Jailer ಸಕ್ಸಸ್ ಬಳಿಕ ಹೊಸ ಚಿತ್ರದ ಬಗ್ಗೆ ರಿಲೀಸ್ ಅಪ್‌ಡೇಟ್ ಕೊಟ್ರು ಮೋಹನ್ ಲಾಲ್

Public TV
1 Min Read
mohanlal

ಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾದಲ್ಲಿ ಮೋಹನ್ ಲಾಲ್ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ನಟಿಸಿದ್ದು ಕೆಲವೇ ನಿಮಿಷ ಆಗಿದ್ರು, ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇತ್ತು. ಈಗ ‘ಜೈಲರ್’ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾದ ರಿಲೀಸ್ ಬಗ್ಗೆ ಮೋಹನ್ ಲಾಲ್ ಅಪ್‌ಡೇಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

mohanlal 2

ಕಲಾವಿದರಿಗೆ ಭಾಷೆಯ ಬೇಲಿಯಿಲ್ಲ ಎಂಬುದನ್ನ ಮೋಹನ್‌ಲಾಲ್ (Mohanlal) ಈಗಾಗಲೇ ಪ್ರೂವ್ ಮಾಡಿದ್ದಾರೆ. ಯಾವುದೇ ಪಾತ್ರ ಕೊಟ್ರು ಆ ಪಾತ್ರವೇ ತಾವಾಗಿ ಬಿಡ್ತಾರೆ ಎಂಬುದಕ್ಕೆ ಅವರು ನಟಿಸಿದ ಸಿನಿಮಾಗಳೇ ಸಾಕ್ಷಿ. ಈಗ ‘ಮಲೈ ಕೋಟ್ಟೈ ವಾಲಿಬನ್’ ಎಂಬ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. 2024ರ ಜನವರಿ 24ರಂದು ಈ ಚಿತ್ರ ತೆರೆ ಕಾಣಲಿದೆ.

ಕೌಂಟ್‌ಡೌನ್ ಶುರುವಾಗಿದೆ. ಜನವರಿ 25, 2024ರಂದು ವಿಶ್ವದೆಲ್ಲೆಡೆ ರಿಲೀಸ್ ಆಗಲಿದೆ ಎಂದು ನಟ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಮೋಹನ್ ಲಾಲ್ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆಯಿದೆ. ಸಿನಿಮಾ, ಪಾತ್ರದ ಸೆಲೆಕ್ಷನ್‌ನಲ್ಲಿ ಯಾವಾಗಲೂ ಚ್ಯುಸಿಯಿರುವ ಮೋಹನ್ ಲಾಲ್, ಈ ಸಿನಿಮಾದಲ್ಲಿ ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಸಹಜವಾಗಿ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article