ನವದೆಹಲಿ: ಜಿ20 ಶೃಂಗಸಭೆಗೂ ಮುನ್ನ 400 ಎಲೆಕ್ಟ್ರಿಕ್ ಬಸ್‌ಗಳಿಗೆ (Electric Bus) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಚಾಲನೆ ನೀಡಿದ್ದಾರೆ. 400 ಬಸ್‌ಗಳ ಸೇರ್ಪಡೆಯಿಂದ ದೆಹಲಿಯಲ್ಲಿ (Delhi) ಎಲೆಕ್ಟ್ರಿಕ್ ಬಸ್‌ಗಳು 800 ಕ್ಕೂ ಹೆಚ್ಚಾಗಲಿದ್ದು, ಈ ಮೂಲಕ ಭಾರತದಲ್ಲಿ ದೆಹಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಹೊಂದಿದ ನಗರವಾಗಿದೆ.
ದೆಹಲಿ ಸರ್ಕಾರ ಒಟ್ಟು 1,500 ಎಲೆಕ್ಟ್ರಿಕ್ ಬಸ್‌ಗಳನ್ನು ಆರ್ಡರ್ ಮಾಡಿದೆ. ಅವುಗಳಲ್ಲಿ 921 ಬಸ್‌ಗಳು ಎಫ್‌ಎಎಮ್‌ಇ (ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಡಾಪ್ಷನ್ ಮತ್ತು ತಯಾರಿಕೆ) ಯೋಜನೆಯಡಿಯಲ್ಲಿ ಸಬ್ಸಿಡಿಗಳನ್ನು ಪಡೆದಿವೆ. 12 ವರ್ಷಗಳಲ್ಲಿ ಈ 921 ಬಸ್‌ಗಳ ಕಾರ್ಯಾಚರಣೆಯ ವೆಚ್ಚವು 4,091 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರವು 417 ಕೋಟಿ ರೂ.ಗಳನ್ನು ಎಫ್‌ಎಎಮ್‌ಇ ಸಬ್ಸಿಡಿಯಾಗಿ ಒದಗಿಸುತ್ತದೆ ಮತ್ತು ದೆಹಲಿ ಸರ್ಕಾರವು 3,674 ಕೋಟಿ ರೂ.ಗಳನ್ನು ಭರಿಸುತ್ತದೆ.
ಉಳಿದ 579 ಬಸ್‌ಗಳನ್ನು ದೆಹಲಿ ಸರ್ಕಾರವು ಸಂಪೂರ್ಣವಾಗಿ ಖರೀದಿಸುತ್ತದೆ ಮತ್ತು ನಿರ್ವಹಿಸುತ್ತದೆ. ಒಟ್ಟು ವೆಚ್ಚದ 90% ರಷ್ಟು ದೆಹಲಿ ಸರ್ಕಾರ ಮತ್ತು 10% ಕೇಂದ್ರ ಸರ್ಕಾರವು ಫ್‌ಎಎಮ್‌ಇ ಸಬ್ಸಿಡಿಯಾಗಿ ಭರಿಸಲಿದೆ. ದೆಹಲಿಯು ಈಗ 7,135 ಬಸ್‌ಗಳ ಫ್ಲೀಟ್ ಗಾತ್ರವನ್ನು ಹೊಂದಿದೆ. ದೆಹಲಿ ಸಾರಿಗೆ ನಿಗಮದ (ಡಿಟಿಸಿ) ಅಡಿಯಲ್ಲಿ 4,088 ಬಸ್‌ಗಳು ಮತ್ತು ಡಿಐಎಮ್‌ಟಿಎಸ್ (ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್) ಅಡಿಯಲ್ಲಿ 3,047 ಬಸ್‌ಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಬ್ಯಾಲೆನ್ಸ್ ಕಳೆದುಕೊಂಡು ಬಿದ್ರೂ ನಗುತ್ತಲೇ ಎದ್ದು ನಡೆದ ಬಿಹಾರ ಸಿಎಂ
ಸದ್ಯ 800 ಎಲೆಕ್ಟ್ರಿಕ್ ಬಸ್‌ಗಳು ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಎದುರಿಸಲು ಮತ್ತು ಅದರ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ನಗರದ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ. 800 ಎಲೆಕ್ಟ್ರಿಕ್ ಬಸ್‌ಗಳು ವಾರ್ಷಿಕವಾಗಿ ಸುಮಾರು 45,000 ಟನ್ ಸಿಒ2 ಹೊರಸೂಸುವಿಕೆಯನ್ನು ಉಳಿಸುವ ನಿರೀಕ್ಷೆಯಿದೆ. ಇದು ಹಸಿರು ಮತ್ತು ಸ್ವಚ್ಛ ದೆಹಲಿಗೆ ಕೊಡುಗೆ ನೀಡುತ್ತದೆ. 12 ವರ್ಷಗಳ ಜೀವಿತಾವಧಿಯಲ್ಲಿ, ಈ ಬಸ್‌ಗಳು ಒಟ್ಟು 5.4 ಲಕ್ಷ ಟನ್‌ಗಳಷ್ಟು ಸಿಒ2 ಅನ್ನು ಉಳಿಸುತ್ತದೆ ಎಂದು ಅಂದಾಜಿಸಲಾಗಿದೆ.
2023 ರ ಅಂತ್ಯದ ವೇಳೆಗೆ ದೆಹಲಿಯು ತನ್ನ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆಯನ್ನು 1,900 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ಬಸ್‌ಗಳನ್ನು ಹೊಂದಿರುವ ನಗರಗಳಲ್ಲಿ ಒಂದಾಗಲು ಪ್ರಯತ್ನಿಸುತ್ತಿದೆ. 2025 ಕ್ಕೆ ಒಟ್ಟು 10,480 ಬಸ್‌ಗಳನ್ನು ಹೊಂದಲು ಯೋಜಿಸಿದೆ. 80% ರಷ್ಟು ಅಥಾವ 8,280 ಬಸ್‌ಗಳು ಎಲೆಕ್ಟ್ರಿಕ್ ಆಗಿರುತ್ತವೆ. ಈ ಪರಿವರ್ತನೆಯು ವಾರ್ಷಿಕವಾಗಿ 4.67 ಲಕ್ಷ ಟನ್ ಸಿಒ2 ಹೊರಸೂಸುವಿಕೆಯನ್ನು ಉಳಿಸಲು ಯೋಜಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಗರಿಷ್ಠ ತಾಪಮಾನ- 85 ವರ್ಷಗಳಲ್ಲೇ ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚಿನ ಬಿಸಿಲು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]