ಕಾಬುಲ್: ಕ್ರಿಕೆಟ್ ವಿಶ್ವಕಪ್ 2023 (Cricket World Cup 2023) ಅಫ್ಘಾನಿಸ್ತಾನದ (Afghanistan) ಕ್ರಿಕೆಟಿಗ ನವೀನ್-ಉಲ್-ಹಕ್ (Naveen-ul-Haq) ಅವರು ಭಾರತದಲ್ಲಿ ನಡೆಯುವ ವಿಶ್ವಕಪ್ ತನ್ನ ಕೊನೆಯ ಏಕದಿನ ಕ್ರಿಕೆಟ್ ಎಂದು ಘೋಷಿಸಿದ್ದಾರೆ. ಈ ಮೂಲಕ ತಮ್ಮ 24ನೇ ವಯಸ್ಸಿಲ್ಲಿಯೇ ಅವರು ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.
ವಿಶ್ವಕಪ್ ಪಂದ್ಯದಲ್ಲಿ ನನ್ನ ದೇಶವನ್ನು ಪ್ರತಿನಿಧಿಸುತ್ತಿರುವುದು ವಿಶಿಷ್ಟ ಗೌರವವಾಗಿದೆ. ಈ ವಿಶ್ವಕಪ್‍ನ ಬಳಿಕ ಟಿ20 ಕ್ರಿಕೆಟ್‍ನಲ್ಲಿ ಮುಂದುವರಿಸುತ್ತೇನೆ ಎಂದು ಇನ್ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಬಂದ ಪಾಕ್ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ – ಬಾಬರ್ ಆಜಂ ಬಿಜೆಪಿ ಯುವನಾಯಕ ಎಂದು ಟ್ರೋಲ್
2023ರ ಐಸಿಸಿ ವಿಶ್ವಕಪ್‍ನಲ್ಲಿ ಭಾರತ ಹಾಗೂ ಅಫ್ಘಾನ್ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕಪ್‍ನಲ್ಲಿ ನವೀನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದೀಗ ವಿಶ್ವಕಪ್‍ನಲ್ಲಿ ಅವರ ಹೆಸರನ್ನು ಪ್ರಕಟಿಸಲಾಗಿದೆ.
ಅಫ್ಘಾನ್ ವಿಶ್ವಕಪ್ ತಂಡ
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಷಾ, ರಹಮಾನುಲ್ಲಾ ಗುರ್ಬಾಜ್, ಇಕ್ರಮ್ ಅಲಿಖಿಲ್, ರಿಯಾಜ್ ಹಸನ್, ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಶಾಹಿದುಲ್ಲಾ ಕಮಾಲ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಕ್ಮಾನ್, ಫಜಲ್ ರಹಕ್ಮಾನ್, ಫಜಲ್ಹರ್ಖ್, ಅಬ್ದುಲ್ ರೆಹಮಾನ್, ವಫಾದರ್ ಮೊಮಂಡ್, ಸಲೀಮ್ ಸಫಿ ಮತ್ತು ಸೈಯದ್ ಅಹ್ಮದ್ ಶಿರ್ಜಾದ್. ಇದನ್ನೂ ಓದಿ: Asian Games: ಮಹಿಳೆಯರ 60 ಕೆ.ಜಿ ವುಶು ಫೈನಲ್‍ನಲ್ಲಿ ಭಾರತಕ್ಕೆ ಬೆಳ್ಳಿ
Web Stories