Ind vs Aus: ವೈಟ್‌ವಾಶ್‌ನಿಂದ ತಪ್ಪಿಸಿಕೊಳ್ಳಲು ಆಸೀಸ್‌ ತವಕ – ಭಾರತಕ್ಕೆ 353 ರನ್‌ಗಳ ಗುರಿ

Public TV
2 Min Read
Ind vs Aus

ರಾಜ್‌ಕೋಟ್‌: ಇಲ್ಲಿನ ಸೌರಾಷ್ಟ್ರ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ (Australia) 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 352 ರನ್‌ ಗಳಿಸಿ ಭಾರತಕ್ಕೆ (Team India) 353 ರನ್‌ಗಳ ಗುರಿ ನೀಡಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವೈಟ್‌ವಾಶ್‌ನಿಂದ ತಪ್ಪಿಸಿಕೊಳ್ಳುವ ತವಕದಲ್ಲಿದೆ.

Ind vs Aus 2

ಟಾಸ್‌ ಗೆದ್ದು ಮೊದಲು ಕ್ರೀಸ್‌ಗಿಳಿದ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಟೀಂ ಇಂಡಿಯಾ (Team India) ಬೌಲರ್‌ಗಳನ್ನ ಬೆಂಡೆತ್ತಿದರು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್‌ ವಾರ್ನರ್‌ ಹಾಗೂ ಮಿಚೆಲ್‌ ಮಾರ್ಷ್‌ (Mitchell March) ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 78 ರನ್‌ಗಳ ಜೊತೆಯಾಟ ನೀಡಿದರು. 34 ಎಸೆತಗಳಲ್ಲಿ 56 ರನ್‌ (4 ಸಿಕ್ಸರ್‌, 6 ಬೌಂಡರಿ) ಗಳಿಸಿ ಡೇವಿಡ್‌ ವಾರ್ನರ್‌ ಔಟಾಗುತ್ತಿದ್ದಂತೆ, ಮಿಚೆಲ್‌ ಮಾರ್ಷ್‌ ಹಾಗೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 2ನೇ ವಿಕೆಟ್‌ಗೆ ಈ ಜೋಡಿ 119 ಎಸೆತಗಳಲ್ಲಿ 137 ರನ್‌ ಬಾರಿಸಿತ್ತು. ಇದನ್ನೂ ಓದಿ: ಶ್ರೇಯಸ್‌, ಗಿಲ್‌ ದ್ವಿಶತಕ ಜೊತೆಯಾಟ, ಸೂರ್ಯನ ಆರ್ಭಟ – ಆಸೀಸ್‌ಗೆ ದಾಖಲೆಯ 400 ರನ್‌ಗಳ ಗುರಿ

Ind vs Aus 3

ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಮಿಚೆಲ್‌ ಮಾರ್ಷ್‌ ಅಂತಿಮ ಪಂದ್ಯದಲ್ಲಿ ಶತಕ ವಂಚಿತರಾಗಿ ನಿರ್ಗಮಿಸಿದರು. 84 ಎಸೆತಗಳನ್ನು ಎದುರಿಸಿದ ಮಾರ್ಷ್‌ 96 ರನ್‌ (13 ಬೌಂಡರಿ, 3 ಸಿಕ್ಸರ್‌) ಬಾರಿಸಿದ್ರೆ, ಸ್ಟೀವ್‌ ಸ್ಮಿತ್‌ (Steve Smith) 61 ಎಸೆತಗಳಲ್ಲಿ 74 ರನ್‌ (8 ಬೌಂಡರಿ, 1 ಸಿಕ್ಸರ್‌) ರನ್‌ ಚಚ್ಚಿದರು. 27 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ ಪಡೆ 400 ರನ್‌ಗಳನ್ನು ಕಲೆಹಾಕುವ ಭರವಸೆ ಮೂಡಿಸಿತ್ತು. ಆದ್ರೆ ಸ್ಟೀವ್‌‌ ಸ್ಮಿತ್‌, ಮಿಚೆಲ್‌ ಮಾರ್ಚ್‌ ವಿಕೆಟ್‌ ಪತನ ಬಳಿಕ ರನ್‌ ವೇಗ ಕೂಡ ಕಡಿಮೆಯಾಯಿತು. ಇದನ್ನೂ ಓದಿ: World Cup 2023: ಇನ್ನೂ ವೀಸಾ ಸಿಕ್ಕಿಲ್ಲ – ಪಾಕಿಸ್ತಾನ ಆಟಗಾರರಿಗೆ ಶುರುವಾಯ್ತು ಹೊಸ ಸಮಸ್ಯೆ

Ind vs Aus 4

ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 352 ರನ್‌ ಗಳಿಸಿತು. ಆಸೀಸ್‌ ಪರ ಮಾರ್ನಸ್‌ ಲಾಬುಶೇನ್‌ 72 ರನ್‌ (9 ಬೌಂಡರಿ, 58 ಎಸೆತ), ಅಲೆಕ್ಸ್‌ ಕ್ಯಾರಿ 11 ರನ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ 5 ರನ್‌, ಕ್ಯಾಮರೂನ್‌ ಗ್ರೀನ್‌ 9 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಕೊನೆಯಲ್ಲಿ ಪ್ಯಾಟ್‌ ಕಮ್ಮಿನ್ಸ್‌ 19 ರನ್‌ ಹಾಘೂ ಮಿಚೆಲ್‌ ಸ್ಟಾರ್ಕ್‌ 1 ರನ್‌ ಗಳಿಸಿ ಅಜೇಯರಾಗುಳಿದರು.

ಟೀಂ ಇಂಡಿಯಾ ಪರ ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) 3 ವಿಕೆಟ್‌ ಕಿತ್ತರೆ, ಕುಲ್ದೀಪ್‌ ಯಾದವ್‌ 2 ವಿಕೆಟ್‌ ಹಾಗೂ ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Web Stories

Share This Article