ಕಾವೇರಿ ನೀರಿಗಾಗಿ ಹೋರಾಟ ಜೋರಾಗಿದ್ದು, ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಹೀಗಿರುವಾಗ ಕಾವೇರಿ ನೀರಿನ ಹೋರಾಟದ ಬಿಸಿ ತಮಿಳಿನ ಸಿನಿಮಾಗೂ ತಟ್ಟಿದೆ. ಸಿದ್ಧಾರ್ಥ್ ನಟನೆಯ ‘ಚಿಕ್ಕು’ ಸಿನಿಮಾ (Chikku Film) ಕನ್ನಡದಲ್ಲೂ ಡಬ್ ಆಗಿ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಸಿನಿಮಾ ಸುದ್ದಿಗೋಷ್ಠಿ ನಡೆಯುತ್ತಿದ್ದ ವೇಳೆ, ಕನ್ನಡಪರ ಹೋರಾಟಗಾರರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ತಮಿಳು ನಟ ಸಿದ್ಧಾರ್ಥ್ (Siddarth) ಸಿನಿಮಾ ಸುದ್ದಿಗೋಷ್ಟಿಗೆ ಕನ್ನಡಪರ ಸಂಘಟನೆಗಳು ಬಹಿಷ್ಕಾರ ಹಾಕಿದ್ದಾರೆ. ಸ್ಥಳಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಕಾವೇರಿಗಾಗಿ ಹೋರಾಟ ಮಾಡುತ್ತಾ ಇದ್ದೀವಿ. ನೀರೆಲ್ಲಾ ತಮಿಳುನಾಡಿಗೆ ಹೋಗುತ್ತಿದೆ. ಈಗ ಇಲ್ಲಿ ನೋಡಿದ್ರೆ ತಮಿಳು ಸಿನಿಮಾ ಪ್ರಚಾರ ಮಾಡ್ತೀರಾ ಎಂದು ಕನ್ನಡಪರ ಸಂಘಟನೆಯ ಹೋರಾಟಗಾರರು ಖಡಕ್ ಆಗಿ ಚಿತ್ರತಂಡಕ್ಕೆ ಮಾತನಾಡಿದ್ದಾರೆ. ಇದನ್ನೂ ಓದಿ:ಟಾಲಿವುಡ್‌ನಲ್ಲಿ ರುಕ್ಮಿಣಿ ವಸಂತ್‌ಗೆ ಭರ್ಜರಿ ಡಿಮ್ಯಾಂಡ್
ಕನ್ನಡಪರ ಸಂಘಟನೆಗಳು ಚಿತ್ರಕ್ಕೆ ಬಹಿಷ್ಕಾರ ಮಾಡುತ್ತಿದ್ದಂತೆ ಸುದ್ದಿಗೋಷ್ಠಿ ಮೊಟಕುಗೊಳಿಸಿ ತಮಿಳು ನಟ ಸಿದ್ದಾರ್ಥ ಹೊರನಡೆದಿದ್ದಾರೆ. ‘ಚಿಕ್ಕು’ (Chikku) ತಮಿಳು ಸಿನಿಮಾ ಕನ್ನಡದಲ್ಲೂ ಸೆ.28ರಂದು ರಿಲೀಸ್ ಆಗಿದೆ.