ಪ್ಲಾಟ್‍ಫಾರ್ಮ್ ಮೇಲೆ ರೈಲು ಏರಿದ ಪ್ರಕರಣಕ್ಕೆ ಟ್ವಿಸ್ಟ್ – ಕುಡಿದ ಮತ್ತಿನಲ್ಲಿ ಸಹಾಯಕನ ಎಡವಟ್ಟು

Public TV
1 Min Read
Mathura Train

ಲಕ್ನೋ: ಇತ್ತೀಚೆಗೆ ಮಥುರಾದಲ್ಲಿ (Mathura) ಹಠಾತ್ ವೇಗದಿಂದ ರೈಲು (Train) ಪ್ಲಾಟ್‍ಫಾರ್ಮ್‍ಗೆ ಡಿಕ್ಕಿಯಾದ ಘಟನೆಗೆ ಇಲಾಖೆಯ ಸಹಾಯಕನೆ ಕಾರಣ ಎಂದು ತಿಳಿದು ಬಂದಿದೆ. ಸಹಾಯಕ ಇಂಜಿನ್ ಥ್ರೋಟಲ್ ಮೇಲೆ ಬ್ಯಾಗ್ ಇರಿಸಿದಾಗ ರೈಲು ವೇಗವಾಗಿ ಚಲಿಸಿ ಪ್ಲಾಟ್‍ಫಾರ್ಮ್‍ಗೆ ನುಗ್ಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತನಿಖೆಯ ವರದಿಯಲ್ಲಿ ಸಹಾಯಕ ಸಚಿನ್ ಕುಮಾರ್ ಡ್ರೈವಿಂಗ್ ಕೋಚ್‍ಗೆ (ಡಿಟಿಸಿ) ಕ್ಯಾಬ್‍ನ ಕೀ ತರಲು ತೆರಳಿದ್ದಾಗ ಬ್ಯಾಗ್‍ನ್ನು ಇಂಜಿನ್ ಥ್ರೋಟಲ್‍ನಲ್ಲಿ ಇಟ್ಟ ಪರಿಣಾಮ ಈ ಘಟನೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಆತ ರೈಲ್ವೇ ಇಂಜಿನ್ ಕ್ಯಾಬಿನ್‍ಗೆ ಕೀ ತರಲು ತೆರಳಿದ್ದಾಗ ವಿಪರೀತ ಕುಡಿದಿದ್ದ ಎನ್ನಲಾಗಿದೆ. ಇದರಿಂದ ಆತನಿಗೆ ಬ್ಯಾಗನ್ನು ಇಂಜಿನ್‍ನ ಥ್ರೋಟಲ್‍ನಲ್ಲಿ ಇಟ್ಟರೆ ನಡೆಯುವ ಅನಾಹುತದ ಬಗ್ಗೆ ಅರಿವಿರಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಕಾರು, ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ – ತಂದೆ, ಮಗ ಸಾವು

ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ಸೇರಿದಂತೆ ರೈಲು ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ತೊಡಗಿದ್ದ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪರೀಕ್ಷೆ ವೇಳೆ ಸಹಾಯಕ ಸಚಿನ್ ವಿಪರೀತ ಮದ್ಯ ಕುಡಿದಿರುವುದು ಸಾಬೀತಾಗಿದೆ. ಅಲ್ಲದೇ ಆತನನ್ನು ತಂತ್ರಜ್ಞ ಹರ್ಮಾನ್ ಸಿಂಗ್ ಕೀ ತರಲು ಕಳಿಸಿದ್ದ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಂಗಳವಾರ ರಾತ್ರಿ ದೆಹಲಿಯಿಂದ ಆಗಮಿಸುತ್ತಿದ್ದ ರೈಲು ಹಳಿತಪ್ಪಿ ಮಥುರಾ ಜಂಕ್ಷನ್‍ನ ಪ್ಲಾಟ್‍ಫಾರ್ಮ್‍ಗೆ ಏರಿತ್ತು. ಈ ವೇಳೆ ರೈಲು ಪ್ಲಾಟ್ ಫಾರ್ಮ್ ಬಳಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿತ್ತು. ಈ ಘಟನೆ ಆತಂಕಕ್ಕೆ ಕಾರಣವಾಗಿತ್ತು. ಈ ವೇಳೆ ಮಹಿಳೆಯೊಬ್ಬರಿಗೆ ವಿದ್ಯುತ್ ತಗುಲಿತ್ತು. ಆದರೆ ಯಾವ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಬಂದ್‌ ಇದ್ದರೂ ಬಸ್ಸುಗಳು ರಸ್ತೆಯಲ್ಲಿ ಸಂಚರಿಸುತ್ತೆ: ರಾಮಲಿಂಗಾ ರೆಡ್ಡಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article