ಚೈತ್ರಾ ಕುಂದಾಪುರ ಮೇಲೆ ಮತ್ತೊಂದು FIR – ಸನಾತನ ಧರ್ಮ ಬಟ್ಟೆ ಮಳಿಗೆ ಪ್ರಕರಣದಲ್ಲೂ ವಂಚನೆ

Public TV
2 Min Read
Chaithra Kundapura

– ‘ಸಾಕ್ಷಾತ್ಕಾರದ ದಾರಿಯಲ್ಲಿ’ ಪುಸ್ತಕದೊಂದಿಗೆ ಸಾಂತ್ವನ ಕೇಂದ್ರಕ್ಕೆ ತೆರಳಿದ ಚೈತ್ರಾ

ಬೆಂಗಳೂರು: ವಂಚನೆ (Fraud) ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿ ಚೈತ್ರಾ ಕುಂದಾಪುರ ಮೇಲೆ ಮತ್ತೊಂದು ಎಫ್‌ಐಆರ್ (FIR) ದಾಖಲಾಗಿದೆ. ಸನಾತನ ಧರ್ಮದ ಬಟ್ಟೆ, ಬಟ್ಟಿಂಗ್ಸ್ ಮಾರಾಟ ಮಾಡಲು ಮಳಿಗೆಗೆ ಸಹಾಯ ಮಾಡುವುದಾಗಿ ವಂಚನೆ ಮಾಡಿರುವುದಾಗಿ ಪ್ರಕರಣ ದಾಖಲಿಸಲಾಗಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಚೈತ್ರಾ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಸುದಿನಾ ಎಂಬವರು ಈ ಪ್ರಕರಣ ದಾಖಲಿಸಿದ್ದಾರೆ. ಚೈತ್ರಾ ಕುಂದಾಪುರ 5 ಲಕ್ಷ ಹಣವನ್ನು ಪಡೆದು ವಂಚಿಸಿರುವುದಾಗಿ ದೂರು ನೀಡಿದ್ದಾರೆ. 2018ರಲ್ಲಿ 5 ಲಕ್ಷ ಹಣ ಪಡೆದು ಚೈತ್ರಾ ವಂಚಿಸಿದ್ದು, ಅಕೌಂಟ್ ಮುಖಾಂತರ 3 ಲಕ್ಷ ಹಣವನ್ನು ಸುದಿನಾ ಕಳುಹಿಸಿದ್ದಾರೆ. ಬಳಿಕ 2 ಲಕ್ಷ ನಗದು ಹಣವನ್ನೂ ಚೈತ್ರಾಳಿಗೆ ನೀಡಿದ್ದಾರೆ. ಇದನ್ನೂ ಓದಿ: ಕೊಲೆಗೈದು ಗೋಣಿ ಚೀಲದಲ್ಲಿ ಶವ ಹಾಕಿ ಎಸೆದು ಹೋಗಿದ್ದ ಆರೋಪಿಗಳು ಅರೆಸ್ಟ್

ಇದಾದ ಬಳಿಕ ಚೈತ್ರಾ ಕುಂದಾಪುರ ಇತ್ತ ಅಂಗಡಿಯೂ ಇಲ್ಲ, ಅತ್ತ ಹಣವೂ ಇಲ್ಲದಂತೆ ಮಾಡಿದ್ದು, ಹಣ ವಾಪಸ್ ಕೇಳಿದರೆ ಅತ್ಯಾಚಾರ ಪ್ರಕರಣ ದಾಖಲು ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆಯಿಂದ ಚೈತ್ರಾ ವಿರುದ್ಧ ದೂರು ಕೊಡದೆ ದೂರ ಉಳಿದಿದ್ದಾಗಿ ಸುದಿನಾ ಹೇಳಿದ್ದಾರೆ. ಇದನ್ನೂ ಓದಿ: 3 ದಿನಗಳ ಆಸ್ಪತ್ರೆ ನಾಟಕ ಬಂದ್ – ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್‌

ಇನ್ನು ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ವಂಚಿಸಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರಳನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಸಾಂತ್ವನ ಕೇಂದ್ರಕ್ಕೆ ಹೋಗುವ ಸಂದರ್ಭ ಚೈತ್ರಾ ಕುಂದಾಪುರ ‘ಸಾಕ್ಷಾತ್ಕಾರದ ದಾರಿಯಲ್ಲಿ’ ಎಂಬ ಪುಸ್ತಕದೊಂದಿಗೆ ತೆರಳಿದ್ದಾಳೆ. ಇದನ್ನೂ ಓದಿ: ಚೈತ್ರಾ ಕುಂದಾಪುರಗೆ ಪಿಟ್ಸ್ ಬಂದಿಲ್ಲ, ನೊರೆ ಅವರೇ ಮಾಡಿಕೊಂಡಿರೋದು: ಡಾ.ದಿವ್ಯಪ್ರಕಾಶ್

ಈ ಪುಸ್ತಕವನ್ನು ಬಿ.ಜಿ.ಎಲ್.ಸ್ವಾಮಿ ಬರೆದಿದ್ದು, ಎಲೆ ಅಡಿಕೆ, ಗಾಂಜಾ ಅಫೀಮು, ಕಾಫಿ, ತಂಬಾಕು, ಟೀಗಳ ಬಗ್ಗೆ ಪುಸ್ತಕದಲ್ಲಿ ವಿವೇಚಿಸಲಾಗಿದೆ. ಅಲ್ಲದೇ ಇವೆಲ್ಲಾ ಭಾರತಕ್ಕೆ ಬಂದ ಬಗೆಯನ್ನು ವಿವರಿಸಲಾಗಿದ್ದು, ಅನೇಕರ ಬದುಕಿನಲ್ಲಿ ಇದು ಹಾಸುಹೊಕ್ಕಾಗಿರುವ ಚಟದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್ ಕೇಸ್- ಗೋವಿಂದ ಪೂಜಾರಿ ವಿರುದ್ಧ ಗಗನ್ ದೂರು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article