ಸಂಯುಕ್ತಾ ಬಟ್ಟೆಗೆ ನೆಗೆಟಿವ್ ಕಾಮೆಂಟ್ಸ್, ತಿರುಗೇಟು ನೀಡಿದ ಕಿಶನ್ ಬಿಳಗಲಿ

Public TV
2 Min Read
samyuktha hegde 3

ಕಿರಿಕ್ ಬ್ಯೂಟಿ ಸಂಯುಕ್ತಾ ಹೆಗ್ಡೆ ಜೊತೆ ‘ಬಿಗ್ ಬಾಸ್’ ಖ್ಯಾತಿಯ ಕಿಶನ್ ಬಿಳಗಲಿ ಡ್ಯಾನ್ಸ್ ಮಾಡಿರೋದು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ರೊಮ್ಯಾಂಟಿಕ್ ಹಾಡಿಗೆ ಇಬ್ಬರು ಕುಣಿದು ಕುಪ್ಪಳಿಸಿದ್ದರು. ವಿಡಿಯೋ ನೋಡಿದ ನೆಟ್ಟಿಗರು ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದು ತರಾಟೆಗೆ ತೆಗೆದುಕೊಂಡಿದ್ದರು. ನೆಟ್ಟಿಗರ ಕಾಮೆಂಟ್ಸ್‌ಗೆ ಮತ್ತು ಟ್ರೋಲ್‌ಗೆ ಇದೀಗ ಕಿಶನ್ ಖಡಕ್ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಮಗಳು ಅಗಲಿ 9 ದಿನಗಳ ಬಳಿಕ ಸಿನಿಮಾ ಪ್ರಚಾರಕ್ಕೆ ಮರಳಿದ ವಿಜಯ್ ಆಂಥೋನಿ

samyuktha hegde 1 1

ಕಿರಿಕ್‌ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ- ಕಿಶನ್ ಬಿಳಗಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಜಂಗ್ಲಿ ಸಿನಿಮಾದ ‘ನೀನೆಂದರೆ ನನ್ನೊಳಗೆ’ ಎಂಬ ಹಾಡಿಗೆ ಕಿಶನ್ ಜೊತೆ ನಟಿ ಸೊಂಟ ಬಳುಕಿಸಿದ್ದರು. ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಹೈಲೆಟ್ ಆಗಿದ್ದರು. ವಿಡಿಯೋ ಶೇರ್ ಮಾಡಿ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಪಡೆದಿತ್ತು. ಸಂಯುಕ್ತಾ ಧರಿಸಿದ ಅರೆಬರೆ ಬಟ್ಟೆಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್‌ ಹರಿದು ಬಂದಿತ್ತು. ಸಹನಟಿಗೆ ಟ್ರೋಲ್‌ ಮಾಡಿದ್ದಕ್ಕೆ ಕಿಶನ್‌ ತಿರುಗೇಟ್‌ ನೀಡಿದ್ದಾರೆ. ಮೊದಲು ಕಲೆಯನ್ನು ಗೌರವಿಸಿ ಎಂದಿದ್ದಾರೆ.

samyuktha hegde 2

ಮೊದಲಿಗೆ ನಾನು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಬಾರದು ಎಂದು ಭಾವಿಸಿದ್ದೆ, ಆದರೆ ಬಂದಿರುವ ಕಾಮೆಂಟ್ಸ್ ನೋಡಿ ರಿಯಾಕ್ಟ್ ಮಾಡಬೇಕು ಅನಿಸಿತು. ನೀವು ಟಿವಿ, ಚಲನಚಿತ್ರಗಳು, ರೊಮ್ಯಾಂಟಿಕ್ ಸಿನಿಮಾಗಳನ್ನ ನೋಡುವುದಿಲ್ಲವೇ? ಅದಕ್ಕಿಂತ ಇದು ಹೇಗೆ ಭಿನ್ನವಾಗಿದೆ. ನೀವು ನಿಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಸಿನಿಮಾಗಳನ್ನ ನೋಡುತ್ತಿದ್ದೀರಿ, ಅಲ್ಲಿ ರೂಪದರ್ಶಿಗಳು ಬೀಚ್‌ಗಳಿಂದ ಹೊರಬರುತ್ತಾರೆ ಅಲ್ಲವೇ?

ನೀವು ಕಲೆಯನ್ನು ಗೌರವಿಸದೆ, ಡ್ರೆಸ್ಸಿಂಗ್‌ ಬಗ್ಗೆ ನೆಗೆಟಿವ್‌ ಕಾಮೆಂಟ್‌ ಮಾಡುವುದು ಅದೆಷ್ಟು ಸರಿ. ನರ್ತಕಿಯರು ಬ್ಯಾಲೆ ಡ್ಯಾನ್ಸ್ ಮಾಡುವಾಗ ಈ ರೀತಿಯ ಬಟ್ಟೆಗಳನ್ನ ಧರಿಸುತ್ತಾರೆ. ಈ ರೀತಿಯ ಬಟ್ಟೆಗಳು ಅವರ ಕಂಫರ್ಟ್ ಜೋನ್‌ಗೆ ಬಿಟ್ಟಿದ್ದು ಎಂದು ನಟ ಕಿಶನ್ ಹೇಳಿದ್ದಾರೆ. ದಯವಿಟ್ಟು ಗೂಗಲ್ ಮಾಡಿ ಬ್ಯಾಲೆ ಬಟ್ಟೆಗಳನ್ನು ಮತ್ತು ನರ್ತಕಿಯಾಗಿ ನೃತ್ಯ ಮಾಡುವರ ಬಗ್ಗೆ ತಿಳಿದುಕೊಳ್ಳಿ ಎಂದು ಟ್ರೋಲ್ ಮಾಡುವವರಿಗೆ ನಟ ರಿಯಾಕ್ಟ್ ಮಾಡಿದ್ದಾರೆ.

Share This Article