ರಕ್ಷಿತ್ ಶೆಟ್ಟಿ ಸಿನಿಮಾ ನೋಡಿ ‘ಮಾಸ್ಟರ್‌ಪೀಸ್’ ಎಂದ ಸಮಂತಾ

Public TV
2 Min Read
samantha 2

ಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಕನ್ನಡಿಗರ ದಿಲ್ ಗೆದ್ದಿದೆ. ಈಗ ತೆಲುಗು ಭಾಷೆಯಲ್ಲೂ ಸೆ.22ರಂದು ಈ ಸಿನಿಮಾ ತೆರೆ ಕಾಣುತ್ತಿದೆ. ಈ ನಡುವೆ ರಕ್ಷಿತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾವನ್ನ ಸಮಂತಾ (Samantha) ನೋಡಿ ಹಾಡಿ ಹೊಗಳಿದ್ದಾರೆ. ರಕ್ಷಿತ್ ಚಿತ್ರಕ್ಕೆ ಸಮಂತಾ, ಮಾಸ್ಟರ್‌ಪೀಸ್ ಎಂದಿದ್ದಾರೆ.

samantha

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಸಿನಿಮಾ ನೋಡಿದ ಮೇಲೆ ಆದರ ಬಗ್ಗೆ ಸಮಂತಾ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ರುಕ್ಮಿಣಿ ವಸಂತ್ ಅವರ ನಟನೆಗೆ ಫಿದಾ ಆಗಿದ್ದಾರೆ. ಇದು ಮಾಸ್ಟರ್‌ಪೀಸ್ ಚಿತ್ರ, ಇದು ಕಡ್ಡಾಯವಾಗಿ ಎಲ್ಲರೂ ನೋಡಬೇಕಿರುವ ಸಿನಿಮಾ. ರಕ್ಷಿತ್ ಶೆಟ್ಟಿ(Rakshit Shetty), ರುಕ್ಮಿಣಿ ವಸಂತ್ (Rukmini Vasanth), ಹೇಮಂತ್ ರಾವ್ ನಿಮ್ಮ ಈ ಸುಂದರವಾದ ತಂಡಕ್ಕೆ ದೊಡ್ಡ ಅಭಿನಂದನೆಗಳು ಎಂದು ಸಮಂತಾ ಬರೆದುಕೊಂಡಿದ್ದಾರೆ.

RAKSHIT SHETTY

ಇದರ ಜೊತೆಗೆ ನಟಿ ರುಕ್ಮಿಣಿ ವಸಂತ್‌ಗೆ ವಿಶೇಷ ಮೆಚ್ಚುಗೆಯನ್ನು ತಿಳಿಸಿದ್ದಾರೆ ಸಮಂತಾ. ಹೇ ಸುಂದರಿ ರುಕ್ಮಿಣಿ ವಸಂತ್, ಎಂಥ ಅದ್ಭುತ ನಟನೆ ಬ್ರಿಲಿಯಂಟ್, ದೊಡ್ಡ ಅಪ್ಪುಗೆ ನಿಮಗೆ ಎಂದು ಸಮಂತಾ ಬರೆದುಕೊಂಡಿದ್ದಾರೆ. ಸಮಂತಾ ಮೆಚ್ಚುಗೆಗೆ ನಟಿ ರುಕ್ಮಿಣಿ ಕೂಡ ಪ್ರತಿಕ್ರಿಯೆ ನೀಡಿ, ಧನ್ಯವಾದಗಳನ್ನ ತಿಳಿಸಿದ್ದಾರೆ. ಇದನ್ನೂ ಓದಿ:ಮದುವೆಯಾಗಿ 8 ವರ್ಷ, ಮಗು ಬಗ್ಗೆ ಗುಡ್ ನ್ಯೂಸ್ ಕೊಡೋದ್ಯಾವಾಗ? ಪ್ರಜ್ವಲ್ ದೇವರಾಜ್ ಪ್ರತಿಕ್ರಿಯೆ

samantha 1 1

ಸೆ.1ರಂದು ಸಪ್ತಸಾಗರದಾಚೆ ಎಲ್ಲೋ (Sapta Sagaradaache Yello) ಸಿನಿಮಾ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಮನು-ಪ್ರಿಯಾ ಲವ್ ಸ್ಟೋರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದೀಗ ತೆಲುಗು ವರ್ಷನ್‌ನಲ್ಲಿ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ. ಇದೇ ಸೆ.22ರಂದು ರಿಲೀಸ್ ಆಗುತ್ತಿದೆ. ಇದನ್ನೂ ಓದಿ:ಮತ್ತೊಂದು ಬಿಗ್ ಪ್ರಾಜೆಕ್ಟ್ ಒಪ್ಪಿಕೊಂಡ ಅನುಷ್ಕಾ ಶೆಟ್ಟಿ

‘ಸಪ್ತಸಾಗರದಾಚೆ ಎಲ್ಲೋ’ ಪಾರ್ಟ್ 2 ಅಕ್ಟೋಬರ್ 20ಕ್ಕೆ ರಿಲೀಸ್ ಆಗುತ್ತಿದೆ. ರಕ್ಷಿತ್, ರುಕ್ಮಿಣಿ ಜೊತೆ ಟೋಬಿ ನಾಯಕಿ ಚೈತ್ರಾ ಆಚಾರ್ ಕೂಡ ಸಾಥ್ ನೀಡಿದ್ದಾರೆ. ಮೊದಲ ಭಾಗ ಹಿಟ್ ಆದ ಮೇಲೆ ಸಿನಿಮಾದ 2ನೇ ಭಾಗ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article