ಪರಿಣಿತಿ ಮದುವೆಗೆ ಪ್ರಿಯಾಂಕಾ ಚೋಪ್ರಾ ಗೈರಾಗಿದ್ದೇಕೆ? ಮಧು ಚೋಪ್ರಾ ಸ್ಪಷ್ಟನೆ

Public TV
1 Min Read
priyanka chopra

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ(Parineeti Chopra)- ರಾಘವ್ ಚಡ್ಡಾ (Raghav Chadha) ಸೆ.24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಹೋದರಿ ಮದುವೆಗೆ ಪ್ರಿಯಾಂಕಾ ಚೋಪ್ರಾ ಗೈರಾಗಿರೋದು ಹೈಲೆಟ್ ಆಗಿದೆ. ಯಾಕೆ ಮದುವೆ ಸಮಾರಂಭದಲ್ಲಿ ನಟಿ ಭಾಗಿಯಾಗಿಲ್ಲ ಎಂಬುದನ್ನ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಸ್ಪಷ್ಟನೆ ನೀಡಿದ್ದಾರೆ.

parineeti chopra

ಪರಿಣಿತಿ-ರಾಘವ್ ಎಂಗೇಜ್‌ಮೆಂಟ್‌ನಲ್ಲಿ ಪ್ರಿಯಾಂಕಾ (Priyanka Chopra) ಭಾಗಿಯಾಗಿ ಶುಭಕೋರಿದ್ದರು. ಇದೀಗ ಮದುವೆಗೂ ಬರುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಪ್ರಿಯಾಂಕಾ ಗೈರು ಹಾಜರಿ ಫ್ಯಾನ್ಸ್ ನಿರಾಸೆಯುಂಟು ಮಾಡಿದೆ. ಮದುವೆಯ ಬಳಿಕ ಪಾಪರಾಜಿಗಳ ಪ್ರಶ್ನೆಗೆ ಮಧು ಚೋಪ್ರಾ (Madhu Chopra) ಉತ್ತರಿಸಿದ್ದಾರೆ. ಕೆಲಸದ ಕಮೀಟ್‌ಮೆಂಟ್‌ನಿಂದ ಮಗಳು ಪ್ರಿಯಾಂಕಾ ಮತ್ತು ಅಳಿಯ ನಿಕ್ ಜೋನಸ್ ಬಂದಿಲ್ಲ ಎಂದು ಹೇಳಿದ್ದಾರೆ.

Parineeti Chopra 4

ವಧು ಪರಿಣಿತಿ ಹೇಗೆ ಕಾಣಿಸುತ್ತಿದ್ದರು ಮತ್ತು ಮದುವೆ ಹೇಗೆ ನಡೆಯಿತು ಎಂಬ ಪ್ರಶ್ನೆಗೂ ರಿಯಾಕ್ಟ್ ಮಾಡಿದ್ದಾರೆ. ಪರಿಣಿತಿ ಮದುವೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆ ಚೆನ್ನಾಗಿ ನಡೆಯಿತು ಎಂದು ಮಧು ಚೋಪ್ರಾ ಸಂತಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಮಿಂಚಿದ ಮೇಘಾ ಶೆಟ್ಟಿ

ಪರಿಣಿತಿ ಮದುವೆ ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ನವಜೋಡಿಗೆ ಪ್ರಿಯಾಂಕಾ ಚೋಪ್ರಾ ಶುಭಕೋರಿದ್ದಾರೆ. ರಾಘವ್‌ಗೆ ಚೋಪ್ರಾ ಕುಟುಂಬಕ್ಕೆ ಸ್ವಾಗತ ಎಂದಿದ್ದಾರೆ.

Share This Article