ಸಮಂತಾ (Samantha) ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿರೋದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಸಮಂತಾ ಬಾಲಿವುಡ್‌ನ ಬಿಗ್ ಸ್ಟಾರ್ ಸಲ್ಮಾನ್ ಖಾನ್‌ಗೆ (Salman Khan) ನಾಯಕಿಯಾಗ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುದ್ದಿ ನಿಜಾನಾ? ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.
‘ಶೇರ್‌ಷಾ’ ನಿರ್ದೇಶಕ ವಿಷ್ಣುವರ್ಧನ್ ಅವರ (Vishnuvardhan) ಮುಂಬರುವ ಸಿನಿಮಾಗೆ ಸಲ್ಮಾನ್ ಖಾನ್ ಹೀರೋ ಆಗಿ ಫಿಕ್ಸ್ ಆಗಿದ್ದಾರೆ. ಸಲ್ಲು ಜೊತೆ ಡ್ಯುಯೇಟ್ ಹಾಡೋ ನಾಯಕಿ ಸಮಂತಾ ಎಂಬ ಸುದ್ದಿಗೆ ಈಗ ಕ್ಲ್ಯಾರಿಟಿ ಸಿಕ್ಕಿದೆ. ಇನ್ಸ್ಟಾಗ್ರಾಂ ಲೈವ್‌ನಲ್ಲಿ ಸಮಂತಾ, ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಖುಷಿ’ ಸಕ್ಸಸ್ ನಂತರ ತಮ್ಮ ಮುಂದಿನ ಸಿನಿಮಾ ಯಾವುದು ಎಂಬುದನ್ನ ನಟಿ ಬಾಯ್ಬಿಟ್ಟಿದ್ದಾರೆ.
ನನ್ನ ಮುಂದಿನ ಪ್ರಾಜೆಕ್ಟ್ ಯಾವುದು ಇಲ್ಲ. ಯಾವುದೇ ಪ್ಲ್ಯಾನ್ ಇಲ್ಲ. ನಾನು ಕೆಲಸ ಮಾಡಲಿರುವ ಪ್ರಾಜೆಕ್ಟ್ ಬಗ್ಗೆ ಹೆಚ್ಚು ಯೋಚಿಸಿ ಮುಂದುವರೆಯಲು ಬಯಸುತ್ತೇನೆ. ನನ್ನ ಕಂಫರ್ಟ್ ಝೋನ್‌ನಿಂದ ಹೊರಗಿರುವ ಹೊಸ ಪಾತ್ರಗಳು ಬೇಕು ಎಂದಿದ್ದಾರೆ. ಅಲ್ಲಿಗೆ ಸಲ್ಮಾನ್ ಖಾನ್ ಜೊತೆಗಿನ ಬಾಲಿವುಡ್ ಸಿನಿಮಾ ಸುದ್ದಿ ಸುಳ್ಳು ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿದೆ.