ಮಣಿಪುರದಲ್ಲಿ ಮತ್ತೆ ಆಫ್ಸ್ಪಾ ಜಾರಿ – ಈ ಕಾಯ್ದೆಯ ವಿಶೇಷತೆ ಏನು?

Public TV
1 Min Read
manipur violence

ಇಂಫಾಲ: ಮತ್ತೆ ಹಿಂಸಾಚಾರ ಆರಂಭವಾಗಿರುವ ನಡುವೆಯೇ ಮಣಿಪುರದಲ್ಲಿ (Manipura) ಆಫ್ಸ್ಪಾ (ಸಶಸ್ತ್ರ ಪಡೆಗಳ ವಿಶೇಷಾಧಿಕಾರ) ಕಾಯ್ದೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಲಾಗಿದೆ.

ಶಾಂತಿ ಸಾಪನೆಗೆ ನಿಯೋಜಿಸಲಾಗಿರುವ ಆಫ್ಸ್ಫಾ (AFSPA) ಅ.1ರಿಂದ ಜಾರಿಯಾಗುವಂತೆ ರಾಜ್ಯಪಾಲರು ನಿರ್ಧಾರ ಕೈಗೊಂಡಿದ್ದಾರೆ. ಮೈತೆಯೇ (Meitei) ಸಮುದಾಯದ ಇಬ್ಬರು ವಿದ್ಯಾರ್ಥಿಗಳಿಬ್ಬರ ಮೃತದೇಹ ಫೋಟೋ ವೈರಲ್ ಆದ ಬಳಿಕ ರಾಜ್ಯ ಮತ್ತೆ ಉದ್ವಿಗ್ನಗೊಂಡಿದೆ.

ಸೆ.26 ರಂದು ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.  ಇದನ್ನೂ ಓದಿ: ನನಗೆ ಈಗಲೂ ಸ್ವಂತ ಮನೆ ಇಲ್ಲ: ಪ್ರಧಾನಿ ಮೋದಿ

MANIPUR 1

ಮಣಿಪುರದಲ್ಲಿ ಹಿಂಸಾಚಾರ ತೀವ್ರಗೊಂಡಿದ್ದಾಗ ಜುಲೈ 6 ರಂದು ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಕುಕಿ (Kuki) ಸಮುದಾಯವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಮೈತೆಯೀ ಸಮುದಾಯ ಆರೋಪಿಸಿದೆ.

ಸಶಸ್ತ್ರ ಪಡೆಗಳ ವಿಶೇಷ ಕಾಯ್ದೆ 1958 ಏನು ಹೇಳುತ್ತದೆ?
ಕಾನೂನು ಬಾಹಿರ ವ್ಯಕ್ತಿಗಳ ಮೇಲೆ ಗುಂಡು ಹಾರಿಸಬಹುದು. ಅನುಮಾನಿತ ವ್ಯಕ್ತಿಗಳ ಮೇಲೆ ವಾರಂಟ್ ಇಲ್ಲದೇ ಬಂಧಿಸಬಹುದು. ಯಾವುದೇ ವಾಹನವನ್ನು ತಡೆಗಟ್ಟಿ ತಪಾಸಣೆ ಮಾಡಬಹುದು. ಯೋಧರು ಯಾವುದೇ ಕಾರಣಕ್ಕೂ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಅವರ ಮೇಲೆ ಕೇಸ್ ದಾಖಲಿಸುವ ಹಾಗೂ ವಿಚಾರಣೆ ನಡೆಸಲು ಅವಕಾಶವೇ ಇಲ್ಲ.

ಕಾಯ್ದೆ ಯಾವಾಗ ಜಾರಿಯಾಯಿತು?
ಸಶಸ್ತ್ರ ಪಡೆಗಳ ಕಾಯ್ದೆಯನ್ನು ಮೊದಲು ಭಾರತದಲ್ಲಿ ಜಾರಿಗೆ ತಂದವರು ಬ್ರಿಟಿಷರು. 1942ರ ಕ್ವಿಟ್ ಇಂಡಿಯಾ ಚಳುವಳಿ ಸಂದರ್ಭದಲ್ಲಿ ದೇಶದ ಸ್ವಾತಂತ್ರ‍್ಯ ಹೋರಾಟಗಾರರ ವಿರುದ್ಧ ಈ ಕಾಯ್ದೆಯನ್ನು ಬಳಸಿ ಅವರನ್ನು ನಿಯಂತ್ರಿಸಲಾಗುತ್ತಿತ್ತು.

 
Web Stories

Share This Article