ಭಾರತೀಯ ಕಿರುತೆರೆಯ ಜಗತ್ತಿನಲ್ಲೇ ಬಿಗ್ ಬಾಸ್ ಹವಾ ಜೋರಾಗಿದೆ. ಹಿಂದಿಯಲ್ಲಿ ಈಗಾಗಲೇ ಬಿಗ್ ಬಾಸ್ (Bigg Boss) ಫಿನಾಲೆ ಮುಗಿಸಿಕೊಂಡಿದೆ. ಇದೀಗ ತಮಿಳಿನಲ್ಲಿ (Tamil) ನಿನ್ನೆಯಿಂದ ಶುರುವಾಗಿದೆ. ಕನ್ನಡದಲ್ಲಿ ಅಕ್ಟೋಬರ್ 8 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗುತ್ತಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ನಿನ್ನೆಯಿಂದ ತಮಿಳಿನಲ್ಲಿ ಬಿಗ್ ಬಾಸ್ ಆರಂಭವಾಗಿದ್ದು, ಸ್ಪರ್ಧಾಳುಗಳ ಕಂಪ್ಲೀಟ್ ಲೀಸ್ ಅನ್ನು ಪ್ರಕಟಿಸಲಾಗಿದೆ.
ತಮಿಳಿನಲ್ಲಿ ಬಿಗ್ ಬಾಸ್ ಸೀಸನ್ 7 ಅಕ್ಟೋಬರ್ ಒಂದರಿಂದ ಆರಂಭವಾಗಿದ್ದು, ಈ ಕಾರ್ಯಕ್ರಮವನ್ನು ಕಮಲ್ ಹಾಸನ್ (Kamal Haasan) ನಡೆಸಿಕೊಡುತ್ತಿದ್ದಾರೆ. ಮೊದಲ ಸೀಸನ್ ನಿಂದಲೂ ಇವರೇ ಬಿಗ್ ಬಾಸ್ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ಏಳನೇ ಸೀಸನ್ ನ ಸ್ಪರ್ಧಿಗಳ (Contestants) ಕಂಪ್ಲೀಟ್ ಲಿಸ್ಟ್ ಹೊರ ಬಿದ್ದಿದೆ.
ತಮಿಳಿನ ಹಾಸ್ಯ ನಟ ಕೂಲ್ ಸುರೇಶ್, ನಟಿ ಪೂರ್ಣಿಮಾ, ನಟಿ ರವೀನಾ ದಹಾ, ನಟ ಪ್ರದೀಪ್ ಆಂಟೋನಿ, ರಾಪರ್ ನಿಕ್ಸೆನ್, ಕಿರುತೆರೆ ನಟಿ ವಿನುಷಾ ದೇವಿ, ಡ್ಯಾನ್ಸರ್ ಮಣಿಚಂದ್ರ, ಮತ್ತೋರ್ವ ಡ್ಯಾನ್ಸರ್ ಅಕ್ಷಯ ಉದಯಕುಮಾರ್, ನಟಿ ಜೋವಿಕಾ ವಿಜಯ್ ಕುಮಾರ್, ಡಾನ್ಸರ್ ಐಶು, ನಟ ವಿಷ್ಣು ವಿಜಯ್, ನಟಿ ಮಾಯಾ ಕೃಷ್ಣನ್, ನಟ ಸರವಣನ್, ಗಾಯಕ ಯುಗೇಂದ್ರನ್ ವಾಸುದೇವನ್, ಕಿರುತೆರೆ ನಿರೂಪಕಿ ವಿಚಿತ್ರಾ, ಬರಹಗಾರ ಬಾವ ಚೆಲ್ಲದೊರೈ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಪೂರ್ಣಿಮಾ ರವಿ ಅವರು ನಯನತಾರಾ ಅವರು 75ನೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಪ್ರದೀಪ್ ಆಂಟೋನಿ ತಮಿಳಿನ ಬಿಗ್ ಬಾಸ್ ಮೂರನೇ ಸೀಸನ್ ನಲ್ಲಿ ಭಾಗಿಯಾಗಿದ್ದರು. ಜೋವಿಕಾ ವಿಜಯಕುಮಾರ್ ಅವರು ನಟಿ ವನಿತಾ ಅವರ ಪುತ್ರಿ. ಐಶು ಅವರ ಸಹೋದರ ಆಮಿರ್ ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿದ್ದರು.
Web Stories