ಅಕ್ಟೋಬರ್ 5 ರಿಂದ ಆರಂಭವಾಗಲಿರುವ ವಿಶ್ವಕಪ್ (World Cup) ಕ್ರಿಕೆಟ್ ಏಕದಿನದ ಪಂದ್ಯಕ್ಕಾಗಿ ತಯಾರಿಸಲಾದ ವಿಶ್ವಕಪ್ ಗೀತೆಯು (Song) ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಮತ್ತು ಸಂಗಡಿಗರು ಕಾಣಿಸಿಕೊಂಡಿದ್ದಾರೆ. ಐಸಿಸಿ ತನ್ನ ಅಧಿಕೃತ ಖಾತೆಯಲ್ಲಿ ಈ ಹಾಡನ್ನು ರಿಲೀಸ್ ಮಾಡಿದ್ದು ಸಾಕಷ್ಟು ಜನರು ಹಾಡಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಣವೀರ್ ಸಿಂಗ್ (Ranveer Singh) ನೃತ್ಯಕ್ಕೆ ಕೆಲವರು ಹಾಡಿ ಹೊಗಳಿದ್ದರೆ, ಇನ್ನೂ ಕೆಲವರು ಇದೊಂದು ಐಟಂ ಸಾಂಗ್ ರೀತಿಯಲ್ಲಿದೆ ಎಂದು ಕಾಲೆಳೆದಿದ್ದಾರೆ. ವಿಶ್ವಕಪ್ ಅನ್ನು ಉತ್ತೇಜಿಸುವುದಕ್ಕಾಗಿ ಈ ಗೀತೆಯನ್ನು ರೆಡಿ ಮಾಡಿದ್ದು, ಭಾರತ ಕ್ರಿಕೆಟ್ ತಂಡದ ಆಟಗಾರ ಯುಜವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ ಕೂಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ನಾಯಕಿನಾ? ಸ್ಯಾಮ್ ಕಡೆಯಿಂದ ಸಿಕ್ತು ಉತ್ತರ
ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ಐಸಿಸಿ ವಿಶ್ವಕಪ್ 2023 ವೀಕ್ಷಿಸಲು ರಜನಿಕಾಂತ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಗೋಲ್ಡನ್ ಟಿಕೆಟ್ ನೀಡಿ ಗೌರವಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ರಜನಿಯನ್ನು ಭೇಟಿ ಮಾಡಿ ಈ ಗೌರವದ ಟಿಕೆಟ್ ಅನ್ನು ನೀಡಿದ್ದಾರೆ.
ಟಿಕೆಟ್ ಪಡೆದ ನಂತರ ಸೋಷಿಯಲ್ ಮೀಡಿಯಾ ಮೂಲಕ ಕೃತಜ್ಞತೆಯನ್ನು ಸಲ್ಲಿಸಿರುವ ರಜನಿಕಾಂತ್, ಇಂಥದ್ದೊಂದು ಗೌರವ ಸಿಕ್ಕಿದು ಖುಷಿಯಾಗಿದೆ ಎಂದು ಹೇಳಿದ್ದಾರೆ. ಕ್ರಿಕೆಟ್ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಬಿಡುವು ಮಾಡಿಕೊಂಡು ಕ್ರಿಕೆಟ್ ನೋಡುವುದಾಗಿಯೂ ತಿಳಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]