ಬಿಜೆಪಿ-ಜೆಡಿಎಸ್ ಮೈತ್ರಿ ಸುದೀರ್ಘ ಚೆರ್ಚೆ ಆಗಬೇಕು: ಬೊಮ್ಮಾಯಿ

Public TV
2 Min Read
BASAVARAJ BOMMAI 1 2

ಬಳ್ಳಾರಿ: ಕರ್ನಾಟಕದಲ್ಲಿ 4 ತಿಂಗಳ ಆಡಳಿತ ನೋಡಿದರೆ ಗೊತ್ತಾಗುತ್ತದೆ, ಎಲ್ಲರೂ ಸೇರಿ ಕಾಂಗ್ರೆಸ್ ವಿರೋಧ ಮಾಡುವ ಅವಶ್ಯಕತೆ ಇದೆ. ಹೀಗಾಗಿ ಮೈತ್ರಿ (Alliance) ಮಾಡಿಕೊಳ್ಳಲು ಮುಂದಾಗಿದ್ದೇವೆ. ಆದರೆ ಮೈತ್ರಿ ಮಾತುಕತೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು ಮೈತ್ರಿ ವಿಚಾರವಾಗಿ ನಿನ್ನೆ ಕುಮಾರಸ್ವಾಮಿ ಹೇಳಿಕೆ ಗಮನಿಸಿದರೆ, ಈ ಕುರಿತು ಚೆರ್ಚೆ ಆಗಬೇಕು. ಮೈತ್ರಿ ಮಾಡಿಕೊಳ್ಳುವ ವಿಚಾರ ಸುದೀರ್ಘ ಚೆರ್ಚೆ ಆಗಬೇಕು. ಬಳಿಕ ಮಾತ್ರವೇ ಅಂತಿಮ ಹಂತದ ನಿರ್ಧಾರ ಆಗಲಿದೆ ಎಂದಿದ್ದಾರೆ.

basavaraj bommai 1

ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರು ಕೀಲು ಗೊಂಬೆಯಾಗಿದ್ದಾರೆ. 2013 ರಲ್ಲಿ ಒಂದು ರೀತಿಯಲ್ಲಿ ಇದ್ದರು, ಈಗ ಇರುವ ಸಿದ್ದರಾಮಯ್ಯ ಬೇರೆ. ಸಿದ್ದರಾಮಯ್ಯ ಅವರನ್ನು ಎರಡು ರೂಪದಲ್ಲಿ ನಾನು ನೋಡಿರುವೆ. ಅವರ ಮೇಲೆ ಕೆಲ ಕಾಂಗ್ರೆಸ್ ನಾಯಕರ ಪ್ರಭಾವ ಇದೆ. ಅವರ ಆಡಳಿತ ಮೇಲು ಇದೆ, ರಾಜಕೀಯ ವಿಚಾರದಲ್ಲೂ ಇದೆ. ಅದರ ಒಂದು ಭಾಗವಾಗಿ ಹರಿಪ್ರಸಾದ್ ಅವರು ಮಾತನಾಡಿದ್ದಾರೆ. ಅವರು ಸಂಪೂರ್ಣವಾಗಿ ಮಾತನಾಡಿದ್ರೂ, ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಒಂದು ಗೊತ್ತಾಗುತ್ತದೆ, ಹರಿ ಪ್ರಸಾದ್ ಅವರ ಪ್ರಭಾವ ಹೆಚ್ಚಿದೆ ಎಂದರು. ಇದನ್ನೂ ಓದಿ: ಲೋಕ ಸಮರಕ್ಕೆ ಕಮಲ-ದಳ ದೋಸ್ತಿ; ಅಧಿಕೃತವಾಗಿ ಘೋಷಣೆ ಮಾಡಿದ ದೇವೇಗೌಡ

ನಾನು ಸಿದ್ದರಾಮಯ್ಯ ಆಡಳಿತ ನೋಡಿರುವೆ. ಸಿದ್ದರಾಮಯ್ಯ ಅವರು ಬಹಳ ಇಂಡಿಪೆಂಡೆಂಟ್ ಆಡಳಿತ ಮಾಡಿದ್ದಾರೆ. ಅವರು ಈಗ ಒತ್ತಡದಲ್ಲಿ ಆಡಳಿ ಮಾಡುತ್ತಿದ್ದಾರೆ. ಆಂತರಿಕವಾಗಿ ಬಹಳ ಅಡೆತಡೆಯಲ್ಲಿ ಸಿಎಂ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವರು ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಟ್ರಾನ್ಸ್‌ಫರ್ ದಂಧೆ ಅವರ ಮೂಗಿನ ನೇರಕ್ಕೆ ನಡೆದರೂ ಅವರು ಅಸಹಾಯಕರಾಗಿದ್ದಾರೆ. ರಾಜ್ಯ ಆರ್ಥಿಕ ದಿವಾಳಿ ಆದರೂ ಅವರು ಏನೂ ಮಾಡದ ಪರಿಸ್ಥಿತಿಯಲ್ಲಿ ಇದ್ದಾರೆ. ವರ್ಗಾವಣೆ ಸಿಎಂ ಕಚೇರಿಯಲ್ಲಿ ನಡೆಯುತ್ತಿದ್ದೆ. ಆದರೂ ಅದನ್ನು ತಡೆಯುವಲ್ಲಿ ಸಿಎಂ ವಿಫಲರಾಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಎಸ್‌ವೈ ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣ: ರೇಣುಕಾಚಾರ್ಯ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article