25 ಲಕ್ಷ ರೂ.ಗೆ 2 ಕೆಜಿ ನಕಲಿ ಚಿನ್ನ ನೀಡಿ ವಂಚನೆ – ಇಬ್ಬರು ಅರೆಸ್ಟ್

Public TV
1 Min Read
Crime 1

ಹಾವೇರಿ: 25 ಲಕ್ಷ ರೂ.ಗೆ 2 ಕೆಜಿ ಚಿನ್ನ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬನಿಗೆ ವಂಚಿಸಿದ್ದ ಆರೋಪಿಗಳನ್ನು ಶಿಗ್ಗಾಂವ್ (Shiggaon) ಪೊಲೀಸರು (Police) ಬಂದಿಸಿದ್ದಾರೆ. ಆರೋಪಿಗಳು ಮೊದಲು ಎರಡು ಚಿನ್ನದ ನಾಣ್ಯಗಳನ್ನು ನೀಡಿ ಹಣ ಪಡೆದು, ಬಳಿಕ ನಕಲಿ ಚಿನ್ನವನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

FAKE GOLD

ಬಂಧಿತ ಆರೋಪಿಗಳನ್ನು ಕರಣ್ ಮತ್ತು ಪ್ರವೀಣ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬೆಂಗಳೂರು (Bengaluru) ಮೂಲದ ಲಕ್ಷ್ಮಣ್ ಚೆನ್ನಬಸಯ್ಯ ಎಂಬವರಿಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿದ್ದರು. ಮೊದಲಿಗೆ ಚಿನ್ನದ ನಾಣ್ಯ ನೀಡಿ 25 ಲಕ್ಷ ರೂ. ಪಡೆದು ಬಳಿಕ ನಕಲಿ ಚಿನ್ನದ ನಾಣ್ಯಗಳನ್ನು ನೀಡಿದ್ದರು. ಇದನ್ನೂ ಓದಿ: ನಾಗೋರ್ನೊ-ಕರಾಬಖ್ ಇಂಧನ ಡಿಪೋ ಸ್ಫೋಟ – 20 ಮಂದಿ ಸಾವು

ಆರೋಪಿಗಳು ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹರಪನಹಳ್ಳಿಯ ಹೊಳಲು ಗ್ರಾಮದ ಬಳಿ ಲಕ್ಷ್ಮಣ್‍ನನ್ನು ಕರೆಸಿದ್ದರು. ಇಲ್ಲಿಯೇ ನಾಣ್ಯಗಳನ್ನು ನೀಡಿ ಹಣ ಪಡೆದಿದ್ದರು. ಬಳಿಕ ಇದನ್ನು ಪರೀಕ್ಷಿಸಿದಾಗ ನಕಲಿ ಎಂಬುದು ತಿಳಿದು ಬಂದಿತ್ತು.

ಈ ಸಂಬಂಧ ಶಿಗ್ಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಧಿತ ಆರೋಪಿಗಳಿಂದ 12 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಸಂತೋಷ್ ಮತ್ತು ಪ್ರಕಾಶ್ ಎಂಬ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ಬೆಂಬಲ – ಇಬ್ಬರು ಮಹಿಳೆಯರು, ಓರ್ವ ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್

Web Stories

Share This Article