ರಾಜಕೀಯದಿಂದ ದೂರ ಉಳಿಯುತ್ತೇನೆ : ನಟ ನಿಖಿಲ್ ಕುಮಾರಸ್ವಾಮಿ

Public TV
1 Min Read
NikhilKumaraswamy

ಜೆಡಿಎಸ್ ಪಕ್ಷದ ಯುವ ಮುಖಂಡ, ನಟ ನಿಖಿಲ್ ಕುಮಾರಸ್ವಾಮಿ (Nikhil Kumar) ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಬೀದರ್ ನಲ್ಲಿ ಮಾತನಾಡಿರುವ ನಿಖಿಲ್, ‘ರಾಜಕೀಯದಿಂದ (Politics) ದೂರವಿರುತ್ತೇನೆ. ಆದರೆ, ಸಾಮಾನ್ಯ ಕಾರ್ಯಕರ್ತನಾಗಿ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲಾರೆ’ ಎಂದಿದ್ದಾರೆ.

nikhil kumaraswamy 1

ಈ ಹಿಂದೆ ಕುಮಾರಸ್ವಾಮಿ ಅವರು ಇದೇ ಮಾತುಗಳನ್ನು ಆಡಿದ್ದರು. ಸಿನಿಮಾದಲ್ಲಿ (Cinema) ಸಾಕಷ್ಟು ಅವಕಾಶಗಳು ಇರುವುದರಿಂದ ಅಲ್ಲಿಯೇ ನೆಲೆಯೂರುವಂತೆ ಹೇಳಿದ್ದೇನೆ. ರಾಜಕಾರಣಕ್ಕೆ ನಿಖಿಲ್ ಬರುವುದು ಬೇಡ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ತಂದೆಯ ಮಾತನ್ನು ಪುತ್ರ ನಿಖಿಲ್ ಮತ್ತೆ ನೆನಪಿಸಿದ್ದಾರೆ.

nikhil kumaraswamy 2

ಸದ್ಯ ನಿಖಿಲ್ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ (Lyca Production) ಈಗ ಇವರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಈ ಚಿತ್ರದ ನಾಯಕನಾಗಿ ನಿಖಿಲ್ ಕುಮಾರ್ ನಟಿಸುತ್ತಿದ್ದರೆ, ಲಕ್ಷ್ಮಣ್ ಅವರು ನಿರ್ದೇಶಕರು.

ಈ ಹಿಂದೆ ‘ಸೀತಾರಾಮ ಕಲ್ಯಾಣ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಲೈಕಾ ಸಂಸ್ಥೆಯ ಸುಭಾಸ್ಕರನ್ (Subhaskaran) ಮತ್ತು ನಿಖಿಲ್ ಭೇಟಿ ಮಾಡಿದ್ದರು. ಆ ಸಮಯದಲ್ಲಿ ‘ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರದಲ್ಲಿ ನೀವು ನಾಯಕರಾಗಿ ನಟಿಸಬೇಕು’ ಎಂದು ಸುಭಾಸ್ಕರನ್ ಹೇಳಿದ್ದರು. ಅದಕ್ಕೆ ನಿಖಿಲ್ ಒಪ್ಪಿಗೆ ಸೂಚಿಸಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article