ಹುಟ್ಟು ಹಬ್ಬಕ್ಕೆ ಕೇಕ್, ಹಾರ ತರಬೇಡಿ ಪುಸ್ತಕ ತನ್ನಿ: ನಟ ಧ್ರುವ ಸರ್ಜಾ

Public TV
2 Min Read
dhruva sarja 2 1

ನ್ನಡ ಸಿನಿಮಾ ನಟರು ತಮ್ಮ ಹುಟ್ಟು ಹಬ್ಬವನ್ನು ಹೊಸ ರೀತಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಸುದೀಪ್, ದರ್ಶನ್ ಸೇರಿದಂತೆ ಹಲವು ಕಲಾವಿದರು ತಮ್ಮ ಹುಟ್ಟು ಹಬ್ಬಕ್ಕೆ ಕೇಕ್, ಹಾರ ತರಬೇಡಿ ಎಂದು ಮನವಿ ಮಾಡಿಕೊಂಡಿದ್ದು ಇದೆ. ಆ ಹಣವನ್ನು ಅನಾಥಾಶ್ರಮಕ್ಕೂ, ವೃದ್ಧಾಶ್ರಮಕ್ಕೋ ಅಥವಾ ನಿಮ್ಮ ಕುಟುಂಬದ ಒಳ್ಳೆಯ ಕೆಲಸಕ್ಕೂ ಉಪಯೋಗಿಸಿಕೊಳ್ಳಿ ಎಂದಿದ್ದರು. ಇದೀಗ ಅದೇ ಹಾದಿಯಲ್ಲೇ ಧ್ರುವ ಸರ್ಜಾ ಕೂಡ ನಡೆಯುತ್ತಿದ್ದಾರೆ.

dhruva sarja 4

ಕನ್ನಡದ ಹೆಸರಾಂತ ನಟ ಧ್ರುವ ಸರ್ಜಾ ಮೂರು ವರ್ಷಗಳ ನಂತರ ತಮ್ಮ ಹುಟ್ಟು ಹಬ್ಬವನ್ನು (Birthday) ಅಭಿಮಾನಿಗಳ ಜೊತೆ ಆಚರಿಸಲು ರೆಡಿಯಾಗಿದ್ದಾರೆ. ಅಕ್ಟೋಬರ್ 6ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಧ್ರುವ, ಅಭಿಮಾನಿಗಳಿಗಾಗಿ (Fans) ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಹುಟ್ಟು ಹಬ್ಬಕ್ಕೆ ಬರುವವರು ಕೇಕ್, ಹಾರ, ತುರಾಯಿಗಳನ್ನು ತರಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

dhruva sarja 3

ಅಕ್ಟೋಬರ್ 5ರಂದು ಧ್ರುವ ಮನೆಯ ಮುಂದೆಯೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಅಂದು ಅಭಿಮಾನಿಗಳು ಶಾಲಾ ಮಕ್ಕಳಿಗೆ ಬೇಕಾಗುವ ಸಾಮಗ್ರಿಗಳನ್ನು ಉಡುಗೊರೆ ರೂಪದಲ್ಲಿ ಕೊಡುವಂತೆ ಕೇಳಿಕೊಂಡಿದ್ದಾರೆ. ಪುಸ್ತಕ, ಬ್ಯಾಗ್, ಪೆನ್ನು ಹೀಗೆ ಅಗತ್ಯ ವಸ್ತುಗಳನ್ನು ಮಾತ್ರ ತನ್ನಿ ಎಂದು ಹೇಳಿಕೊಂಡಿದ್ದಾರೆ.

dhruva sarja

ಹುಟ್ಟು ಹಬ್ಬಕ್ಕೂ ಮುನ್ನ ಅವರು ಮಾರ್ಟಿನ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರಲಿದ್ದಾರೆ. ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ (Dhruva Sarja) ಕಾಂಬಿನೇಷನ್ ನ ‘ಮಾರ್ಟಿನ್’ ಸಿನಿಮಾದ ಶೂಟಿಂಗ್ (Shooting) ಮುಗಿದಿದೆ ಎಂದು ಅಂದಾಜಿಸಲಾಗಿತ್ತು. ಬಿಡುಗಡೆಗೆ ಚಿತ್ರತಂಡ ಸಿದ್ಧವಾಗುತ್ತಿದೆ ಎಂದು ನಂಬಲಾಗಿತ್ತು. ಆದರೆ, ಅಭಿಮಾನಿಗಳ ಅಂದಾಜು ಸುಳ್ಳಾಗಿದೆ. ಚಿತ್ರತಂಡವೇ ಮಾಹಿತಿ ಕೊಟ್ಟಿರುವಂತೆ ಇನ್ನೂ ಮೂರು ಹಾಡುಗಳ ಶೂಟಿಂಗ್ ಬಾಕಿ ಇದೆಯಂತೆ. ಈ ವಾರ ಒಂದು ಹಾಡಿನ ಚಿತ್ರೀಕರಣಕ್ಕೂ ಚಿತ್ರತಂಡ ಸಿದ್ಧವಾಗಿದೆ.

dhruva sarja 2

ಇತ್ತೀಚೆಗಷ್ಟೇ ಈ ಸಿನಿಮಾದ ಒಂದು ಹಾಡು ಚಿತ್ರೀಕರಣವಾಗಿತ್ತು. ಈ ಹಾಡಿನಲ್ಲಿ ಇಟಾಲಿಯನ್ ಸುಂದರಿ ಜಾರ್ಜಿಯಾ (Giorgia Andriani)  ಜೊತೆ ಧ್ರುವ ಸರ್ಜಾ ಹೆಜ್ಜೆ ಹಾಕಿದ್ದರು. ಈ ಮೂಲಕ ಬಾಲಿವುಡ್‌ ನಟಿ ಜಾರ್ಜಿಯಾ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು.

 

ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಬಿಂದಾಸ್ ಹಾಡಿಗೆ ಚಿತ್ರೀಕರಣ ಮಾಡಲಾತ್ತು. ಧ್ರುವ ಜೊತೆ ಜಾರ್ಜಿಯಾ ಆಂಡ್ರಿಯಾನಿ ಸಖತ್ ಸ್ಟೆಪ್ಸ್ ಹಾಕಿದ್ದರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಆಕೆಯ ಮೊದಲ ಸಿನಿಮಾವಾಗಿದೆ. ಮಣಿ ಶರ್ಮಾ ಟ್ಯೂನ್ ಹಾಕಿರುವ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ. 300ಕ್ಕೂ ಹೆಚ್ಚು ಫಾರಿನ್ ಡ್ಯಾನ್ಸರ್ಸ್ ಹಾಡಿನಲ್ಲಿ ಕುಣಿದಿದ್ದಾರೆ. 3.5 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ದೂರಿಯಾಗಿ ಈ ಸಾಂಗ್ ಶೂಟಿಂಗ್ ನಡೆದಿದೆ.

Web Stories

Share This Article