ಕಾಂಗ್ರೆಸ್‌ ಸೀಮೆಎಣ್ಣೆ ಪಾರ್ಟಿ ಅಂತ ಹೇಳಿದ್ದ ಸಿದ್ದರಾಮಯ್ಯನವರೇ ಈಗ ಯಾರ ಕಾಲ ಕೆಳಗೆ ಇದ್ದೀರಾ?: ಜಿಟಿಡಿ ವಾಗ್ದಾಳಿ

Public TV
2 Min Read
GT Devegowada

ಮೈಸೂರು: ಅಂದು ಕಾಂಗ್ರೆಸ್‌ (Congress) ಸೀಮೆಎಣ್ಣೆ ಪಾರ್ಟಿ, ಬಿಜೆಪಿ ಬೆಂಕಿ ಕಡ್ಡಿ ಪಾರ್ಟಿ ಅಂದವರು ಇವತ್ತು ಯಾರ ಕಾಲ ಕೆಳಗೆ ಇದ್ದೀರಾ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ (GT DeveGowda), ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿನ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರೇ.. ನಾನು ಯಾರ ಸಹವಾಸದಲ್ಲಿದ್ದೆ ಅಂತ ಮೊದಲು ತಿಳಿದುಕೊಳ್ಳಿ. ನಾನು 5 ಬಾರಿ ಗೆದ್ದಿದ್ದೀನಿ. ನೀವೂ ಸೋತಿದ್ದೀರಿ, ರಾಜಶೇಖರ ಮೂರ್ತಿ ವಿರುದ್ಧ, ನನ್ನ ವಿರುದ್ಧ ಸೋತ್ರಿ. 2013 ರಲ್ಲಿ ನನ್ನನ್ನ ಸೋಲಿಸಲು ಬಂದ್ರಿ ಸೋಲಿಸಲು ಆಯ್ತಾ? ನೀವು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಕ್ಫ್ ಬೋರ್ಡ್ ಕಾಯ್ದೆ ರದ್ದು ಮಾಡಿದ್ರೆ ಕೋಟಿ-ಕೋಟಿ ಆಸ್ತಿ ಸರ್ಕಾರಕ್ಕೆ ಉಳಿತಾಯ: ಯತ್ನಾಳ್

GT Devegowada 2

ಕಾಂಗ್ರೆಸ್‌ ಪಕ್ಷವನ್ನ ಅಂದು ಏನಂತ ಬೈದಿದ್ರಿ? ಆವತ್ತು ಕಾಂಗ್ರೆಸ್‌ ಸೀಮೆಎಣ್ಣೆ ಪಾರ್ಟಿ, ಬಿಜೆಪಿ ಬೆಂಕಿಕಡ್ಡಿ ಪಾರ್ಟಿ ಅಂತಾ ಕರೆದ್ರಿ. ಈವಾಗ ಸೀಮೆಎಣ್ಣೆ ಪಾರ್ಟಿಯಲ್ಲೇ ಇಲ್ವಾ? ಅಷ್ಟು ಸಾಲದ್ದಕ್ಕೆ ಅಂದು ಸೋನಿಯಾ ಗಾಂಧಿ ಅವರಿಗೆ ಬೈದಿಲ್ವಾ? ಭಾರತ ದೇಶದಲ್ಲಿ ಪೌರತ್ವವನ್ನೇ ಕೊಡಬಾರದು ಅಂತಾ ಹೇಳಿದ್ರಿ. ಈಗ ಯಾರ ಕಾಲ ಕೆಳಗೆ ಇದ್ದೀರಾ? ಕುಮಾರಸ್ವಾಮಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗೆ ಇಳಿಸಿದ್ದು ಯಾರು? ಯಾರ ಜೊತೆಗೆ ನೀವು ಸೇರಿಕೊಂಡ್ರಿ? ಯಡಿಯೂರಪ್ಪ ‌ಮುಖ್ಯಮಂತ್ರಿ ಆಗಲು ಅವರ ಜೊತೆಗೆ ಸೇರಿರಲಿಲ್ಲವಾ? 1983ರಲ್ಲಿ ನಿಮ್ಮನ್ನ ಗೆಲ್ಲಿಸಿದ ಸಮುದಾಯ ಯಾವುದು? ಗೆಲ್ಲಿಸಿದವರ ಹೆಸರನ್ನೂ ನೀವು ಹೇಳಲಿಲ್ಲ, ನೆನಪು ಸಹ ‌ಮಾಡಿಕೊಂಡಿಲ್ಲ. ನೀವು ಯಾರಿಗೂ ಅಗೌರವ ತೋರಿಸಬೇಡಿ ಎಂದು ಗುಡುಗಿದ್ದಾರೆ.

ನೀವು ಸಿಎಂ ಆಗಿದ್ದೀರಾ? ಒಳ್ಳೆಯ ಬಟ್ಟೆ ಹಾಕಿದವರನ್ನ, ಅಧಿಕಾರ ಮಾಡಿದವರನ್ನು ಸಹಿಸ್ತೀರಾ ನೀವು? ಸುಮ್ಮನೆ ಮಾತಾಡಬೇಡಿ ಸಿದ್ದರಾಮಯ್ಯನವರೇ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: Exclusive: ಅನರ್ಹಗೊಂಡ ಬಳಿಕ ಫಸ್ಟ್ ರಿಯಾಕ್ಷನ್ – ಇದೆಲ್ಲ ದೇವರ ಪರೀಕ್ಷೆ ಎಂದ ಪ್ರಜ್ವಲ್ ರೇವಣ್ಣ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article