ಅಮೆಜಾನ್ ಮ್ಯಾನೇಜರ್ ಹತ್ಯೆ ಕೇಸ್; ಪೊಲೀಸರನ್ನೇ ಬೆಚ್ಚಿ ಬೀಳಿಸಿದ್ದ 18ರ ಯುವಕನ `ಮಾಯಾ ಗ್ಯಾಂಗ್’

Public TV
2 Min Read
Gang 2

– ಯುವಕನಿಗೆ ಬಾಲಿವುಡ್ ಸಿನಿಮಾ ಪ್ರೇರಣೆಯಾಗಿತ್ತು

ನವದೆಹಲಿ: ಇಲ್ಲಿ ನಡೆದ ಅಮೆಜಾನ್ (Amazon) ಕಂಪನಿಯ ಸೀನಿಯರ್ ಮ್ಯಾನೇಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯ ಬಯಲಾಗಿದೆ. ಫಿಲ್ಮಿ ಡೈಲಾಗ್ ಹೇಳ್ಕೊಂಡು, ಇನ್‌ಸ್ಟಾಗ್ರಾಮ್‌ನಲ್ಲಿ ಗನ್ ಹಿಡಿದುಕೊಂಡು ಫೋಸ್ ಕೊಡುತ್ತಾ ಏನೂ ಗೊತ್ತೇಯಿಲ್ಲ ಎನ್ನುವವರಂತೆ ತಿರುಗುತ್ತಿದ್ದ 18 ವರ್ಷದ ಯುವಕನ ಗ್ಯಾಂಗ್ ಈ ಹತ್ಯೆ ಮಾಡಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 2 ಸಾವಿರ ಫಾಲೋವರ್ಸ್ಗಳನ್ನ ಹೊಂದಿರುವ 18ರ ಯುವಕ ಮೊಹಮ್ಮದ್ ಸಮೀರ್ ಅಲಿಯಾಸ್ ಮಾಯಾ, ನಾನು ಕುಖ್ಯಾತಿ, ಸ್ಮಶಾನವೇ ನನ್ನ ವಿಳಾಸ, ಇದು ನನಗೆ ಬದುಕುವ ವಯಸ್ಸು. ಆದ್ರೆ, ನಾನು ಸಾಯಲು ಬಯಸುತ್ತೇನೆ ಎಂದು ಆತ ಬರೆದುಕೊಂಡಿದ್ದಾನೆ. ಇದನ್ನೂ ಓದಿ: ಅಮೆಜಾನ್ ಸೀನಿಯರ್ ಮ್ಯಾನೇಜರ್‌ಗೆ ಗುಂಡಿಟ್ಟು ಹತ್ಯೆ!

ಬಂದೂಕುಗಳನ್ನ ಹಿಡಿದುಕೊಂಡು ಫೋಟೋ ತೆಗೆಸಿಕೊಂಡು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದ ಸಮೀರ್, ಬಾಲಿವುಡ್ ಸಿನಿಮಾಗಳಿಂದ ಪ್ರಭಾವಿತನಾಗಿ 12 ಮಂದಿ ಅಪ್ರಾಪ್ತರನ್ನೂ ಸೇರಿಸಿಕೊಂಡು ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ. ಅದಕ್ಕೆ `ಮಾಯಾ ಗ್ಯಾಂಗ್’ (Maya Gang) ಎಂದೂ ಹೆಸರಿಟ್ಟಿದ್ದ. ಈ ಪ್ರಕರಣದಲ್ಲಿ ಸಿಕ್ಕಿಕೊಳ್ಳುವುದಕ್ಕೂ ಮುನ್ನವೇ ಹಿಂದೆ ನಾಲ್ಕು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈಶಾನ್ಯ ದೆಹಲಿಯ ಪೊಲೀಸರೆ ಈ ಗ್ಯಾಂಗ್ ಕಂಡು ಭಯಭೀತರಾಗಿದ್ದರು ಎಂದು ಹೇಳಲಾಗಿದೆ. ಇದೀಗ ಮ್ಯಾನೇಜರ್ ಹತ್ಯೆಗೆ ಸಂಬಂಧಿಸಿದಂತೆ ಮಾಯಾ ಮತ್ತು ಅವನ 18 ವರ್ಷದ ಸಹವರ್ತಿ ಬಿಲಾಲ್ ಗನಿ ಎಂಬಾತನನ್ನ ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ನೀತಿಗೆ ಬೇಸತ್ತು ತಾಯಿ ಆತ್ಮಹತ್ಯೆ – ಮಕ್ಕಳನ್ನು ಭಾರತಕ್ಕೆ ಕರೆತರಲು ದೆಹಲಿಯಲ್ಲಿ ಪ್ರತಿಭಟನೆ

CRIME

ಏನಿದು ಕೇಸ್?
ಅಮೆಜಾನ್ ಕಂಪನಿಯ ಸೀನಿಯರ್ ಮ್ಯಾನೇಜರ್ ಹರ್ಪ್ರೀತ್‌ ಗಿಲ್ (36) ಎಂಬಾತನನ್ನ ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದ ಘಟನೆ ದೆಹಲಿಯಲ್ಲಿ ನಡೆದಿತ್ತು. ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಆರೋಪಿಗಳಾದ ಮಾಯಾ, ಗನಿ ಮತ್ತು ಅವರ ಸಹಚರರಾದ ಸೊಹೈಲ್ (23), ಮೊಹಮ್ಮದ್ ಜುನೈದ್ (23) ಮತ್ತು ಅದ್ನಾನ್ (19) ಎರಡು ಸ್ಕೂಟರ್‌ಗಳಲ್ಲಿ ಪಾರ್ಟಿ ಮುಗಿಸಿ ಹಿಂದಿರುಗುತ್ತಿದ್ದರು. ಅದೇ ರಸ್ತೆಯಲ್ಲಿ ಗಿಲ್ ಮತ್ತು ಅವನ ಚಿಕ್ಕಪ್ಪ ಗೋವಿಂದ್ ಬರುತ್ತಿದ್ದರು. ರಸ್ತೆಯಲ್ಲಿ ಇವರಿಬ್ಬರ ವಾಹನಗಳು ಮುಖಾಮುಖಿಯಾದ ನಂತರ ದಾರಿ ಬಿಡುವ ವಿಚಾರಕ್ಕೆ ಜಗಳ ಶುರುವಾಗಿದೆ. ಬಳಿಕ ವಿಕೋಪಕ್ಕೆ ತಿರುಗಿ ಮಾಯಾ ಗ್ಯಾಂಗ್ ಹರ್ಪ್ರೀತ್‌ ಗಿಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವನ ಚಿಕ್ಕಪ್ಪ ಗೋವಿಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ಕೆಲವು ಆರೋಪಿಗಳನ್ನ ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲವರು ಸ್ಕೂಟರ್‌ನಲ್ಲಿ ತೆರಳುವಾಗ ಮುಖ ಮುಚ್ಚಿಕೊಂಡಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

Web Stories

Share This Article