ಬಿಎಸ್‌ವೈಯನ್ನು ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ

Public TV
2 Min Read
BS Yediyurappa nikhil kumaraswamy

– ರಾಜಕೀಯದಿಂದ ದೂರ ಹೋಗ್ತೇನೆಂದು ಯಾವತ್ತೂ ಹೇಳಿಲ್ಲ

ಬೆಂಗಳೂರು: ಮಂಡ್ಯದಲ್ಲಿ ಸ್ಪರ್ಧೆ ಬಗ್ಗೆ ಈಗ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದು ಸೂಕ್ತ ಸಮಯವೂ ಅಲ್ಲ. ನಾನೆಂದೂ ರಾಜಕೀಯದಿಂದ ದೂರ ಹೋಗುತ್ತೇನೆ ಎಂದು ಹೇಳಿಲ್ಲ ಎಂದು ನಟ, ಜೆಡಿಎಸ್ (JDS) ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿಕೆ ನೀಡಿದ್ದಾರೆ.

ಭಾನುವಾರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿದರು. ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಗೆ ಭೇಟಿ ನೀಡಿದ ನಿಖಿಲ್, ಯಡಿಯೂರಪ್ಪ ಅವರಿಗೆ ಕೃಷ್ಣನ ವಿಗ್ರಹ ನೀಡಿ ಸನ್ಮಾನಿಸಿದರು. ನಂತರ ಯಡಿಯೂರಪ್ಪ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದರು. ನಿಖಿಲ್ ಕುಮಾರಸ್ವಾಮಿಗೆ ಶಾಸಕ ಮುನಿರತ್ನ ಸಾಥ್ ನೀಡಿದರು.

Nikhil Kumaraswamy 1

ಬಿಎಸ್‌ವೈ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ಮಂಡ್ಯದಲ್ಲಿ ಸ್ಪರ್ಧೆ ಬಗ್ಗೆ ಈಗ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದು ಸೂಕ್ತ ಸಮಯವೂ ಅಲ್ಲ. ನಾನೆಂದೂ ರಾಜಕೀಯದಿಂದ ದೂರ ಹೋಗುತ್ತೇನೆ ಎಂದು ಹೇಳಿಲ್ಲ. ಈ ಮೈತ್ರಿಗೆ ರೇವಣ್ಣ ಅವರ ಸಂಪೂರ್ಣ ಬೆಂಬಲ ಇದೆ. ತಪ್ಪು ಸಂದೇಶ ಹೋಗೋದು ಬೇಡ. ಅವರು ಹೊಳೆನರಸೀಪುರಕ್ಕೆ ಹೋಗಬೇಕಿತ್ತು. ಆ ಕಾರಣ ದೆಹಲಿ ಸಭೆಗೆ ಅವರು ಬಂದಿಲ್ಲ. ನಾವೆಲ್ಲರೂ ಕುಳಿತು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಮತ್ತಷ್ಟು ನೀರು

ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಬೆಂಬಲ ನೀಡಿದ್ದು, ಲೋಕಸಭಾ ಚುನಾವಣೆಗೆ ಬಿಜೆಪಿ (BJP), ಜೆಡಿಎಸ್ ಜಂಟಿಯಾಗಿ ಚುನಾವಣೆ ಎದುರಿಸುತ್ತದೆ. ದೇವೇಗೌಡರು ರಾಜ್ಯದ ಹಿತದೃಷ್ಟಿ ಕಾಪಾಡುವ ಸಲುವಾಗಿ ಈ ನಿರ್ಧಾರ ಮಾಡಿದ್ದಾರೆ. ಯಡಿಯೂರಪ್ಪನವರ ಕೊಡುಗೆ ರಾಜ್ಯಕ್ಕೆ ಅಪಾರ. ಹಿರಿಯರ ಆಶೀರ್ವಾದ ಪಡೆದುಕೊಳ್ಳುವುದು ಸಂಸ್ಕೃತಿ. ಹೀಗಾಗಿ ನಾನು ಅವರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದರು.

ಬಿಜೆಪಿ ನಾಯಕರನ್ನು ಕಡೆಗಣಿಸಿ ಮೈತ್ರಿ ಘೋಷಣೆ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪಕ್ಷ ಎಂದು ಭಾವಿಸಿದ್ದೇನೆ. ಸೀಟಿನ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಮಂಗಳವಾರ ಬೆಂಗಳೂರು ಬಂದ್ ಇರುತ್ತಾ? – ಕನ್ನಡ ಸಂಘಟನೆಗಳಿಂದ ತಟಸ್ಥ ಧೋರಣೆ

Web Stories

Share This Article