ಶಾರುಖ್ ‘‌ಜವಾನ್ʼ ಕಾಳಗಕ್ಕೆ ಯಶ್- ಪೃಥ್ವಿರಾಜ್ ಸುಕುಮಾರನ್ ಸಾಥ್

Public TV
2 Min Read
yash 1 6

ಶಾರುಖ್ ಖಾನ್ (Sharukh Khan) ಮತ್ತೆ ಕನ್ನಡದ ರಾಕಿಭಾಯ್‌ಗೆ (Rocky Bhai) ಶರಣಾಗಿದ್ದಾರೆ. ಜವಾನ್ ಸಿನಿಮಾ ಕಾಪಾಡು ಎಂದಿದ್ದಾರೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಜವಾನ್ ಸಿನಿಮಾಕ್ಕೂ ಯಶ್‌ಗೂ ಏನು ಸಂಬಂಧ? ಇದೇನಿದು ರಹಸ್ಯ? ಜವಾನ್ ನಿರ್ಮಾಪಕಿ ಗೌರಿ ಖಾನ್‌, ಯಶ್‌ಗೆ (Yash) ಧನ್ಯವಾದ ತಿಳಿಸಿದ್ದೇಕೆ? ಇಲ್ಲಿದೆ ಮಾಹಿತಿ.

sharukh khan

ಶಾರುಖ್‌ಖಾನ್ ‘ಜವಾನ್’ (Jawan) ಇನ್ನೇನು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಮುಂದಿನ ತಿಂಗಳು ವಿಶ್ವಾದ್ಯಂತ ಮೆರವಣಿಗೆ ಹೊರಡಲಿದೆ. ಕನ್ನಡದಲ್ಲೂ ಡಬ್ ಆಗಿ ತೆರೆ ಕಾಣುತ್ತಿದೆ. ಈ ಹೊತ್ತಲ್ಲಿ ಜವಾನ್ ನಿರ್ಮಾಪಕಿ ಗೌರಿ ಖಾನ್, ಯಶ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್‌ಗೂ ಧನ್ಯವಾದ ಎಂದಿದ್ದಾರೆ. ಇದಕ್ಕೆ ಕಾರಣ ಏನು? ಹುಡುಕುತ್ತಾ ಹೊರಟರೆ ಗಾಳಿ ಪಟ ಹಾರುವುದು ಇದು. ಜವಾನ್ ಸಿನಿಮಾದ ಕತೆ ನಿರೂಪಣೆಗೆ ಯಶ್ ಹಿನ್ನೆಲೆ ಧ್ವನಿ ನೀಡಿದ್ದಾರಂತೆ. ಇದನ್ನೂ ಓದಿ:ಸರ್ಕಾರಿ ಭೂಮಿ ಒತ್ತುವರಿ – ಪ್ರಕಾಶ್ ರಾಜ್‌ಗೆ ನೋಟಿಸ್

Yash 2

ಕನ್ನಡದಲ್ಲಿ ಯಶ್ ಹಿನ್ನೆಲೆ ಧ್ವನಿ (Voice) ನೀಡಿದರೆ, ಮಲಯಾಳಂನಲ್ಲಿ(Malyalam) ಇದೆ ಕೆಲಸವನ್ನು ಪೃಥ್ವಿರಾಜ್ ಸುಕುಮಾರನ್‌ (Prithviraj Sukumaran) ಮಾಡಿದ್ದಾರೆ. ಕನ್ನಡದ ಡಬ್ಬಿಂಗ್ ಜವಾನ್‌ನಲ್ಲಿ ಕನ್ನಡದ ಯಶ್ ಧ್ವನಿ ಇದ್ದರೆ ವರ್ಕ್ಔಟ್ ಆಗುತ್ತದೆ ಎನ್ನುವ ನಂಬಿಕೆ. ಅದು ಸತ್ಯ ಕೂಡ. ಕೆಲವು ವರ್ಷಗಳ ಹಿಂದೆ ಶಾರುಖ್ ಅಭಿನಯದ ಜೀರೊ ತೆರೆ ಕಂಡಿತ್ತು. ಅದೇ ದಿನ ಕೆಜಿಎಫ್ ಮೊದಲ ಭಾಗ ಅಖಾಡಕ್ಕಿಳಿದಿತ್ತು. ಶಾರುಖ್ ಮುಂದೆ ಉಳೀತಾರಾ ಯಶ್? ಕಾಲೆಳೆದಿತ್ತು ಬಾಲಿವುಡ್. ಈಗ ಅದೇ ಯಶ್ ಮುಂದೆ ಮಂಡಿ ಊರಿದೆ ಹಿಂದಿ ಸಿನಿಮಾರಂಗ. ಎಲ್ಲವೂ ಕಾಲಾಯ ತಸ್ಮೈ ನಮಃ ಅಷ್ಟೇ ಅಂತಾರೆ ಸಿನಿ ಪಂಡಿತರು.

ಕನ್ನಡದ ಜವಾನ್‌ಗೆ (Jawan Kannada Film) ಯಶ್ ಹಿನ್ನೆಲೆ ಧ್ವನಿ ನೀಡಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಶ್ ಸಿನಿಮಾ ಯಾವಾಗ ನೋಡ್ತಿವೋ ಗೊತ್ತಿಲ್ಲ. ಆದರೆ ಅವರ ಧ್ವನಿ ಕೇಳಲು ಚಿತ್ರಮಂದಿರಕ್ಕೆ ಹೋಗ್ತೀವಿ ಅಂತಿದ್ದಾರೆ ಅಭಿಮಾನಿಗಳು. ಸೆಪ್ಟೆಂಬರ್ 7ಕ್ಕೆ ತೆರೆ ಕಾಣ್ತಿರೋ ಜವಾನ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುತ್ತಾ? ಶಾರುಖ್-ನಯನತಾರಾ(Nayanatara) ನಟನೆ, ಯಶ್ ಕಂಠ ಸಿರಿ ಎಲ್ಲವೂ ಮೋಡಿ ಮಾಡುತ್ತಾ? ಕಾಯಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article