ಎಲ್ಲರೂ ನನ್ನನ್ನ 2ನೇ ದೇವರಾಜ ಅರಸು ಅಂತಾರೆ: ಸಿದ್ದರಾಮಯ್ಯ

Public TV
1 Min Read
Siddaramaiah 1 1

ಬೆಂಗಳೂರು: ನನ್ನನ್ನ ಎಲ್ಲರೂ 2ನೇ ದೇವರಾಜ ಅರಸು ಅಂತಾರೆ. ಆದ್ರೆ ನಾನು ದೇವರಾಜ ಅರಸು ಆಗೋದಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಕಾರಿನಲ್ಲಿ ಓಡಾಡಿದಾಕ್ಷಣ ಅರಸು ಆಗೋದಕ್ಕೆ ಸಾಧ್ಯವಿಲ್ಲ ಎಂಬ ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ – ಓರ್ವ ಸಾವು, ನಾಲ್ವರು ಗಂಭೀರ

BK HARIPRASAD

ಬಹಳ ಜನ ನನ್ನನ್ನ ದೇವರಾಜ ಅರಸು (D Devaraj Arasu) ನಂತರ ಸಾಮಾಜಿಕ ಹರಿಕಾರರು ಅಂತಾರೆ, 2ನೇ ದೇವರಾಜ ಅರಸು ಅಂತಾರೆ. ಆದ್ರೆ, ದೇವರಾಜ ಅರಸು ದೇವರಾಜ ಅರಸುನೇ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ದೇವರಾಜ ಅರಸು ಆಗೋದಕ್ಕೆ ಸಾಧ್ಯವಿಲ್ಲ. ಭಾಷಣದ ಮಾತಿಗಿಂತ ಯಾರಲ್ಲಿ ಬದ್ಧತೆ-ಕಾಳಜಿ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೈತ್ರಾ ಡೀಲ್ ಕೇಸ್; ನನ್ನ ಹೆಸರು ಬಂದಿರೋದು ಬೇಸರವಾಗಿದೆ- ವಜ್ರದೇಹಿ ಮಠದ ಸ್ವಾಮೀಜಿ

ಅರಸು, ಇಂದಿರಾಗಾಂಧಿ, ನೆಹರೂ ಎಲ್ಲರೂ ಭಿನ್ನವಾಗಿದ್ದರು. ಅವರ ಸಾಮಾಜಿಕ ಕೊಡುಗೆಗಳನ್ನೂ ಅಲ್ಲಗಳೆಯುವಂತಿಲ್ಲ. ಒಬ್ಬರು ಇನ್ನೊಬ್ಬರಾಗಲು ಸಾಧ್ಯವಿಲ್ಲ. ಹಾಗೆಯೇ ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ. ನಾವು ರೂಪಿಸುವ ಕಾಳಜಿ ಮತ್ತು ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ ಇರುತ್ತದೆ ಅಷ್ಟೇ ಎಂದಿದ್ದಾರೆ.

Web Stories

Share This Article