Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್

Public TV
1 Min Read
chandrayaan 3 1 3

ನವದೆಹಲಿ: ಭಾರತದ ಹೆಮ್ಮೆಯ ಚಂದ್ರಯಾನ-3 (Chandrayaan-3) ಯಶಸ್ವಿಯಾಗಿ ಚಂದ್ರನ (Moon) ದಕ್ಷಿಣ ಧ್ರುವದಲ್ಲಿ ಇಳಿದು ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ. ಚಂದ್ರನ ಮೇಲ್ಮೈಯಲ್ಲಿ ಅನ್ವೇಷಣೆ ನಡೆಸುತ್ತಿರುವ ಚಂದ್ರಯಾನ-3 ಮಿಷನ್‌ನ ಪೋಟೋಗಳನ್ನು ಇಸ್ರೋ (ISRO) ನಿರಂತರವಾಗಿ ಹಂಚಿಕೊಳ್ಳುತ್ತಿದೆ.

ಬುಧವಾರ ಬೆಳಗ್ಗೆ ಚಂದ್ರಯಾನ ಮಿಷನ್‌ನ ಪ್ರಗ್ಯಾನ್ ರೋವರ್ (Pragyan Rover) ವಿಕ್ರಂ ಲ್ಯಾಂಡರ್‌ನ (Vikram Lander) ಚಿತ್ರವನ್ನು ಕ್ಲಿಕ್ಕಿಸಿದೆ. ಈ ಚಿತ್ರವನ್ನು ಇಸ್ರೋ ತನ್ನ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ‘ಸ್ಮೈಲ್ ಪ್ಲೀಸ್!’ ಇಂದು ಬೆಳಗ್ಗೆ ರೋವರ್ ವಿಕ್ರಮ್ ಲ್ಯಾಂಡರ್‌ನ ಚಿತ್ರವನ್ನು ಕ್ಲಿಕ್ಕಿಸಿದೆ. ರೋವರ್‌ನಲ್ಲಿನ ನ್ಯಾವಿಗೇಷನ್ ಕ್ಯಾಮೆರಾದಿಂದ ಮಿಷನ್‌ನ ಚಿತ್ರವನ್ನು ತೆಗೆಯಲಾಗಿದೆ. ಚಂದ್ರಯಾನ-3 ಮಿಷನ್‌ಗಾಗಿ ನ್ಯಾವಿಗೇಷನ್ ಕ್ಯಾಮೆರಾಗಳನ್ನು ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ (LEOS) ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3

ಚಂದ್ರನ ಅಂಗಳದಲ್ಲಿ ಈಗಾಗಲೇ ಚಂದ್ರಯಾನ-3 ಮಿಷನ್ 5 ದಿನಗಳ ಕಾರ್ಯಾಚರಣೆಯನ್ನು ನಡೆಸಿದೆ. ಈ ಕಾರ್ಯಾಚರಣೆ 14 ದಿನಗಳೊಳಗೆ ಮುಕ್ತಾಯಗೊಳಿಸಬೇಕಿದೆ. ಮಂಗಳವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಇರುವುದು ದೃಢಪಟ್ಟಿದೆ ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: ಹಲವು ವರ್ಷಗಳ ಹೆತ್ತವರ ಕನಸನ್ನು ಸಾಕಾರಗೊಳಿಸಿದ್ದೀರಿ- ಆನಂದ್ ಮಹೀಂದ್ರಾಗೆ ಪ್ರಜ್ಞಾನಂದ ಥ್ಯಾಂಕ್ಸ್

Web Stories

Share This Article