‘ವೀರಪುತ್ರ’ನಾದ ಅಗ್ನಿಸಾಕ್ಷಿ ವಿಜಯ್‌ ಸೂರ್ಯ- ಮಾಸ್‌ ಲುಕ್‌ನಲ್ಲಿ ಚಾಕೊಲೇಟ್ ಹೀರೋ

Public TV
1 Min Read
vijay suriya

‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್ ಮೂಲಕ ಮನೆ ಮಾತಾದ ನಟ ವಿಜಯ್ ಸೂರ್ಯ (Vijay Suriya) ವೀರಪುತ್ರನಾಗಿ (Veeraputra) ಮನ ಗೆಲ್ಲಲು ಸಜ್ಜಾಗಿದ್ದಾರೆ. ವಿಜಯ್ ಹುಟ್ಟುಹಬ್ಬದ (ಸೆ.7) ಅಂಗವಾಗಿ ಅವರು ನಟಿಸುತ್ತಿರುವ ಹೊಸ ಸಿನಿಮಾ ವೀರಪುತ್ರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಉದ್ದ ಕೂದಲು ಬಿಟ್ಟು, ರಗಡ್ ಅವತಾರದಲ್ಲಿ ಚಾಕೊಲೇಟ್ ಹೀರೋ ಕಾಣಿಸಿಕೊಂಡಿದ್ದಾರೆ.

vijay suriya 1ಡಾ.ದೇವರಾಜ್.ಎಸ್ ವೀರಪುತ್ರ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಎರಡನೇ ಹೆಜ್ಜೆ. ಈ ಹಿಂದೆ ದೇವರಾಜ್ ಸಪ್ಲಿಮೆಂಟರಿ ಎಂಬ ಚಿತ್ರ ನಿರ್ದೇಶಿಸಿದ್ದರು. ಮೆಡಿಕಲ್ ಮಾಫಿಯಾ- ಫ್ಯಾಮಿಲಿ ಕಥಾಹಂದರ ಹೊಂದಿರುವ ವೀರಪುತ್ರ ಸಿನಿಮಾಗೆ ದೇವರಾಜ್ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಸಂಪ್ಲಿಮೆಂಟರಿ, ಧೀರಸಾಮ್ರಾಟ್ ಸಿನಿಮಾಗಳನ್ನು ನಿರ್ಮಿಸಿದ್ದ ಗುರು ಬಂಡಿ ಈ ಚಿತ್ರಕ್ಕೆ ಹಣ ಹಾಕಿದ್ದಾರೆ.

vijay suriya

ಸ್ಟೈಲೀಶ್ ಸ್ಟಾರ್ ವಿಜಯ್ ಸೂರ್ಯ ಜೋಡಿಯಾಗಿ ಲೇಖಚಂದ್ರ (Lekha Chandra) ನಟಿಸುತ್ತಿದ್ದು, ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ಸಂಭಾಷಣೆ, ಜೂಡಾ ಸ್ಯಾಂಡಿ ಸಂಗೀತ, ಸಿ. ರವಿಚಂದ್ರನ್ ಸಂಕಲನ, ಉದಯ್ ಆದಿತ್ಯ ಛಾಯಾಗ್ರಹಣ, ಪ್ರಮೋದ್ ಮರವಂತೆ ಸಾಹಿತ್ಯ ವೀರಪುತ್ರ ಚಿತ್ರಕ್ಕಿದೆ. ಇದನ್ನೂ ಓದಿ:ರಾಜಕೀಯ ಅಖಾಡಕ್ಕೆ ನಟಿ ಸಮಂತಾ- ಯಾವ ಪಕ್ಷಕ್ಕೆ ಎಂಟ್ರಿ?

vijay suriya 2ಬೆಂಗಳೂರು, ಹೈದ್ರಾಬಾದ್‍ನಲ್ಲಿ 60ರಷ್ಟು ಶೂಟಿಂಗ್ ನಡೆಸಲಾಗಿದ್ದು, ಉಳಿದ ಭಾಗದ ಚಿತ್ರೀಕರಣಕ್ಕೆ ಮುಂದಿನ ತಿಂಗಳಿನಿಂದ ಕಿಕ್ ಸ್ಟಾರ್ಟ್ ಸಿಗಲಿದೆ. ಇನ್ನುಳಿದ ತಾರಾಬಳಗದ ಬಗ್ಗೆ ಶೀಘ್ರದಲ್ಲಿಯೇ ಚಿತ್ರತಂಡ ಮತ್ತಷ್ಟು ಅಪ್ ಡೇಟ್ ಕೊಡಲಿದೆ.

ಇಷ್ಟಕಾಮ್ಯ (Istakamya) ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದ ವಿಜಯ್ ಸೂರ್ಯ ಸದ್ಯ ‘ಪ್ರೇಮಲೋಕ’ (Premaloka) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗ ವೀರಪುತ್ರನಾಗಿ ಮತ್ತೆ ಬೆಳ್ಳಿಪರದೆಯಲ್ಲಿ ಮಿನುಗಲು ಸಜ್ಜಾಗ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article