ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದ ವಧು – ಮುರಿದು ಬಿತ್ತು ಮದುವೆ

Public TV
1 Min Read
bride 3

ತುಮಕೂರು: ತಾಳಿ ಕಟ್ಟುವ ವೇಳೆ ಬಂದಾಗ ವಧು (Bride) ಹಸೆಮಣೆಯಿಂದ ಎದ್ದಿದ್ದು, ಬಳಿಕ ಮದುವೆಯೇ (Wedding) ಕ್ಯಾನ್ಸಲ್ ಆಗಿರುವ ಘಟನೆ ತುಮಕೂರಿನಲ್ಲಿ (Tumkur) ನಡೆದಿದೆ.

ಸುಮಾ (ಹೆಸರು ಬದಲಿಸಲಾಗಿದೆ) ಮದುವೆ ಬೇಡ ಎಂದು ಹಸೆಮಣೆಯಿಂದ ಮೇಲೆದ್ದ ವಧು. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದ ಹಿನ್ನೆಲೆ ಯುವತಿ ಮದುವೆಯನ್ನು ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡಿದ್ದಾಳೆ.

wedding

ಕಳೆದ ರಾತ್ರಿ ನಡೆದ ರಿಸೆಪ್ಶನ್‌ನಲ್ಲಿ ಯುವತಿ ನಗುತ್ತಲೇ ಫೋಟೋಗಳಿಗೆ ಪೋಸ್ ನೀಡಿದ್ದಳು. ಆದರೆ ಬೆಳಗ್ಗೆ ಮದುವೆಯ ಮುಹೂರ್ತ ಹತ್ತಿರವಾಗುತ್ತಲೇ ಮದುವೆ ಬೇಡ ಎಂದಿದ್ದಾಳೆ. ವಧು ಉಲ್ಟಾ ಹೊಡೆಯುತ್ತಲೇ ಕಲ್ಯಾಣ ಮಂಟಪದಲ್ಲಿ ಗದ್ದಲ ಏರ್ಪಟ್ಟಿದೆ. ಇದನ್ನೂ ಓದಿ: ವಿಮಾನದಲ್ಲಿ ಬಂದು ದುಬಾರಿ ಸೀರೆ ಕದ್ದು ಪರಾರಿಯಾಗ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಅರೆಸ್ಟ್

ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಕೊಳಾಲ ಪೊಲೀಸ್ ಠಾಣೆಯಲ್ಲಿ ಮಾತುಕತೆ ಮೂಲಕ ಇತ್ಯರ್ಥಗೊಳಿಸಲಾಗಿದೆ. ಇದನ್ನೂ ಓದಿ: ಬಾಣಂತಿ, ಶಿಶುವಿಗೆ ಚಿಕಿತ್ಸೆ ನಿರ್ಲಕ್ಷ್ಯ – ಪ್ರಶ್ನೆ ಮಾಡಿದ್ದಕ್ಕೆ ರೌಡಿ ರೀತಿ ವರ್ತಿಸಿದ ಜಿಲ್ಲಾಸ್ಪತ್ರೆ ವೈದ್ಯ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article