ ವಿಚಾರವಾಗಿ ತಮಗೆ ತುಂಬಾ ನೋವಾಗಿದೆ ಎಂದಿದ್ದಾರೆ ಉರ್ಫಿ.

Web Stories

Share This Article