ಬಹುಕಾಲದ ಗೆಳತಿ ಜೊತೆ ಎಂಗೇಜ್‌ ಆದ ಸಿಂಗರ್ ಅರ್ಮಾನ್ ಮಲಿಕ್

Public TV
1 Min Read
armaan mallik

ನ್ನಡ ಮತ್ತು ಬಹುಭಾಷೆಗಳಲ್ಲಿ ತಮ್ಮ ಸುಮಧುರ ಹಾಡಿನ ಮೂಲಕ ಮೋಡಿ ಮಾಡ್ತಿರುವ ಸಿಂಗರ್ ಅರ್ಮಾನ್ ಮಲಿಕ್ (Armaan Malik) ಎಂಗೇಜ್ ಆಗಿದ್ದಾರೆ. ಬಹುಕಾಲದ ಗೆಳತಿ ಆಶ್ನಾ ಶ್ರಾಫ್ (Aashna Shroff) ಜೊತೆ ಇಂದು (ಆಗಸ್ಟ್ 28) ಎಂಗೇಜ್‌ಮೆಂಟ್ (Engagement)  ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳನ್ನ ಸಿಂಗರ್ ಅರ್ಮಾನ್ ಹಂಚಿಕೊಂಡಿದ್ದಾರೆ.

armaan mallik 1

ಸಾಕಷ್ಟು ಸಮಯದಿಂದ ಆಶ್ನಾ- ಅರ್ಮಾನ್ ಡೇಟಿಂಗ್ ಮಾಡುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಎಂಗೇಜ್ ಆಗಿದ್ದಾರೆ. ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಶ್ನಾ ಜೊತೆಗೆ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಟ್ರೆಂಡಿಂಗ್ ಬಗ್ಗೆಯೇ ಹಾಡು ಮಾಡಿದ ‘ಸೂತ್ರಧಾರಿ’ ಚಂದನ್ ಶೆಟ್ಟಿ

armaan mallik 2

ಗೆಳತಿ ಆಶ್ನಾಗೆ (Aashna Shroff) ಮಂಡಿಯೂರಿ ಬೆರಳಿಗೆ ಉಂಗುರ ತೊಡಿಸುತ್ತಿರುವ ಅರ್ಮಾನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಈ ಬಗ್ಗೆ ಸ್ವತಃ ಸಿಂಗರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಎಂಗೇಜ್‌ಮೆಂಟ್ ಫೋಟೋ ಶೇರ್ ಮಾಡುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ.

ಮುಂಗಾರು ಮಳೆ 2 (Mungaru Male 2) ಚಿತ್ರದ ಸರಿಯಾಗಿ ನೆನಪಿದೆ ನನಗೆ ಸಾಂಗ್, ಚಕ್ರವರ್ತಿ ಚಿತ್ರದ ಒಂದು ಮಳೆಬಿಲ್ಲು, ಎಕ್ ಲವ್ ಯಾ ಚಿತ್ರದ ಯಾರೇ ಯಾರೇ ಸಾಂಗ್ ಸೇರಿದಂತೆ ಕನ್ನಡದ ಸಾಕಷ್ಟು ಹಾಡುಗಳಿಗೆ ಅರ್ಮಾನ್ ಧ್ವನಿಯಾಗಿದ್ದಾರೆ. ಹಲವು ಸೂಪರ್ ಹಿಟ್ ಸಾಂಗ್‌ಗಳನ್ನ ಅರ್ಮಾನ್ ಮಲಿಕ್ ನೀಡಿದ್ದಾರೆ.

Share This Article