ಬೀದರ್: ಎಂಎಲ್‍ಎ (MLA) ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿ ಬಂಧನವಾಗಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ (Chaitra Kundapura) ಮೂರು ದಿನಗಳ ಹಿಂದೆ ಗಡಿ ಜಿಲ್ಲೆ ಬೀದರ್ ಗೆ (Bidar) ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಎಂಎಲ್‌ಎ ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಉದ್ಯಮಿಗೆ ಚೈತ್ರಾ ಮೋಸ ಮಾಡಿದ್ದು ಹೇಗೆ? ಪೂರ್ಣ ಕಥೆ ಓದಿ
9 ರಂದು ಕಲಬುರಗಿ ಪ್ರವಾಸ ಮುಗಿಸಿ 10 ರಂದು ಬೀದರ್ ಜಿಲ್ಲೆಯ ಹುಮ್ನಾಬಾದ್ ಹಾಗೂ ಭಾಲ್ಕಿಗೆ ಚೈತ್ರಾ ಕುಂದಾಪುರ ಭೇಟಿ ನೀಡಿದ್ದಾರೆ. ಹುಮ್ನಾಬಾದ್ ನಲ್ಲಿ ಜಾಧವ್ ಎಂಬವರ ಮನೆಗೆ ಭೇಟಿ ನೀಡಿ ಬಳಿಕ ಭಾಲ್ಕಿಯ ಈಶ್ವರ್ ರಮ್ಮಾ ಎಂಬ ಹಿಂದೂ ಸಂಘಟನೆಯ ಕಾರ್ಯಕರ್ತನ ಮನೆಗೆ ಭೇಟಿ ನೀಡಿದ್ದಾರೆ. ಆದ್ರೆ ಉಪಹಾರ ಸೇವಿಸಿದ ಚೈತ್ರಾ, ಕಾರ್ಯಕ್ರಮದಲ್ಲಿ ಭಾಗಿಯಾಗದೆ ಹುಮ್ನಾಬಾದ್ ಗೆ ವಾಪಸ್ಸಾಗಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ 10 ದಿನ ಪೊಲೀಸ್ ಕಸ್ಟಡಿಗೆ
ಹುಮ್ನಾಬಾದ್ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕಾರ್ಯಕ್ರಮ ರದ್ದು ಮಾಡಿ ಕುಂದಾಪುರಕ್ಕೆ ಚೈತ್ರಾ ವಾಪಸಾಗಿದ್ದರು. ಯಾವುದೋ ಫೋನ್ ಬಂತು ಎಂದು ಕಾರ್ಯಕ್ರಮ ರದ್ದು ಮಾಡಿ ಚೈತ್ರಾ ಕುಂದಾಪುರಗೆ ವಾಪಸ್ಸಾಗಿದ್ದು ಇದೀಗ ಭಾರೀ ಅನುಮಾನಗಳಿಗೆ ಕಾರಣವಾಗಿದೆ.
Web Stories