ಮೈಸೂರು: ತಮ್ಮನ್ನು ಭೇಟಿ ಮಾಡಲು ಬರುವಾಗ ಹಾರ ಹಾಗೂ ಪೇಟಗಳನ್ನು ತರಬೇಡಿ. ಅದರ ಬದಲು 200 ಪುಟಗಳ ನೋಟ್ ಬುಕ್ (Book) ತನ್ನಿ ಎಂದು ಮೈಸೂರು ಜಿಲ್ಲಾ ಉಸ್ತವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ (Dr H.C Mahadevappa) ಮನವಿ ಮಾಡಿದ್ದಾರೆ.
ಎಲ್ಲರಲ್ಲಿ ಒಂದು ಮನವಿ pic.twitter.com/dAik3Z0CBO
— Dr H.C.Mahadevappa (@CMahadevappa) September 27, 2023
ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಪೇಟ ಹಾಗೂ ಶಾಲಿಗೆ ದುಂದು ವೆಚ್ಚ ಮಾಡಬೇಡಿ. ಅದೇ ಹಣದಲ್ಲಿ ನೋಟ್ ಬುಕ್ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ತೆಗೆದುಕೊಂಡು ಬನ್ನಿ. ಬಳಿಕ ಈ ಪುಸ್ತಕಗಳನ್ನು ಹಾಗೂ ಸಾಮಗ್ರಿಗಳನ್ನು ಮಕ್ಕಳಿಗೆ ಹಂಚಲಾಗುವುದು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾದ 8 ವರ್ಷದ ಬಾಲಕನಿಗೆ ಇಷ್ಟಲಿಂಗ ದೀಕ್ಷೆ- ಗಣೇಶನಾಗಿ ಬದಲಾದ ಆ್ಯಂಡ್ರೆ
ಈ ಮೂಲಕ ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಸಚಿವ ಮಹದೇವಪ್ಪ ಮನವಿ ಮಾಡಿದ್ದಾರೆ. ಇದರಿಂದಾಗಿ ನೂತನ ಬದಲಾವಣೆಗೆ ಸಚಿವರು ಮುಂದಾಗಿದ್ದಾರೆ. ಅಲ್ಲದೇ ತಮಗೆ ನೀಡುವ ಶಿಕ್ಷಣ ಸಾಮಾಗ್ರಿಗಳನ್ನು ಶಾಲಾ ಮಕ್ಕಳಿಗೆ ನೀಡುವ ಭರವಸೆ ನೀಡಿದ್ದಾರೆ. ಸಚಿವರ ಈ ನಡೆಯಿಂದ ಉಳಿದವರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ: ಸಿದ್ದರಾಮಯ್ಯ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]