ಬೀಜಿಂಗ್: ಅಮೆರಿಕ ಹಾಗೂ ಚೀನಾ (China) ನಡುವೆ ಹೆಚ್ಚುತ್ತಿರುವ ಪೈಪೋಟಿಯ ಮಧ್ಯೆ ಕ್ಸಿ ಜಿನ್‌ಪಿಂಗ್‌ನ ಸರ್ಕಾರ ಕೆಲ ಅಧಿಕಾರಿಗಳಿಗೆ ಐಫೋನ್ (iPhone) ಬಳಸದಂತೆ ನಿಷೇಧ ಹೇರಿರುವುದಾಗಿ ಬುಧವಾರ ವರದಿಯಾಗಿದೆ.
- Advertisement -
ವರದಿಯ ಪ್ರಕಾರ ಚೀನಾದ ಕೆಲ ಸರ್ಕಾರಿ ಸಿಬ್ಬಂದಿ ಚಾಟ್ ಗ್ರೂಪ್ ಅಥವಾ ಮೀಟಿಂಗ್‌ಗಳಲ್ಲಿ ಐಫೋನ್ ಬಳಕೆಯನ್ನು ನಿಲ್ಲಿಸುವಂತೆ ಸೂಚಿಸಿದೆ. ಆಪಲ್‌ನ (Apple) ಫೋನ್‌ಗಳು ಮತ್ತು ಇತರ ವಿದೇಶಿ ಬ್ರ್ಯಾಂಡ್‌ಗಳ ಸಾಧನಗಳನ್ನು ಸರ್ಕಾರಿ ಕೆಲಸಕ್ಕಾಗಿ ಬಳಸದಂತೆ ಹಾಗೂ ಕಚೇರಿಗೆ ತರದಂತೆ ಕೇಂದ್ರ ಸರ್ಕಾರಿ ಏಜೆನ್ಸಿಗಳ ಅಧಿಕಾರಿಗಳಿಗೆ ಚೀನಾ ಆದೇಶ ನೀಡಿದೆ. ಇದನ್ನೂ ಓದಿ: 41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್
- Advertisement -
- Advertisement -
ಆಪಲ್ ಸಾಧನಗಳಿಗೆ ಅಮೆರಿಕ ಬಳಿಕ ಚೀನಾ 2ನೇ ದೊಡ್ಡ ಮಾರುಕಟ್ಟೆಯಾಗಿದೆ. ಚೀನಾದ ಈ ಕ್ರಮ ವ್ಯಾಪಕವಾಗಿ ಜಾರಿಯಾದಲ್ಲಿ ಕಂಪನಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಇದನ್ನೂ ಓದಿ: ಪಾಕ್, ಚೀನಾಗೆ ಠಕ್ಕರ್ ಕೊಡಲು ʻಇಂದ್ರಜಾಲ್ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್ ಅನಾವರಣ
- Advertisement -
Web Stories