ರಕ್ಷಿತಾರಂತೆಯೇ ಆರಾಧನಾ ಒನ್ ಟೇಕ್ ಆರ್ಟಿಸ್ಟ್ ಎಂದು ಹೊಗಳಿದ ದರ್ಶನ್

Public TV
2 Min Read
DARSHAN

ಸ್ಯಾಂಡಲ್‌ವುಡ್ (Sandalwood) ಡಿಬಾಸ್ ದರ್ಶನ್ (Darshan) ನಟನೆಯ ‘ಕಾಟೇರ’ (Katera) ಸಿನಿಮಾ ಕೊನೆಯ ಹಂತದ ಚಿತ್ರೀಕರಣ ಮುಗಿಸಿದೆ. ಇದೇ ಖುಷಿಯಲ್ಲಿ ಸಿನಿಮಾ ಬಗ್ಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಈ ವೇಳೆ ಮಾಲಾಶ್ರೀ ಪುತ್ರಿ, ಸಿನಿಮಾದ ನಾಯಕಿ ಆರಾಧನಾ(Aradhana Ram) ಬಗ್ಗೆ ದರ್ಶನ್ ಹಾಡಿ ಹೊಗಳಿದ್ದಾರೆ.

darshan

ದೊಡ್ಡ ಪ್ರೋಡಕ್ಷನ್ ಅನ್ನೋದಕ್ಕಿಂತ, ನನಗೆ ಸಿನಿಮಾ ದೊಡ್ಡದು. ಇಡೀ ಸಿನಿಮಾ ಎಲ್ಲರನ್ನೂ ಕರೆದುಕೊಂಡು ಹೋಗುತ್ತದೆ. ಇವತ್ತು ಕ್ಲೈಮ್ಯಾಕ್ಸ್ ಶೂಟ್ ನಡೆದಿದೆ. ಇನ್ನೂ 3 ಸಾಂಗ್ ಶೂಟ್ ಬಾಕಿಯಿದೆ. ಸಿನಿಮಾ ಶೂಟಿಂಗ್‌ಗೆ ಇಂದು 100ನೇ ದಿನ, ಆದರೆ ನನ್ನ ಡೇಟ್ಸ್ 85 ದಿನ ಅಷ್ಟೇ. ನನಗೆ ಇಂದು 71ನೇ ದಿನದ ಶೂಟಿಂಗ್‌ ದಿನ ಎಂದು ಚಿತ್ರದ ನಟ ದರ್ಶನ್ ಮಾಹಿತಿ ನೀಡಿದ್ದರು.‌ ಇದನ್ನೂ ಓದಿ:‘ಮ್ಯಾಟ್ನಿ’ ಚಿತ್ರದ ಎಣ್ಣೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್

darshan 2

ಮೋಹನ್ ಆಳ್ವಾ ಜೊತೆ ನನಗೆ ನಟಿಸಲು ಮೊದಲ ಸಿನಿಮಾ ಆಗಿದ್ದು, ಈ ಹಿಂದೆ ಅವರ ಸಿನಿಮಾದಲ್ಲಿ ನಾನು ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದೆ ಎಂದು ಹಳೆಯ ದಿನಗಳನ್ನ ನಟ ಬಿಚ್ಚಿಟ್ಟರು. ಇನ್ನೂ ನಟ ಜಗಪತಿ ಬಾಬು ಅವರು ರಾಬರ್ಟ್ ಆಗಲಿ, ಈ ಸಿನಿಮಾ ಆಗಲಿ ಅವರು ಮನೆಯಿಂದಲೇ ಅಡುಗೆ ಮಾಡಿಸಿ ತರುತ್ತಿದ್ದರು. ಕ್ಯಾರ್‌ವ್ಯಾನ್‌ಗೆ ಹೋಗದೇ ಅಲ್ಲೇ ಚೇರ್ ಹಾಕಿ ಕೂತಿದ್ವಿ. ಎಲ್ಲರ ಮಧ್ಯೆ ಒಳ್ಳೆಯ ಭಾವನೆ ಇತ್ತು ಎಂದು ದರ್ಶನ್ ಮುಕ್ತವಾಗಿ ಮಾತನಾಡಿದ್ದರು.

ARADHANA RAM

ರಕ್ಷಿತಾ (Rakshitha) ಅವರ ಸಾಲಿಗೆ ಆರಾಧನಾ ನಿಲ್ಲುತ್ತಾರೆ. ಅವರು ಒನ್ ಟೇಕ್ ಆರ್ಟಿಸ್ಟ್ ಎಂದು ಸಹನಟಿ ಬಗ್ಗೆ ದರ್ಶನ್ ಮೆಚ್ಚುಗೆ ಸೂಚಿಸಿದ್ದರು. ಮಾಲಾಶ್ರೀ ಅವರ ಬಗ್ಗೆ ನಾವು ಮಾತನಾಡೋಕೆ ಆಗುತ್ತಾ? ಅವರ ಮುಂದೆ ಯಾರೇ ನಿಂತರೂ ಬಡಿದು ಬಾಯಿಗೆ ಹಾಕಿ ಕೊಳ್ಳುತ್ತಾ ಇದ್ರು. ಇದನ್ನೂ ಓದಿ:Gadar 2 ಸಕ್ಸಸ್, ರಾಜಕೀಯಕ್ಕೆ ವಿದಾಯ ಹೇಳ್ತಾರಾ ಸನ್ನಿ ಡಿಯೋಲ್?

Darshan1 2‘ಕಾಟೇರ’ ಸಿನಿಮಾದಲ್ಲಿ ಮೊದಲಿನಿಂದ ಕಡೆ ತನಕ ಅಶ್ಲೀಲತೆ ಇಲ್ಲ. ಸಭ್ಯವಾದ ಸಂಭಾಷನೆ ಇದೆ. ಚಿತ್ರಕ್ಕೆ ಏನೂ ಬೇಕೋ ನಿರ್ಮಾಪಕರು ಒದಗಿಸಿದ್ದಾರೆ. ಇದು ಒಬ್ಬರ ಸಿನಿಮಾ ಅಲ್ಲ, ಪ್ಲೇಟ್ ತೊಳೆಯೋನಿಂದ ಹಿಡಿದು ಎಲ್ಲರಿಗೂ ಈ ಸಿನಿಮಾ ಸೇರಲಿದೆ ಎಂದು ನಟ ಮಾತನಾಡಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್-ಆರಾಧನಾ ರಾಮ್ ನಟನೆಯ ‘ಕಾಟೇರ’ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್‌ಲೈನ್ ವೆಂಕಟೇಶ್ (Rockline Venkatesh) ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

Share This Article