ಜೈಪುರ: ರೈಲ್ವೆ ಹಳಿಯ (Railway Track) ಮೇಲೆ ದುಷ್ಕರ್ಮಿಗಳು ಕಲ್ಲು (Stones) ಹಾಗೂ ರಾಡ್‌ಗಳನ್ನಿಟ್ಟು (Rod) ಅಡಚಣೆಗೆ ಪ್ರಯತ್ನಿಸಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ವಂದೇ ಭಾರತ್ ರೈಲಿನ (Vande Bharat Express Train) ಪೈಲಟ್‌ಗಳು ರೈಲನ್ನು ತುರ್ತಾಗಿ ನಿಲ್ಲಿಸಿ (Emergency Stop) ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನೆ ಸೋಮವಾರ ಬೆಳಗ್ಗೆ 9:55ರ ವೇಳೆಗೆ ನಡೆದಿದೆ. ಉದಯಪುರದಿಂದ ಜೈಪುರಕ್ಕೆ ವಂದೇ ಭಾರತ್ ರೈಲು ಚಲಿಸುತ್ತಿತ್ತು. ಈ ವೇಳೆ ಹಳಿಯ ಮೇಲೆ ಕೆಲವು ಕಲ್ಲುಗಳನ್ನಿಟ್ಟಿರುವುದನ್ನು ಪೈಲಟ್‌ಗಳು ಗಮನಿಸಿದ್ದಾರೆ. ದೊಡ್ಡ ಅಪಘಾತವನ್ನು ತಡೆಯಲು ಪೈಲಟ್‌ಗಳು ತಕ್ಷಣವೇ ರೈಲನ್ನು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಭಾರತದ 74 ಲಕ್ಷ ವಾಟ್ಸಪ್ ಖಾತೆಗಳು ನಿಷೇಧ
ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ. ಹಳಿಯ ಮೇಲೆ ಹಲವಾರು ಕಲ್ಲುಗಳು, ಕಬ್ಬಿಣದ ರಾಡ್‌ಗಳನ್ನು ಇಟ್ಟಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಎಳೆದ ಪೊಲೀಸರು – ಬೈಕ್‌ನಿಂದ ಬಿದ್ದ ಮಹಿಳೆ ಕೈ ಮೇಲೆ ಹರಿದ ಟಿಪ್ಪರ್
Web Stories