ಬೆಂಗಳೂರು ಏರ್‌ಪೋರ್ಟ್‌ಗೆ ಮಾಧವನ್‌ ಮೆಚ್ಚುಗೆ- ನರೇಂದ್ರ ಮೋದಿ ಪ್ರತಿಕ್ರಿಯೆ

Public TV
1 Min Read
madhavan 1

ತ್ತೀಚಿಗೆ ಬಹುಭಾಷಾ ನಟ ಮಾಧವನ್ (R Madhavan) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (Bengaluru Kempegowda International Airport) ನೂತನ ಟರ್ಮಿನಲ್ 2ಗೆ (Terminal 2) ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಮೂಲಸೌಕರ್ಯವನ್ನ ನೋಡಿ ಹಾಡಿ ಹೊಗಳಿದ್ದರು. ವಿಮಾನ ನಿಲ್ದಾಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಟ ಶ್ಲಾಘಿಸಿದ್ದರು. ಮಾಧವನ್ ಪೋಸ್ಟ್‌ಗೆ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

madhavan 2

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಇದ್ದೇನೆ, ಇದು ಅತ್ಯುನ್ನತವಾಗಿದೆ. ಇಲ್ಲಿನ ಮೂಲಸೌಕರ್ಯಗಳು ವಿಶ್ವದ ಅತ್ಯುತ್ತಮಗಳಲ್ಲಿ ಒಂದಾಗಿದೆ. ನನಗೆ ತುಂಬಾ ಹೆಮ್ಮೆ ಆಗಿದೆ. ಈ ವಿಮಾನ ನಿಲ್ದಾಣದ ಒಳಂಗಾಣ ವಿನ್ಯಾಸ ಅದ್ಭುತವಾಗಿದೆ. ಇದನ್ನು ವಿಮಾನ ನಿಲ್ದಾಣ ಎಂದರೆ ಯಾರೂ ನಂಬುವುದಿಲ್ಲ. ಇಲ್ಲಿನ ಸೀಲಿಂಗ್‌ನಲ್ಲಿ ಗಿಡಗಳನ್ನು ತೂಗುಹಾಕಲಾಗಿದೆ. ಇದನ್ನೂ ಓದಿ:ಮತ್ತೊಂದು ಬಿಗ್ ಪ್ರಾಜೆಕ್ಟ್ ಒಪ್ಪಿಕೊಂಡ ಅನುಷ್ಕಾ ಶೆಟ್ಟಿ

 

View this post on Instagram

 

A post shared by R. Madhavan (@actormaddy)

ಅವೆಲ್ಲ ನಿಜವಾದ ಗಿಡಗಳು, ಅವುಗಳಿಗೆ ಪ್ರತಿದಿನ ಸೀಲಿಂಗ್‌ನಿಂದ ನೀರು ಹಾಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಧವನ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಪೋಸ್ಟ್‌ಗೆ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.

ಆರ್.ಮಾಧವನ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ‘ಭಾರತದ ಅಭಿವೃದ್ಧಿಗಾಗಿ ಮುಂದಿನ ಜನರೇಷನ್‌ಗೆ ಮೂಲಭೂತ ಸೌಕರ್ಯಗಳು’ ಎಂದು ನರೇಂದ್ರ ಮೋದಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ನಮ್ಮ ಬೆಂಗಳೂರು ಎಂದು ಕಾಮೆಂಟ್‌ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article