ದಾವಣಗೆರೆ: ನಗರದಲ್ಲಿ ಪ್ರತಿಷ್ಠಿತ ಏರಿಯಾದ ಮನೆಗಳಲ್ಲಿ ಜನರಿಗೆ ಸೇಫ್ ಇಲ್ವಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಬುಧವಾರ ಹಾಡಹಗಲೇ ದರೋಡೆಕೋರನೊಬ್ಬ ಒಂಟಿ ಮನೆಗೆ ನುಗ್ಗಿ ಗೃಹಿಣಿಯ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಮನೆಯಲ್ಲಿದ್ದ 5 ಲಕ್ಷ ರೂ.ಗೂ ಹೆಚ್ಚು ಹಣವನ್ನು ದರೋಡೆ (Robbery) ಮಾಡಿದ ಘಟನೆ ದಾವಣಗೆರೆಯ (Davanagere) ಕುಂದುವಾಡ (Kunduvada) ರಸ್ತೆಯಲ್ಲಿರುವ ಲೇಕ್ ವಿವ್ ಬಡಾವಣೆಯಲ್ಲಿ ನಡೆದಿದೆ.
ಶ್ರೀನಾಥ್ ಎನ್ನುವವರ ಮನೆಯಲ್ಲಿ ದರೋಡೆ ನಡೆದಿದ್ದು, ದರೋಡೆಕೋರ ಮನೆಗೆ ನುಗ್ಗಿ ಹಣ ಎಗರಿಸಿಕೊಂಡು ಹೋದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿದ್ಯಾ ನಗರ ಠಾಣೆ ಪೊಲೀಸರು ದರೋಡೆಕೋರನಿಗಾಗಿ ಹುಡುಕಾಟ ನಡೆಸಿದ್ದಾರೆ.
ಒಂಟಿ ಮನೆಗೆ ಹಾಡಹಗಲೇ ನುಗ್ಗಿದ ದರೋಡೆಕೋರ ಮನೆಯಲ್ಲಿ ಶ್ರೀನಾಥ್ ಪತ್ನಿ ಒಬ್ಬರೇ ಇದ್ದುದನ್ನು ತಿಳಿದು ಮೊದಲು ಮಗುವನ್ನು ಹೊಡೆದು ರೂಮ್‌ನಲ್ಲಿ ಕೂಡಿಹಾಕಿದ್ದಾನೆ. ನಂತರ ಶ್ರೀನಾಥ್ ಪತ್ನಿ ಯೋಗೇಶ್ವರಿಯನ್ನು ಹಿಂದೆಯಿಂದ ತಲೆಗೆ ಕಲ್ಲಿನಿಂದಹೊಡೆದಿದ್ದಾನೆ. ಮಗುವಿನ ಚಿಕಿತ್ಸೆಗೆ ಎಂದು ಇಟ್ಟುಕೊಂಡಿದ್ದ ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಮನಸ್ಸು ಸರಿಯಿಲ್ಲವೆಂದು ಚಡಪಡಿಸ್ತಿದ್ದ ಗೃಹಿಣಿ 10 ತಿಂಗಳ ಮಗು ಬಿಟ್ಟು ಆತ್ಮಹತ್ಯೆ!
ಸದ್ಯ ಗಾಯಾಳು ಯೊಗೇಶ್ವರಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಎಸ್‌ಪಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ, ರಾಮಗೊಂಡ ಬಸರಿಗೆ ಭೇಟಿ ಪರಿಶೀಲನೆ ನಡೆಸಿದರು. ಅಲ್ಲದೆ ಕಳ್ಳನಿಗಾಗಿ ಬಲೆ ಬೀಸಿದ ದಾವಣಗೆರೆ ಪೊಲೀಸರು ತಂಡಗಳನ್ನಾಗಿ ಮಾಡಿ ಶೋಧಕಾರ್ಯ ನಡೆಸುತ್ತಿದ್ದಾರೆ. ಇನ್ನು ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಡಹಗಲೇ ನಡೆದ ದರೋಡೆಯಿಂದ ದಾವಣಗೆರೆ ಹೊರ ವಲಯದಲ್ಲಿ ಏಕಾಂಗಿ ಮನೆಗಳ ನಿವಾಸಿಗಳು ಭಯಭೀತರಾಗಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್ – ಬಸ್‌ನಿಂದ ಬಿದ್ದು ಮಹಿಳೆಗೆ ಗಾಯ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]