– 3 ದಿನ ಕಾದು ನೋಡಲು ಕಾಡಾ ಸಭೆ ನಿರ್ಧಾರ
ಶಿವಮೊಗ್ಗ: ಭದ್ರಾ ಜಲಾಶಯದಿಂದ (Bhadra Dam) ನಾಲೆಗಳಿಗೆ ನಿರಂತರವಾಗಿ ನೀರು ಹರಿಸದಂತೆ ಆಗ್ರಹಿಸಿ ರೈತರು (Farmers) ಶಿವಮೊಗ್ಗದ (Shivamogga) ಭದ್ರಾ ನೀರಾವರಿ – ಕಾಡಾ (CADA) ಕಚೇರಿ ಮುಂಭಾಗ ಭದ್ರಾವತಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ (Protest) ನಡೆಸಿದರು.
ಸರ್ಕಾರ ಭದ್ರಾ ಜಲಾಶಯದಿಂದ 100 ದಿನಗಳ ಕಾಲ ನೀರು ಹರಿಸುವುದಾಗಿ ತೀರ್ಮಾನ ಮಾಡಿದೆ. ಆದರೆ ಜಲಾಶಯದಲ್ಲಿ ಈಗ ಕೇವಲ 165 ಅಡಿ ನೀರು ಮಾತ್ರ ಇದೆ. ಸತತವಾಗಿ ನೀರು ಹರಿಸಿದರೆ ಪ್ರತಿದಿನ ನಾಲ್ಕು ಇಂಚು ಪ್ರಮಾಣದ ನೀರು ಖಾಲಿ ಆಗುತ್ತದೆ. 80 ದಿನ ಹರಿಸಿದರೆ 30 ಅಡಿ ನೀರು ಖಾಲಿ ಆಗಿ ಜಲಾಶಯದಲ್ಲಿ ನೀರೇ ಇಲ್ಲವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಾಗ ಗುರುತಿಸಿ: ಬೋಸರಾಜು
ಬೇಸಿಗೆಗಳಲ್ಲಿ ತೋಟಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದ್ದು, ಭದ್ರಾ ಅಚ್ಚುಕಟ್ಟು ಆಶ್ರಯದ ಎಲ್ಲಾ ರೈತರ ಬೆಳೆಗಳ ಹಿತವನ್ನು ಕಾಪಾಡಿಕೊಳ್ಳಬೇಕಾಗಿದೆ. ಆದರೆ ಭತ್ತದ ಬೆಳೆಗೆ ನೀರು ಹರಿಸುತ್ತೇವೆ ಎಂದು ಜಲಾಶಯದ ನೀರನ್ನು ಪೋಲು ಮಾಡುತ್ತಿರುವುದು ಸರಿಯಲ್ಲ. ಭತ್ತ ಬೆಳೆಗಾರರು ಮತ್ತು ಅಡಿಕೆ ಬೆಳೆಗಾರರ ಮಧ್ಯೆ ವಿಷದ ಬೀಜ ಬಿತ್ತಿ ಹೊಡೆದಾಡುವಂತೆ ಮಾಡುವುದನ್ನು ಬಿಟ್ಟು ರೈತರ ಹಿತ ಕಾಪಾಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೇಶದ ಹೆಸರು ಬದಲಾವಣೆಗಿಂತ ಜನರ ಬದುಕು ಬದಲಾವಣೆ ಮುಖ್ಯ: ಡಿಕೆಶಿ
ನಿರಂತರವಾಗಿ 100 ದಿನಗಳ ಕಾಲ ನೀರು ಹರಿಸಲು ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಈ ಕೂಡಲೇ ನಾಲೆಗಳಿಗೆ ಹರಿಸುವ ನೀರು ಸ್ಥಗಿತ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು ಕಾವೇರಿ ನೀರಿನ ಸಮರ್ಪಕ ಬಳಕೆ ಮಾಡುತ್ತಿಲ್ಲ – ಸುಪ್ರೀಂನಲ್ಲಿ ಕರ್ನಾಟಕ ಆಕ್ಷೇಪ
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಹೊರಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಳಿಕ ಕಾಡಾ ನೀರಾವರಿ ಸಲಹಾ ಸಮಿತಿ ಸಭೆ ನಡೆದು, ಹಲವು ಚರ್ಚೆಗಳ ಬಳಿಕ ಮೂರು ದಿನ ಕಾದು ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಯಿತು. ಇದನ್ನೂ ಓದಿ: ಸೂರ್ಯ, ಚಂದ್ರ, ಭೂಮಿ ಯಾವಾಗ ಹುಟ್ಟಿದೆ ಅಂತ ಕೇಳೋಕೆ ಆಗುತ್ತಾ? – ಪರಂ ವಿರುದ್ಧ ಮುತಾಲಿಕ್ ಕಿಡಿ
ಮಳೆಯಾಗುವ ನಿರೀಕ್ಷೆಯಲ್ಲಿ ಸಮಿತಿ ಸದಸ್ಯರಿದ್ದು, ಎಡದಂಡೆಗೆ ಹರಿಸುತ್ತಿರುವ ನೀರು ನಿಲ್ಲಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಬಲದಂಡೆಯ ಕೊನೆಯವರೆಗೂ ನೀರು ತಲುಪುವಂತೆ ಹರಿಸಲು ನಿರ್ಧರಿಸಲಾಯಿತಾದರೂ ನೀರಿನ ಪ್ರಮಾಣ ಕಡಿಮೆ ಮಾಡಲು ನಿರ್ಣಯಿಸಲಾಯಿತು. ಮುಂದಿನ ಮೂರು ದಿನಗಳು ಕಾದು ಮುಂದಿನ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ಸಚಿವ ಮಧು ಹೆಗಲಿಗೆ ಹೊರಿಸಲಾಗಿದ್ದು, ಈ ಬಗ್ಗೆ ನೀರಾವರಿ ಸಚಿವ ಡಿಕೆ ಶಿವಕುಮಾರ್ (DK Shivakumar) ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮಧು ಬಂಗಾರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೆ.18-22 ವಿಶೇಷ ಸಂಸತ್ ಅಧಿವೇಶನ- ಪ್ರಮುಖ 9 ವಿಷಯಗಳ ಚರ್ಚೆಗೆ ಸೋನಿಯಾ ಗಾಂಧಿ ಆಗ್ರಹ
Web Stories