ಟೀಂ ಇಂಡಿಯಾ ಎದುರಿಸಲು ನಮ್ಮ ಬಳಿ ಬಲಿಷ್ಠ ಬೌಲಿಂಗ್‌-ಬ್ಯಾಟಿಂಗ್‌ ಪಡೆ ಇದೆ: ಬಾಬರ್‌ ಆಜಂ

Public TV
2 Min Read
Babar

ಕೊಲಂಬೊ: ಭಾರತ ಮತ್ತು ಪಾಕಿಸ್ತಾನ (INDvsPAK) ನಡುವಿನ ಏಷ್ಯಾಕಪ್ ಟೂರ್ನಿಯ (Asia Cup 2023) ಸೂಪರ್ 4 ಹಂತದ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂಡೋ-ಪಾಕ್‌ ಕದನ ನಡೆಯಲಿದ್ದು, ಈ ಕುರಿತು ಪಾಕ್‌ ತಂಡದ ನಾಯಕ ಬಾಬರ್‌ ಆಜಂ (Babar Azam) ಮಾತನಾಡಿದ್ದಾರೆ. ಇದನ್ನೂ ಓದಿ: ಕೊಲಂಬೋದಲ್ಲಿ ಭಾರತ-ಪಾಕ್ ಹಣಾಹಣಿ; ಇಂದಿನ ಮ್ಯಾಚ್‌ಗೆ ವರುಣನ ಅವಕೃಪೆ ಭೀತಿ

Team India and Pak

ನಾವು ನಮ್ಮ ಆಟಗಾರರನ್ನ ಚೆನ್ನಾಗಿ ರೂಪಿಸಿದ್ದೇವೆ. ಟೀಂ ಇಂಡಿಯಾವನ್ನ (Team India) ಎದುರಿಸಲು ಬಲಿಷ್ಠ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಪಡೆಯನ್ನ ಹೊಂದಿದ್ದೇವೆ. ಒಂದು ವೇಳೆ ಬ್ಯಾಟಿಂಗ್‌ ಆಯ್ದುಕೊಂಡರೆ ಬ್ಯಾಟಿಂಗ್‌ನಲ್ಲಿ, ಬೌಲಿಂಗ್‌ ಆಯ್ದುಕೊಂಡರೆ ಬೌಲಿಂಗ್‌ನಲ್ಲಿ ಟೀಂ ಇಂಡಿಯಾವನ್ನ ಕಟ್ಟಿಹಾಕಲು ಸಿದ್ಧರಾಗಿದ್ದೇವೆ. ಎಲ್ಲದಕ್ಕೂ ನಮ್ಮ ಆಟಗಾರರು ರೆಡಿ ಇದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Asia Cup 2023: ಈ ಬಾರಿ ಪಾಕಿಸ್ತಾನಕ್ಕೆ ಏಷ್ಯಾಕಪ್‌ ಕಿರೀಟ – ಮಾಜಿ ಕ್ರಿಕೆಟಿಗರ ಭವಿಷ್ಯ

ಕಳೆದ ಎರಡು ತಿಂಗಳಿನಿಂದಲೂ ನಾವು ಶ್ರೀಲಂಕಾ ಪಿಚ್‌ನಲ್ಲಿ (Sri Lanka Ground Pitch) ಆಡುತ್ತಿದ್ದೇವೆ. ಟೆಸ್ಟ್‌ ಕ್ರಿಕೆಟ್‌, ಅಫ್ಘಾನಿಸ್ತಾನ ತಂಡದ ವಿರುದ್ಧ ದ್ವಿಪಕ್ಷೀಯ ಸರಣಿ, ನಂತರ ಲಂಕಾ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ್ದೇವೆ. ಆದ್ದರಿಂದ ಪಿಚ್‌ ಪರಿಸ್ಥಿತಿ ನಮಗೆ ಚೆನ್ನಾಗಿ ತಿಳಿದಿದೆ. ಅಲ್ಲದೇ ನಮ್ಮ ತಂಡದಲ್ಲಿ ವೇಗಿಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶಾಹೀನ್‌ ಶಾ ಅಫ್ರಿದಿ, ಹ್ಯಾರಿಸ್‌ ರೌಫ್‌ ಹಾಗೂ ನಸೀಮ್‌ ಶಾ ಕೇವಲ ಮೂರೇ ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನ ಪಡೆದಿದ್ದಾರೆ. ಆದ್ದರಿಂದ ಬೌಲಿಂಗ್, ಬ್ಯಾಟಿಂಗ್‌ ಯಾವುದೇ ಆಯ್ದುಕೊಂಡರೂ ಉತ್ತಮ ಆರಂಭ ನೀಡುವ ನಿರೀಕ್ಷೆ ಹೊಂದಿದ್ದೇವೆ ಎಂದು ಬಾಬರ್‌ ಹೇಳಿದ್ದಾರೆ.

ಏಷ್ಯಾಕಪ್‌ನಲ್ಲಿ ಭಾರತದ್ದೇ ಮೇಲುಗೈ:
ಈವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ 133 ಏಕದಿನ ಪಂದ್ಯಗಳು ನಡೆದಿವೆ. ಭಾರತ 55ರಲ್ಲಿ ಜಯ ಸಾಧಿಸಿದ್ದರೆ, ಪಾಕಿಸ್ತಾನ 73 ಪಂದ್ಯಗಳಲ್ಲಿ ಜಯ ಸಾಧಿಸಿದೆ, 5 ಡ್ರಾನಲ್ಲಿ ಅಂತ್ಯಗೊಂಡಿದೆ. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 7ಕ್ಕೆ 7 ಪಂದ್ಯಗಳಲ್ಲೂ ಭಾರತವೇ ಗೆಲುವು ಸಾಧಿಸಿದೆ. ಇನ್ನೂ 14 ಏಕದಿನ ಏಷ್ಯಾಕಪ್‌ ಟೂರ್ನಿ ಪಂದ್ಯಗಳಲ್ಲಿ ಭಾರತ 7ರಲ್ಲಿ ಗೆಲುವು ಸಾಧಿಸಿದ್ದರೆ ಪಾಕಿಸ್ತಾನ 5ರಲ್ಲಿ ಗೆಲುವು ಸಾಧಿಸಿದೆ, 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article