ಕನ್ನಡದ ಮೈನಾ (Mynaa) ನಟಿ ನಿತ್ಯಾ ಮೆನನ್ (Nithya Menen) ಇದೀಗ ‘ಕುಮಾರಿ ಶ್ರೀಮತಿ’ (Kumari Srimathi) ಆಗಿ ಬರುತ್ತಿದ್ದಾರೆ. ಹೊಸ ಸಿರೀಸ್ ಮೂಲಕ ಬಹುಭಾಷೆಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಸೆ.28ಕ್ಕೆ ಕುಮಾರಿ ಶ್ರೀಮತಿ ಒಟಿಟಿಯಲ್ಲಿ ಬರಲಿದೆ. ಆದರೆ ಕನ್ನಡದ ನಟಿ ನಿತ್ಯಾ ನಟಿಸುತ್ತಿರೋ ಈ ಪ್ರಾಜೆಕ್ಟ್ ಕನ್ನಡದಲ್ಲಿ ಲಭ್ಯವಿಲ್ಲ. ಕನ್ನಡದಲ್ಲಿ ಯಾಕೆ ಇಲ್ಲ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಬಹುಭಾಷಾ ನಟಿ ನಿತ್ಯಾ ಮೆನನ್ ಅವರು ಕುಮಾರಿ ಶ್ರೀಮತಿ ವೆಬ್ ಸಿರೀಸ್‌ನಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಗೋಮಟೇಶ್ ಉಪಾಧ್ಯೆ ನಿರ್ದೇಶಿಸಿದ್ದಾರೆ. ವೆಬ್ ಸರಣಿ ಟೀಸರ್‌ನ ಖ್ಯಾತ ನಟಿ ಕೀರ್ತಿ ಸುರೇಶ್ ಆನ್‌ಲೈನ್‌ನಲ್ಲಿ ರಿಲೀಸ್ ಮಾಡುವ ಮೂಲಕ ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ನಾಯಕಿನಾ? ಸ್ಯಾಮ್ ಕಡೆಯಿಂದ ಸಿಕ್ತು ಉತ್ತರ
7 ಸಂಚಿಕೆಗಳಲ್ಲಿ ‘ಕುಮಾರಿ ಶ್ರೀಮತಿ’ ಸೆ.28ಕ್ಕೆ ಪ್ರಸಾರವಾಗಲಿದ್ದು, ತೆಲುಗು, ತಮಿಳು, ಮಲಯಾಳಂ, ಮತ್ತು ಹಿಂದಿಯಲ್ಲಿ ಪ್ರಸಾರವಾಗಲಿದೆ. ಆದರೆ ಕನ್ನಡದಲ್ಲಿ ಬಿಡುಗಡೆ ಆಗದೇ ಇರೋದಕ್ಕೆ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತಂಡಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕನ್ನಡದ ಮೈನಾ, ವಿಷ್ಣುವರ್ಧನ್, ಐದು ಒಂದ್ಲಾ ಐದು, ಜೋಶ್ ಸಿನಿಮಾಗಳಲ್ಲಿ ನಿತ್ಯಾ ಮೆನನ್ ನಟಿಸಿದ್ದಾರೆ.