ಕನ್ನಡದ ಹೆಸರಾಂತ ನಟ ನಾಗಭೂಷಣ್ (Nagabhushan) ಕಾರು ಅಪಘಾತವಾಗಿದ್ದು (Accident), ಬೆಂಗಳೂರಿನ ವಸಂತಪುರದ ನಿವಾಸಿ 48ರ ವಯಸ್ಸಿನ ಪ್ರೇಮಾ (Prema) ಎನ್ನುವವರು ಸಾವನ್ನಪ್ಪಿದ್ದಾರೆ (Death). ನಿನ್ನೆ ತಡ ರಾತ್ರಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಒಂಬತ್ತು ಗಂಟೆಗೆ ನಾಗಭೂಷಣ್ ತಮ್ಮ ಮನೆಗೆ ತೆರಳುವಾಗ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.
ಶೂಟಿಂಗ್ ಮುಗಿಸಿಕೊಂಡು ನಾಗಭೂಷಣ್ ಬರುವಾಗ ರಸ್ತೆಯಲ್ಲಿ ಅಡ್ಡಬಂದ ಪಾದಚಾರಿ ದಂಪತಿಗಳಾದ ಪ್ರೇಮಾ ಮತ್ತು ಕೃಷ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ದಂಪತಿಗಳಿಬ್ಬರಿಗೂ ತೀವ್ರ ಗಾಯವಾಗಿದ್ದು, ಗಾಯಾಳುಗಳನ್ನು ಖುದ್ದಾಗಿ ನಾಗಭೂಷಣ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಪ್ರೇಮಾ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮಾಹಿತಿ ಪಡೆಯುತ್ತಿದ್ದಾರೆ. ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Web Stories