ಕೆಆರ್‌ಎಸ್, ಕಬಿನಿಯಿಂದ ಇಂದು ತಮಿಳುನಾಡಿಗೆ 6,075 ಕ್ಯೂಸೆಕ್ ನೀರು

Public TV
1 Min Read
KRS 2

ಮಂಡ್ಯ: ತಮಿಳುನಾಡಿಗೆ (Tamil Nadu) ನೀರು (Water) ಬಿಡುಗಡೆ ಮುಂದುವರಿಕೆಯಾಗಿದ್ದು, ಕೆಆರ್‌ಎಸ್ (KRS) ಹಾಗೂ ಕಬಿನಿ (Kabini) ಡ್ಯಾಂಗಳಿಂದ ಇಂದು 6,075 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಪ್ರಾಧಿಕಾರ ಹಾಗೂ ಸುಪ್ರೀಂ ಆದೇಶದಂತೆ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಕೆಆರ್‌ಎಸ್‌ನಿಂದ 3,575 ಕ್ಯೂಸೆಕ್, ಕಬಿನಿಯಿಂದ 2,500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 2 ಡ್ಯಾಂಗಳಿಂದ ತಮಿಳುನಾಡಿಗೆ ಇಂದು 6,075 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

kabini dam water 3

ಬಿಳುಗುಂಡ್ಲುಗೆ 5 ಸಾವಿರ ಕ್ಯೂಸೆಕ್ ನೀರು ತಲುಪಬೇಕು ಎಂದರೆ ಕನಿಷ್ಠ ಒಂದಿಂದ ಒಂದೂವರೆ ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಬಿಡಬೇಕು. ಹೀಗಾಗಿ ಪ್ರತಿನಿತ್ಯದ ಕೋಟಾ 5 ಸಾವಿರ ನೀರು ತಲುಪಿಸಲು ಡ್ಯಾಂಗಳಿಂದ 6,075 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕೆಆರ್‌ಎಸ್ ಡ್ಯಾಂನಿಂದ ನದಿ ಹಾಗೂ ನಾಲೆಗಳಿಗೆ ಸೇರಿ 5,691 ಕ್ಯೂಸೆಕ್ ಹೊರ ಹರಿವು ಇದ್ದು, ಕಬಿನಿಯಲ್ಲಿ ನದಿಗೆ ಮಾತ್ರ 2,500 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಇದನ್ನೂ ಓದಿ: ಕಾವೇರಿಗಾಗಿ ಶುಕ್ರವಾರ ಕರ್ನಾಟಕ ಬಂದ್- 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ

ಕೆಆರ್‌ಎಸ್ ಡ್ಯಾಂ ಇಂದಿನ ನೀರಿನ ಮಟ್ಟ:
ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 97 ಅಡಿ
ಒಳ ಹರಿವು – 7,451 ಕ್ಯೂಸೆಕ್
ಹೊರ ಹರಿವು – 5,691 ಕ್ಯೂಸೆಕ್
ಗರಿಷ್ಠ ಸಂಗ್ರಹ ಸಾಮರ್ಥ್ಯ – 49.452 ಟಿಎಂಸಿ
ಇಂದು ಸಂಗ್ರಹ ಇರುವ ನೀರು – 20.548 ಟಿಎಂಸಿ ಇದನ್ನೂ ಓದಿ: ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ: ಸಿದ್ದರಾಮಯ್ಯ

Web Stories

Share This Article